ನೆಡೆದಾಡುವ ಅಪ್ಪು ಪ್ರತಿಮೆ ಉದ್ಘಾಟಿಸಿದ ಅಶ್ವಿನಿ ಪುನೀತ್ ರಾಜ್‍ಕುಮಾರ್.

ದಾನವ ಮಾನವನಾಗಬಹುದು ಅಥವಾ ಮಾನವ ದಾನವನೂ ಆಗಬಹುದು ಆದರೆ ಮಾನವ ದೇವನಾಗುವುದು ವಿರಳ. ಆದರೆ ನಮ್ಮ ಅಪ್ಪು ಈ ಕಲಿಯುಗದಲ್ಲಿ ದೈಹಿಕವಾಗಿ ದೂರವಾಗಿ ಹೃದಯ ದೇವಾಲಯದಲ್ಲಿ ನೆಲೆಸಿ ಪೂಜಿಸಿಕೊಳ್ಳುವುದರ ಜೊತೆಗೆ ನಾನಾ ಕಡೆ ಶಿಲಾಮೂರ್ತಿಯಾಗಿ ಅಭಿಮಾನಿಗಳಿಂದ ಅಭಿಷೇಕ ಮಾಡಿಸಿಕೊಂಡು ನಗು ಮುಖದ ಸರದಾರರಾಗಿ ರಾರಾಜಿಸುತ್ತಿದ್ದಾರೆ. ಅಪ್ಪುವಿನ ಬಗ್ಗೆ ಎಷ್ಟು ಹೇಳಿದರೂ ಹಾಡಿ ಹೊಗಳಿದರೂ ಕಡಿಮೆಯೇ ಹೊರತು ಹೆಚ್ಚು ಎನಿಸುವುದಿಲ್ಲ ಇದಕ್ಕೆ ಕಾರಣ ಅವರ ಅಭಿನಯಕ್ಕಿಂತ ಹೆಚ್ಚಾಗಿ ಅವರ ವ್ಯಕ್ತಿತ್ವ ಹಾಗೂ ನಡೆದುಕೊಳ್ಳುತ್ತಿದ್ದ ರೀತಿ. ಅಪ್ಪು ಇಂದು ನಮ್ಮನ್ನು ದೈಹಿಕವಾಗಿ ಅಗಲಿದ್ದರೂ ಆತ್ಮಿಕವಾಗಿ ನಮ್ಮ ಅಂತರಂಗದ ನೆನಪಿನ ಬುತ್ತಿಯಲ್ಲಿ ಸದಾ ಚಿರಾಯು ಆಗಿದ್ದಾರೆ ಎಂದರೆ ತಪ್ಪಾಗಲಿಕ್ಕಿಲ್ಲ. ಏಕೆಂದರೆ ಅವರ ಆದರ್ಶಗಳು ಅವರ ಚಿತ್ರಗಳ ಮೂಲಕ ನಮ್ಮನ್ನು ಸದಾ ಎಚ್ಚರಿಸಿ ಪ್ರೆರೇಪಿಸುತ್ತಿರುತ್ತವೆ ಇದು ಪವರ್ ಸ್ಟಾರ್ ಅವರ ಪವರ್.

ಅಪ್ಪು ಇಲ್ಲ ಎಂದ ತಕ್ಷಣ ನಮಗೆ ಇಂದು ಮನದಲ್ಲಿ ದುಗುಡ ತುಂಬಿ ಮನಸ್ಸು ಭಾರವಾಗುತ್ತದೆ. ಅವರ ಅಗಲಿಕೆಯಿಂದ ನೊಂದುಕೊಳ್ಳದವರಿಲ್ಲ ಹಾಗೂ ಅವರ ಪ್ರೀತಿ ವಿಶ್ವಾಸವನ್ನು ಅರಿಯದ ಕನ್ನಡಿಗನಿಲ್ಲ. ಅಪ್ಪು ಇನ್ನಿಲ್ಲ ಎನ್ನುವ ಆ ಕೆಟ್ಟ ದಿನಕ್ಕೆ ಶಾಪ ಹಾಕಿದವರೆಷ್ಟೋ, ದೇವರ ಈ ಕ್ರೂ.ರತನಕ್ಕೆ ಕ್ರೋ.ಧ.ಗೊಂಡವರೆಷ್ಟೋ ಮಂದಿ ಈ ನೋವನ್ನು ಇಂದಿಗೂ ಸಹಿಸಲಾಗದೆ ತಮ್ಮ ವೇದನೆಗಳನ್ನು ವಿಚಿತ್ರ ರೀತಿಯಲ್ಲಿ ಹೊರ ಹಾಕಿ ತಮ್ಮ ನೋವಿನ ಭಾರವನ್ನು ಇಳಿಸಿಕೊಳ್ಳುತ್ತಿದ್ದಾರೆ. ಬಾಲನಟರಾಗಿ ಚಿತ್ರರಂಗಕ್ಕೆ ಹೆಜ್ಜೆ ಇಟ್ಟ ಅಪ್ಪು ಅವರು ಅನೇಕ ಚಿತ್ರಗಳಲ್ಲಿ ಬಾಲ ನಟನೆಗೆ ಪ್ರಶಸ್ತಿಗಳನ್ನು ಗಿಟ್ಟಿಸಿಕೊಂಡು ಚಿಕ್ಕಂದಿನಿಂದಲೇ ಹಾಡುಗಾರಿಕೆಯನ್ನು ಬೆಳೆಸಿಕೊಂಡು ಮತ್ತು ನೃತ್ಯ ಕಲೆಯನ್ನು ತನ್ನ ಬತ್ತಳಿಕೆಯಲ್ಲಿಟ್ಟುಕೊಂಡು 2002 ರಲ್ಲಿ ಪ್ರಥಮ ಬಾರಿಗೆ ನಾಯಕ ನಟರಾಗಿ “ಅಪ್ಪು” ಚಿತ್ರದ ಮೂಲಕ ಪಾದಾರ್ಪಣೆ ಮಾಡಿ ಅದೇ ಅಪ್ಪು ಎಂಬ ಹೆಸರಿನಿಂದ ಅಂದಿನಿಂದ ಇಂದಿನವರೆಗೂ ಅಪ್ಪು ಎಂದೇ ಕರೆಸಿಕೊಳ್ಳುತ್ತಿದ್ದಾರೆ.

