ತೆಲುಗು ನಿರೂಪಕಿ, ನಟಿ ಅನುಸೂಯ ಭಾರಧ್ವಜ್ ಮತ್ತೆ ಬಿಕಿನಿ ಫೋಟೊಗಳನ್ನು ಶೇರ್ ಮಾಡಿದ್ದಾರೆ. ತುಂಡುಡುಗೆಯಲ್ಲಿ ಬಿಂದಾಸ್ ಪೋಸ್ ಕೊಟ್ಟು ಸೋಶಿಯಲ್ ಮೀಡಿಯಾಗೆ ಕಿಚ್ಚು ಹಚ್ಚಿದ್ದಾರೆ. ಫ್ಯಾಮಿಲಿ ಸಮೇತ ಅನು ಇತ್ತೀಚೆಗೆ ಪ್ರವಾಸಕ್ಕೆ ಹೋಗಿದ್ದರು. ಆ ಸಮಯದಲ್ಲಿ ತೆಗೆದ ಫೋಟೊಗಳನ್ನು ಒಂದೊಂದಾಗಿ ಶೇರ್ ಮಾಡುತ್ತಿದ್ದಾರೆ. ಅದರಲ್ಲೂ ಆಕೆಯ ಬಿಕಿನಿ ಫೋಟೊ ವಿಡಿಯೋಗಳು ಸದ್ದು ಮಾಡಿದ್ದವು.
‘ಜಬರ್ದಸ್ತ್’ ಕಾಮಿಡಿ ಶೋ ನಿರೂಪಕಿಯಾಗಿ ಅನಸೂಯ ಮೊದಲಿಗೆ ಜನಪ್ರಿಯತೆ ಗಳಿಸಿದರು. ನಂತರ ರಾಮ್‌ಚರಣ್ ನಟನೆಯ ‘ರಂಗಸ್ಥಳಂ’ ಚಿತ್ರದ ರಂಗಮ್ಮತ್ತ ಪಾತ್ರ ಮಾಡಿ ಹೆಚ್ಚು ಗಮನ ಸೆಳೆದರು. ಅಲ್ಲಿಂದ ಮುಂದೆ ಹೆಚ್ಚು ಹೆಚ್ಚು ಸಿನಿಮಾಗಳಲ್ಲಿ ನಟಿಸಲು ಆರಂಭಿಸಿದರು. ಇತ್ತೀಚೆಗೆ ಕಿರುತೆರೆಗೆ ಗುಡ್‌ಬೈ ಹೇಳಿಬಿಟ್ಟಿದ್ದಾರೆ. ಇನ್ನು ವಿಜಯ್ ದೇವರಕೊಂಡ ಜೊತೆಗಿನ ಕಿರಿಕ್‌ನಿಂದಲೂ ಸುದ್ದಿಯಲ್ಲಿದ್ದಾರೆ. ಆದರೆ ವಿಜಯ್ ಈ ಬಗ್ಗೆ ಪ್ರತಿಕ್ರಿಯಿಸಿಲ್ಲ. ಆತನ ಅಭಿಮಾನಿಗಳು ಅನಸೂಯನ ಟ್ರೋಲ್ ಮಾಡ್ತಿದ್ದಾರೆ.
ಅನಸೂಯ ಈ ಹಿಂದೆ ಕೂಡ ಬೋಲ್ಡ್ ಫೋಟೊ ಶೂಟ್‌ಗಳಲ್ಲಿ ಕಾಣಿಸಿಕೊಂಡಿದ್ದಿದೆ. ಆದರೆ ಬಿಕಿನಿಯಲ್ಲಿ ಇತ್ತೀಚೆಗೆ ಹೆಚ್ಚು ಹೆಚ್ಚು ದರ್ಶನ ಕೊಡುತ್ತಿದ್ದಾರೆ. ಇತ್ತೀಚೆಗೆ ಫ್ಯಾಮಿಲಿ ಜೊತೆ ಥಾಯ್ಲೆಂಡ್ ಟೂರ್ ಹೋಗಿದ್ದ ವೇಳೆ ಸಾಗರದ ದಡದಲ್ಲಿ ತುಂಡುಡುಗೆಯಲ್ಲಿ ಮಿಂಚಿದ್ದಾರೆ. ಇದು ಅನು ಆ ಫೋಟೊಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುವ ಧೈರ್ಯ ಕೂಡ ಮಾಡುತ್ತಿದ್ದಾರೆ.
ಬಿಕಿನಿಯಲ್ಲಿ ಕಣ್ಣಮುಚ್ಚಾಲೆ
ಬಿಳಿ ಬಣ್ಣದ ಬಿಕಿನಿ ತೊಟ್ಟು ಕಾಣಿಸಿಕೊಂಡಿರುವ ವಿಡಿಯೋಗಳನ್ನು ಇತ್ತೀಚೆಗೆ ಅನುಸೂಯ ಶೇರ್ ಮಾಡಿದ್ದರು. ಆದರೆ ಅದರಲ್ಲಿ ಸಂಪೂರ್ಣವಾಗಿ ಕ್ಯಾಮರಾ ಮುಂದೆ ಪೋಸ್ ಕೊಟ್ಟಿರಲಿಲ್ಲ. ಬಿಕಿನಿ ತೊಟ್ಟಿರುವುದನ್ನು ತೋರಿಸಿಯು ತೋರಿಸಿದಂತೆ ಕ್ಯಾಮರಾ ಮುಂದೆ ಅಡ್ಡಾಡಿದ್ದರು. ಅಭಿಮಾನಿಗಳು ಕಂಪ್ಲೀ ಬಿಕಿನಿ ಫೋಟೊ ಶೇರ್ ಮಾಡಿ ಮೇಡಂ ಎಂದು ಕಾಮೆಂಟ್ ಮಾಡುತ್ತಿದ್ದರು. ಇದೀಗ ಅಭಿಮಾನಿಗಳ ಬೇಡಿಕೆಯಂತೆ ಹಾಟ್ ಹೆಚ್‌ಡಿ ಫೋಟೊಗಳನ್ನು ತೇಲಿ ಬಿಟ್ಟಿದ್ದಾರೆ.
