ಖುಷ್ಬು “ಹಳೆ ಪಾತ್ರೆ” ನನ್ನ ಹೆಂಡತಿನೇ ಸುಂದರಿ! ಎಂದು ಹೇಳಿಕೆ ಕೊಟ್ಟ ಡಿ ಎಂ ಕೆ ಮಾಜಿ ವಕ್ತಾರ ಶಿವಾಜಿ ಕೃಷ್ಣಮೂರ್ತಿ ಅರೆಸ್ಟ್

ಡಿ ಎಂ ಕೆ ಮಾಜಿ ವಕ್ತಾರ ಶಿವಾಜಿ ಕೃಷ್ಣಮೂರ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯೆ ಖುಷ್ಬು ಸುಂದರ(Khushboo Sundar), ತಮಿಳುನಾಡು ರಾಜ್ಯಪಾಲ RN ರವಿ ವಿರುದ್ಧ ಅವಹೇಳನಕಾರಿ ಮಾತುಗಳಿಗೆ ಸಂಬಂಧಪಟ್ಟಂತೆ ಶಿವಾಜಿ ಕೃಷ್ಣಮೂರ್ತಿ ಅವರನ್ನು ಅರೆಸ್ಟ್ ಮಾಡಲಾಗಿದೆ ಪಕ್ಷದಿಂದ ಉಚ್ಚಾಟಿಸಿದ ಮೇಲೆ ಶಿವಾಜಿ ಕೃಷ್ಣಮೂರ್ತಿ(Shivaji Krishnamurthy) ರವರನ್ನು ಪೊಲೀಸರು ಬಂಧಿಸಿದ್ದಾರೆ.

 

 

ಡಿ ಎಂ ಕೆ ಕಾರ್ಯಕ್ರಮದಲ್ಲಿ ಮಾತನಾಡಿದ ಶಿವಾಜಿ ಕೃಷ್ಣಮೂರ್ತಿ ನನ್ನ ಹೆಂಡತಿ ಸುಂದರವಾಗಿದ್ದಾಳೆ. ನನ್ನ ಹೆಂಡತಿ ಸೌಂದರ್ಯವತಿ ಎಂದು ಸ್ನೇಹಿತರೆಲ್ಲರೂ ಹೇಳುತ್ತಾರೆ. ಖುಷ್ಬೂ ರೂಪವಂತೆ ಎಂದು ಹಲವರು ಹೇಳುತ್ತಾರೆ ಆದರೆ ನನ್ನ ಹೆಂಡತಿ ಬಿಜೆಪಿ ನಾಯಕಿ ಖುಷ್ಬು ಅವರ ರೀತಿ ಕೆಟ್ಟದಾಗಿ ನಡೆಯುವುದಿಲ್ಲ ಖುಶ್ಬುಗಿಂತ ನನ್ನ ಹೆಂಡತಿ ಸುಂದರಿ ಎಂದು ಹೇಳಿದ್ದಾರೆ.

 

 

ಖುಷ್ಬು ರೂಪ ಹಾಗೂ ನಡಿಗೆ ಬಗ್ಗೆ ಶಿವಾಜಿ ಕೃಷ್ಣಮೂರ್ತಿ ಕೆಟ್ಟದಾದ ಮಾತನಾಡಿದ್ದಾರೆ. ಈ ರೀತಿ ಶಿವಾಜಿ ಕೃಷ್ಣಮೂರ್ತಿ ಮಾತನಾಡಿರುವುದು ತೀವ್ರ ಟೀಕೆಗೆ ಗುರಿಯಾಗಿದೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಖುಷ್ಬೂ ಕೂಡ ಡಿ ಎಂ ಕೆ ವಕ್ತಾರನ ಮಾತು ಕೇಳಿ ಕಣ್ಣೀರು ಹಾಕುತ್ತಾ ತೀವ್ರವಾಗಿ ಖಂಡಿಸಿದ್ದಾರೆ.

 

 

ತಮಿಳುನಾಡು ಸಿಎಂ ಎಂ ಕೆ ಸ್ಟಾಲಿನ್(MK Stalin) ರವರು ಇದರ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ. ಅಷ್ಟೇ ಅಲ್ಲದೆ ಮಹಿಳೆಯರ ಬಗ್ಗೆ ಚೀಪ್ ಆಗಿ ಕಮೆಂಟ್ ಮಾಡುವುದು ಒಳ್ಳೆಯದಲ್ಲ ಇದು ಡಿಎಂಕೆ ಸದಸ್ಯರ ಸಂಸ್ಕೃತಿಯನ್ನು ಪ್ರತಿಬಿಂಬಿಸುತ್ತದೆ. ನಿಮ್ಮ ತಂದೆ ಡಿಎಂಕೆ ಪಕ್ಷದ ಅಧಿನಾಯಕ ನಿಮ್ಮ ತಂದೆಯವರು ನನಗೆ ಕಲಿಸಿದ ಪಾಠ ಇದೇನಾ? ಮಹಿಳೆಯರಿಗೆ ಕೊಡುವ ಗೌರವ ಇದೆನಾ? ಎಂದು ಖುಷ್ಬು ಸುಂದರ್ ಪ್ರಶ್ನೆಸಿದ್ದಾರೆ.ಡಿ ಎಂ ಕೆ ಮಾಜಿ ವಕ್ತಾರ ಶಿವಾಜಿ ಕೃಷ್ಣಮೂರ್ತಿಯನ್ನು ಪಕ್ಷದಿಂದ ವಜಾ ಗೊಳಿಸಲಾಗಿದೆ ಖುಷ್ಬೂ ಸೌಂದರ್ಯದ ಭಾಷಣ ರಾಜಕೀಯದ ಸಾಕಷ್ಟು ಕೆಸರು ಎರಚಾಟಕ್ಕೆ ಸಾಕ್ಷಿಯಾಗಿದೆ