ಕೇವಲ ಚಿತ್ರೋದ್ಯಮವನ್ನೇ ಬಂಡವಾಳವಾಗಿ ಮಾಡಿಕೊಳ್ಳದೆ ಸಮಾಜಮುಖಿ ಕಾರ್ಯಗಳನ್ನು ಮಾಡುತ್ತ ತನ್ನ ಕಾರ್ಯ ಪರರಿಗೆ ತಿಳಿಯದಂತೆ ತನ್ನ ಗಾಯನ ನೃತ್ಯದಿಂದ ಬಂದಂತಹ ಹಣವನ್ನು ಇಂತಹ ಕಾರ್ಯಗಳಿಗೆ ವಿನಿಯೋಗ ಮಾಡುತ್ತ ಇನ್ನೊಬ್ಬರ ಬಾಳಿಗೆ ಬೆಳಕಾಗಿ ಇದ್ದಂತಹ ಜ್ಞಾನದೀಪ ನಮ್ಮ ಅಪ್ಪು. ಆದರೆ ಒಳ್ಳೆಯವರಿಗೆ ಹೆಚ್ಚು ಕಾಲ ಇಲ್ಲ ಎನ್ನುವ ಮಾತು ನಿಜ ಎಂಬಂತೆ ದೇವರಿಗೂ ನಮ್ಮ ಅಪ್ಪು ಇಷ್ಟವಾಗಿ ಆ ದೇವರು ಅಪ್ಪು ಅವರನ್ನು ಬಿಗಿದಪ್ಪಿ ತನ್ನ ಮನೆಗೆ ಕರೆದೊಯ್ದು ಇಂದಿಗೆ 9 ಮಾಸಗಳು ಮಾಸಿ ಹೋಗಿದ್ದು ಸ್ಮರಣಾರ್ಥವಾಗಿ ಅಭಿಮಾನಿಗಳು ಬೆಂಗಳೂರಿನ ಜಿ ಏನ್ ಪಾಳ್ಯದಲ್ಲಿ ಅಪ್ಪುವಿನ ಪ್ರತಿಮೆಯನ್ನು ಮಾಡಿಸಿ ದೈವ ಪೂಜೆ ಮಾಡಿ ಅಪ್ಪುವನ್ನು ನೆನೆದಿದ್ದಾರೆ. ಹಿಂದೊಮ್ಮೆ ವಿಜಯನಗರದ ಹೊಸಪೇಟೆಯಲ್ಲಿ 7.4 ಅಡಿ ಉದ್ದದ ಅಪ್ಪು ಪ್ರತಿಮೆಯನ್ನು ನಿರ್ಮಿಸಿ ಉದ್ಘಾಟನೆಯಲ್ಲಿ ರಾಘವೇಂದ್ರ ರಾಜ್ ಕುಮಾರ್ ಹಾಗೂ ಅವರ ಪತ್ನಿ ನಿರ್ದೇಶಕ ಸಂತೋಷ ಆನಂದ್ ರಾಮ್ ಇನ್ನಿತರರು ಭಾಗವಹಿಸಿ ಉದ್ಘಾಟಿಸಿದ್ದರು.

ಇದೇ ರೀತಿ ಬೆಂಗಳೂರಿನ ಜಿ ಎಂ ಪಾಳ್ಯದಲ್ಲಿಯೂ ಪ್ರತಿಮೆಯೊಂದನ್ನು ಮಾಡಿಸಿ 9 ನೇ ತಿಂಗಳ ಸ್ಮರಣೆಯನ್ನು ಅಭಿಮಾನಿಗಳು ಮಾಡಿದ್ದು, ಅಪ್ಪು ಪತ್ನಿ ಅಶ್ವಿನಿ ಹಾಗೂ ಮಕ್ಕಳು ಅಪ್ಪು ಸಮಾಧಿಗೆ ಭೇಟಿ ನೀಡಿ ಪೂಜೆ ಸಲ್ಲಿಸಿ ಪ್ರತಿಮೆಯ ದರ್ಶನವನ್ನು ಪಡೆದುಕೊಂಡು ಅಪ್ಪುವನ್ನು ಸ್ಮರಿಸಿಕೊಂಡಿದ್ದಾರೆ. ಅಪ್ಪುರವರು ಮಾಡುತ್ತಿದ್ದ ಒಳ್ಳೆಯ ಕೆಲಸಗಳಂತೆ ನಾವೂ ಸಹ ಜನೋಪಯೋಗಿ ಕಾರ್ಯಗಳನ್ನು ಮಾಡುವ ಮೂಲಕ ಅಪ್ಪುರವರನ್ನು ಕಾಣಬಹುದು ಅಲ್ಲದೇ ಅಪ್ಪು ಅವರು ಕಂಡಿದ್ದ ಕನಸುಗಳು ಸಹ ಇವೇ ಅಲ್ಲವೆ.