Olle hudga pratham engagement : ಬಿಗ್ ಬಾಸ್ ಸೀಸನ್ 4 (Big Boss Sisan 4) ರ ಸ್ಪರ್ಧಿ ಒಳ್ಳೆ ಹುಡುಗ ಪ್ರಥಮ್ (Pratham) ಅವರು ತನ್ನ ನೇರ ನುಡಿಯಿಂದಲೇ ಸಾಕಷ್ಟು ಸುದ್ದಿಯಲ್ಲಿರುತ್ತಾರೆ. ಅದಲ್ಲದೆ ಈಗಾಗಲೇ ಬೆಳ್ಳಿತೆರೆಯಲ್ಲಿ ಸಕ್ರಿಯರಾಗಿದ್ದು ಸೋಶಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿದ್ದಾರೆ. ದೇವರಂಥಾ ಮನುಷ್ಯ (Devarantha Manushya), ರಾಜು ಕನ್ನಡ ಮೀಡಿಯಂ (Raju Kannada Medium), ನಟ ಭಯಂಕರ (Nata Bhayankara), ಸಿನಿಮಾಗಳಲ್ಲಿ ಪ್ರಥಮ್ ನಾಯಕನಾಗಿ ನಟಿಸಿದ್ದರು.
ಸದ್ಯಕ್ಕೆ ಪ್ರಥಮ್ ಗುಡ್ ನ್ಯೂಸ್ ವೊಂದನ್ನು ನೀಡಿದ್ದಾರೆ. ಹೌದು, ನನಗೆ ಹುಡುಗಿ ಗೊತ್ತಾಗಿದೆ. ಆದರೆ ಹುಡುಗಿ ಯಾರು ಎನ್ನುವದನ್ನು ಬಹಿರಂಗ ಪಡಿಸಿರಲಿಲ್ಲ. ಈಗಲೇ ಆಕೆಯ ಹೆಸರು, ಮಾಹಿತಿ ಆಕೆಗೆ ಅದು ಕಿರಿಕಿರಿ ಎನಿಸಬಹುದು ಎಂದಿದ್ದರು. ಆದರೆ ಇದೀಗ ಸದ್ದಿಲ್ಲದೇ ಎಂಗೇಜ್ಮೆಂಟ್ ಮಾಡಿಕೊಂಡಿದ್ದಾರೆ.
ಪ್ರಥಮ್ ಸದ್ಯ ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ. ಸೈಲೆಂಟ್ ಆಗಿ ಒಳ್ಳೆಯ ಹುಡುಗ ಪ್ರಥಮ್ ಎಂಗೇಜ್ ಆಗಿದ್ದು, ತನ್ನ ಕುಟುಂಬದವರು ತೋರಿಸಿದ ಹುಡುಗಿ ಜೊತೆ ಅರೇಂಜ್ಡ್ ಮ್ಯಾರೇಜ್ ಆಗಲು ರೆಡಿಯಾಗಿದ್ದಾರೆ. ಆದರೆ ಭಾವಿ ಪತ್ನಿಯ ಬಗ್ಗೆ ವಿವರ ಆಗಲಿ ಯಾವುದನ್ನು ಪ್ರಥಮ್ ಹಂಚಿಕೊಂಡಿಲ್ಲ. ಸರಳವಾಗಿ ಎಂಗೇಜ್ಮೆಂಟ್ (Engegement) ಮಾಡಿಕೊಂಡಿರುವ ನಟ ಪ್ರಥಮ್ ಈ ವಿಚಾರವನ್ನು ತಾವೇ ಸೋಷಿಯಲ್ ಮಿಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ಉಂಗುರ (Ring) ಧರಿಸಿ ಕೈಗಳ ಪೋಟೋವನ್ನು ಹಂಚಿಕೊಂಡ ಪ್ರಥಮ್ ಒಂದಷ್ಟು ಸಾಲುಗಳನ್ನು ಬರೆದುಕೊಂಡಿದ್ದಾರೆ. “ಇವತ್ತು ನನ್ನ ಎಂಗೇಜ್ ಆಯ್ತು. ಯಾವ ಆಡಂಬರ, ಸಂಭ್ರಮ, ತೋರ್ಪಡಿಕೆ ಇಲ್ಲದೆ ಬಹಳ ಸರಳವಾಗಿ ಕುಟುಂಬದವರು ಮೆಚ್ಚಿದವರ ಜತೆಯಾಗಿದ್ದೇನೆ. ನಾನು ತುಂಬಾ ಸರಳವಾಗಿಯೇ ಬದುಕಿದವನು, ಹಾಗೇ ಇರಲು ಇಷ್ಟಪಡುತ್ತೇನೆ. ನನ್ನ ಎಂಗೇಜ್‌ಮೆಂಟ್ ಈ ದೇಶದ ದೊಡ್ಡ ಸುದ್ದಿಯಲ್ಲ.” ಎಂದಿದ್ದಾರೆ.
“ಆದರೆ ನನ್ನ ಇಷ್ಟಪಡುವ ಸ್ನೇಹಿತರು, ಆತ್ಮೀಯರಿಗೆ ವಿಚಾರ ಹಂಚಿಕೊಳ್ಳೋಣ ಎಂಬ ಕಾರಣಕ್ಕೆ ವಿಚಾರ ತಿಳಿಸಿದ್ದೇನೆ. ಮದುವೆ ಎಷ್ಟು ಅದ್ಧೂರಿಯಾಗಿ ಆದೆ ಅನ್ನೋದಕ್ಕಿಂತ ಎಷ್ಟು ಚೆನ್ನಾಗಿ ಬದುಕು ಕಟ್ಟಿಕೊಂಡೆವು ಎಂಬುವುದೇ ನಿಜವಾದ ಸಾಧನೆ. ನನಗೆ ಹಾಗಿರುವುದಕ್ಕೇ ಇಷ್ಟ, ಹಾಗೆಯೇ ಇದ್ದು ಬಿಡುತ್ತೇನೆ. ಹರಸುವವರು ಅಲ್ಲಿಂದಲೇ ಹರಸಿ, ಅದೇ ಆಶೀರ್ವಾದ” ಎಂದಿದ್ದಾರೆ ಪ್ರಥಮ್.
View this post on Instagram
ನಟ ಪ್ರಥಮ್ ನಿಶ್ಚಿತಾರ್ಥದ ಪೋಸ್ಟ್ ನೋಡುತ್ತಿದ್ದಂತೆ ನೆಟ್ಟಿಗರು ಸಾಕಷ್ಟು ಖುಷಿಯನ್ನು ವ್ಯಕ್ತಪಡಿಸುತ್ತಿದ್ದಾರೆ. ಅಷ್ಟೇ ಅಲ್ಲದೇ ಪ್ರಥಮ್ ಪ್ರಶ್ನೆಗಳ ಸುರಿಮಳೆಯೇ ಎದುರಾಗಿದೆ. ನೆಟ್ಟಿಗರು ಲವ್ ಮ್ಯಾರೇಜ್? ಅರೇಂಜ್ ಮ್ಯಾರೇಜ್? ಯಾವಾಗ ಮದುವೆ ಹೀಗೆ ನಾನಾ ರೀತಿಯಲ್ಲಿ ಕಾಮೆಂಟ್ ಮಾಡುತ್ತಿದ್ದಾರೆ