ಸ್ಟೇಜ್ ಮೇಲೆ ಮುತ್ತಿನ ಮಳೆ ಸುರಿಸಿದ ನರೇಶ್ ಪವಿತ್ರ; ಭೂಕಂಪವಾದರೂ ಆಕಾಶ ಮೈಮೇಲೆ ಬಿದ್ದರೂ ಜೊತೆಗಿರ್ತೀವಿ ಎಂದ ಜೋಡಿ

ತೆಲುಗು ನಟ ನರೇಶ್ ಹಾಗೂ ಲೋಕೇಶ್ ಪ್ರೇಮ ಕಥೆಯ ಬಗ್ಗೆ ಎಲ್ಲರಿಗೂ ಗೊತ್ತಿದೆ. ಇತ್ತೀಚಿಗಷ್ಟೇ “ಮಳ್ಳಿ ಪೆಳ್ಳಿ” ಸಿನಿಮಾದ ಹಾಗೂ ಟ್ರೈಲರ್ ಕಾರ್ಯಕ್ರಮವನ್ನು ಕೂಡ ಮಾಡಿ ಮುಗಿಸಿದ್ದಾರೆ. ಸಿನಿಮಾ ಕೂಡ ರಿಲೀಸ್ ಆಗಿದೆ. ಮಳ್ಳಿ ಪೆಳ್ಳಿ ಸಿನಿಮಾ ಪವಿತ್ರ ಲೋಕೇಶ್ ನರೇಶ್ ರವರ ನಿಜ ಜೀವನದ ಕಥೆಯಾಗಿದೆ. ಈ ಚಿತ್ರಕಥೆಯಲ್ಲಿ ಪವಿತ್ರ ಲೋಕೇಶ್ ಹಾಗೂ ನರೇಶ್ ಇಬ್ಬರು ತಮ್ಮ ತಮ್ಮ ಪಾತ್ರಗಳನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ.

ಈ ಹಿಂದೆ ಪವಿತ್ರ ಲೋಕೇಶ್ ಹಾಗು ನರೇಶ್ ರವರ ಸಂಬಂಧದ ಬಗ್ಗೆ ಸಾಕಷ್ಟು ವಿವಾದಗಳು ಎದ್ದಿದ್ದವು ನರೇಶ್ ರವರ ಮೂರನೇ ಪತ್ನಿ ರಮ್ಯ ರಘುಪತಿ ಈ ಕುರಿತು ಸಾಕಷ್ಟು ವಾದ ಪ್ರತಿ ವಾದಗಳನ್ನು ಮಂಡಿಸಿದರು, ಇದೀಗ ನರೇಶ್ ತಾನು ಪವಿತ್ರ ಲೋಕೇಶ್ ಜೊತೆ ಮದುವೆಯಾಗುತ್ತೇನೆ ಎಂದು ರಮ್ಯಾ ರಘುಪತಿ ರವರನ್ನು ಕೇಳಿ ಕೋರ್ಟ್ ಮೆಟ್ಟಿಲೇರಿದ್ದಾರೆ.

ಅಷ್ಟೇ ಅಲ್ಲದೆ ಹಿಂದೆ ಹೋಟೆಲ್ ರೂಮಿನಲ್ಲಿ ಪವಿತ್ರ ಲೋಕೇಶ್ ಹಾಗೂ ನರೇಶ್ ಒಟ್ಟಿಗೆ ರೆಡ್ ಹ್ಯಾಂಡ್ ಆಗಿ ನರೇಶ್ ರವರ ಮೂರನೇ ಪತ್ನಿ ರಮ್ಯಾ ರಘುಪತಿ ರವರ ಕೈಗೆ ಸಿಕ್ಕಿಬಿದ್ದರು ಈ ಕುರಿತು ಮೀಡಿಯಾದಲ್ಲಿ ಹಲವಾರು ವರದಿಗಳು ಪ್ರಕಟವಾಗಿದ್ದವು ಇವನ್ನೆಲ್ಲ ತಳ್ಳಿ ಹಾಕಿದ ಪವಿತ್ರ ಲೋಕೇಶ್ ಹಾಗೂ ನರೇಶ್ ನಾವಿಬ್ಬರು ಉತ್ತಮ ಸ್ನೇಹಿತರು ಎಂದು ಹೇಳಿಕೊಂಡಿದ್ದರು

ಇದೇ ಹೊಸ ವರ್ಷದಂದು ಪವಿತ್ರ ಲೋಕೇಶ್ ಹಾಗೂ ನರೇಶ್ ಲಿಪ್ ಲಾಕ್ ವಿಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹರಿಬಿಟ್ಟು ತಾವಿಬ್ಬರು ಮದುವೆ ಆಗುವುದಾಗಿ ತಿಳಿಸಿದರು ನಂತರ ಮದುವೆಯಾದ ವಿಡಿಯೋ ಹನಿಮೂನಿಗೆ ಹೋಗಿ ಬಂದ ವಿಡಿಯೋ ಎಲ್ಲವನ್ನು ಹಂಚಿಕೊಂಡಿದ್ದರು. ಇದರಿಂದ ತಿಳಿದು ಬಂದಿರುವುದು ಏನೆಂದರೆ, ಇವರಿಬ್ಬರು “ಮಳ್ಳಿ ಪೆಳ್ಳಿ” ಸಿನಿಮಾದ ಪ್ರಚಾರಕ್ಕಾಗಿ ಈ ರೀತಿ ಗಿಮಿಕ್ ಮಾಡಿದ್ದಾರೆ.

 

 

ಇತ್ತೀಚೆಗೆ ಇವರಿಬ್ಬರು ಸಿಕ್ಸ್ತ್ ಸೆನ್ಸ್ ಕಾರ್ಯಕ್ರಮದಲ್ಲಿ ಭಾಗಿಯಾಗಿ ತುಂಬಾ ರೋಮ್ಯಾಂಟಿಕ್ ಆಗಿ ಕಾಣಿಸಿಕೊಂಡಿದ್ದಾರೆ. ಸ್ಟೇಜ್ ಮೇಲೆ ಮುತ್ತುಗಳ ಮಳೆಯನ್ನು ಸುರಿಸಿದ್ದಾರೆ. ಮಳ್ಳಿ ಪೆಳ್ಳಿ ಚಿತ್ರದಲ್ಲಿ ತಮ್ಮ ನಿಜ ಜೀವನದ ಕಥೆಯನ್ನು ಹೇಳುತ್ತೇವೆ ಇದು ಓಲ್ಡ್ ಏಜ್ ಲವ್ ಸ್ಟೋರಿ ಇದರಲ್ಲಿ ಹೋಟೆಲ್ ಸೀನ್ ಕೂಡ ರಿಕ್ರಿಯೇಟ್ ಮಾಡಿದ್ದೇವೆ ನಾವಿಬ್ಬರೂ ಭೂಕಂಪವಾದರೂ ಆಕಾಶ ನಮ್ಮ ತಲೆ ಮೇಲೆ ಬಿದ್ದರೂ ದೂರ ಆಗುವುದಿಲ್ಲ ಎಂದು ಹೇಳಿಕೊಂಡಿದ್ದಾರೆ.