ಹಾಟ್ ಫೋಟೋಗಳು ವೈರಲ್
ಅನುಸೂಯ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿರುವ ಫೋಟೊಗಳು ಸಖತ್ ವೈರಲ್ ಆಗ್ತಿದೆ. ಅಭಿಮಾನಿಗಳು ಲೈಕ್ಸ್, ಕಾಮೆಂಟ್ಸ್ ಮೂಲಕ ಮೆಚ್ಚುಗೆ ಸೂಚಿಸುತ್ತಿದ್ದಾರೆ. ಸಾಗರ ತೀರದಲ್ಲಿ ಈಜುಡುಗೆ ತೊಟ್ಟು ನೀರಿನಲ್ಲಿ ಆಟವಾಡುತ್ತಾ ಬೋಲ್ಡ್ ಆಗಿ ಅನುಸೂಯಾ ಕ್ಯಾಮರಾಗೆ ಪೋಸ್ ಕೊಟ್ಟಿದ್ದಾರೆ. ಎದೆ ಸೀಳು, ತೊಡೆ, ಹೊಕ್ಕಳು ತೋರಿಸುತ್ತಾ ಪಡ್ಡೆ ಹುಡುಗರ ನಿದ್ದೆ ಕೆಡಿಸಿದ್ದಾರೆ. ಸ್ವತಃ ತಮ್ಮ ಪತಿ ಸುಸಂಕ್ ಭಾರಧ್ವಜ್ ಈ ಫೋಟೊಗಳನ್ನು ಕ್ಲಿಕ್ಕಿಸಿರುವುದಾಗಿ ಬರೆದುಕೊಂಡಿದ್ದಾರೆ.
ಬರೀ ಕೊಬ್ಬು ಎಂದ ನೆಟ್ಟಿಗ
ಅನಸೂಯ ಬಿಕಿನಿ ಫೋಟೊಗಳಿಗೆ ತರಹೇವಾರಿ ಕಾಮೆಂಟ್ಸ್ ಬಂದಿದೆ. ಅದರಲ್ಲಿ ನೆಟ್ಟಿಗನೊಬ್ಬ “ಕೊಬ್ಬು ಬಿಟ್ಟು ಬೇರೇನು ಇಲ್ಲ” ಎಂದು ವ್ಯಂಗ್ಯವಾಗಿ ಕಾಮೆಂಟ್ ಮಾಡಿದ್ದಾನೆ. ಇದಕ್ಕೆ ಪ್ರತಿಕ್ರಿಯಿಸಿರುವ ಅನಸೂಯ “ಅಂತದ್ದೇನಿದೆ? ನಿಮಗೆ ಕೊಬ್ಬು ಇರುವಂತೆ ಮಾತನಾಡುತ್ತಿದ್ದೀರಾ ಅಲ್ವಾ?” ಎಂದು ತಿರುಗೇಟು ನೀಡಿದ್ದಾರೆ. ಸದ್ಯ ಈ ಕಾಮೆಂಟ್‌ಗಳ ಬಗ್ಗೆ ಕೂಡ ಸಾಕಷ್ಟು ಚರ್ಚೆ ಆಗುತ್ತಿದೆ. ಒಟ್ನಲ್ಲಿ ಅನುಸೂಯ ಬಿಕಿನಿ ಫೊಟೊಗಳಂತೂ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಸದ್ದು ಮಾಡ್ತಿದೆ.
‘ಪುಷ್ಪ’- 2 ಚಿತ್ರದಲ್ಲೂ ನಟನೆ
ಅನಸೂಯ ಭಾರಧ್ವಜ್ ಅಲ್ಲು ಅರ್ಜುನ್ ನಟನೆಯ ‘ಪುಷ್ಪ’ ಚಿತ್ರದಲ್ಲಿ ನೆಗೆಟಿವ್ ರೋಲ್ ಪ್ಲೇ ಮಾಡಿದ್ದರು. ಸೀಕ್ವೆಲ್‌ನಲ್ಲೂ ಆ ಪಾತ್ರ ಮುಂದುವರೆಸಿದ್ದಾರೆ. ಇನ್ನುಳಿದಂತೆ ಆಕೆ ನಟಿಸಿರುವ ‘ರಂಗಮಾರ್ತಾಂಡ’ ಹಾಗೂ ‘ವಿಮಾನಂ’ ಸಿನಿಮಾಗಳು ಇತ್ತೀಚೆಗೆ ಬಿಡುಗಡೆ ಆಗಿತ್ತು. ‘ಪುಷ್ಪ- 2’ ಜೊತೆಗೆ ‘ಫ್ಲಾಶ್‌ಬ್ಯಾಕ್’ ಎನ್ನುವ ತಮಿಳು ಚಿತ್ರದಲ್ಲೂ ಬಣ್ಣ ಹಚ್ಚಿದ್ದಾರೆ.