ಕನ್ನಡದ ರಾಜರತ್ನ ಅಪ್ಪು ಸಾವನ್ನು ಯಾರು ಕೂಡ ಮರೆಯಲು ಸಾಧ್ಯವಿಲ್ಲ ಎಷ್ಟೇ ಕಣ್ಣೀರು ಹಾಕಿದರು ಅವರು ಬಿಟ್ಟು ಹೋದ ನೆನಪುಗಳು ಒಳ್ಳೆಯ ಗುಣಗಳು ಕಣ್ಣ ಮುಂದೆ ಬರುತ್ತವೆ ಪುನೀತ್ ಬದುಕಿದ್ದಾಗ ಅವರು ಮಾಡುತ್ತಿದ್ದ ದಾನ ಧರ್ಮಗಳು ಕಣ್ಣಿಗೆ ಕಂಡಿದ್ದು ಬೆರಳೆಣಿಕೆ ಅಷ್ಟು ಮಾತ್ರ ಇದೀಗ ಪುನೀತ್ ಮರಣದ ನಂತರ ಅವರು ಮಾಡಿರುವ ನೂರಾರು ಒಳ್ಳೆಯ ಕೆಲಸಗಳು ಬಯಲಾಗುತ್ತಿದೆ.
ಪುನೀತ್ ರವರ ಮಹಾನ್ ಕೆಲಸಗಳನ್ನು ಕೇಳಿದರೆ ನಿಮ್ಮ ಕಣ್ಣಲ್ಲಿ ಕಣ್ಣೀರು ಬರುತ್ತದೆ. ಆರಂಭದಲ್ಲಿ ಪುನೀತ್ ನಡೆಸುತ್ತಿದ್ದ ಚಾರಿಟಿಗಳು ,ಉಚಿತ ಶಾಲೆಗಳು ,ಗೋ ಶಾಲೆಗಳು ,ಅನಾಥಾಶ್ರಮ ಬೆರಳೆಣಿಕೆ ಅಷ್ಟು ಮಾತ್ರ ಕಂಡಿದ್ದವು ಆದರೆ,
ಈಗ ಕಾಲ ಕಳೆದಂತೆ ಒಂದು ಸಾವಿರ ಗೋ ಶಾಲೆ, 800 ಅನಾಥಾಶ್ರಮ ,784 ಉಚಿತ ಶಾಲೆಗಳು ಕಂಡು ಬಂದಿವೆ ಇದೆಲ್ಲದಕ್ಕೂ ಈಗಾಗಲೇ 8 ಕೋಟಿ ಫಿಕ್ಸೆಡ್ ಡಿಪಾಸಿಟ್ ಮಾಡಿದ್ದು ಇವೆಲ್ಲವಕ್ಕೂ ಇದರಿಂದಲೇ ಹಣ ಹೋಗುತ್ತದೆ.
ಕನ್ನಡಿಗರಿಗೆ ಅಪ್ಪು ಕೇವಲ ಕನಸು ಮಾತ್ರ ರಾಜಕುಮಾರ ಫ್ಯಾಮಿಲಿ ಅಭಿಮಾನಿಗಳನ್ನು ದೇವರು ಎಂದು ಕರೆಯುತ್ತಿದ್ದರು ಅಪ್ಪು ತನ್ನ ಪ್ರೀತಿಯ ಮಡದಿ ಅಶ್ವಿನಿಗಾಗಿ ಮೈಸೂರಿನಲ್ಲಿ ಮನೆಯನ್ನು ಕಟ್ಟಿಸಿದ್ದಾರೆ.
ರಾಜಕುಮಾರ್ ಬದುಕಿದ್ದಾಗ ಬೆಂಗಳೂರುನಲ್ಲಿ ತಮ್ಮ ಕೂಡು ಕುಟುಂಬಕ್ಕೆ ದೊಡ್ಡ ಬಂಗಲೆಯನ್ನು ಖರೀದಿಸಿದ್ದರು ಇದನ್ನು ಪುನೀತ್ ರಾಜಕುಮಾರ್ ಹಾಗೂ ರಾಘವೇಂದ್ರ ರಾಜಕುಮಾರ್ ನವೀಕರಣಗೊಳಿಸಿದ್ದಾರೆ. ಇವರ ಮನೆ ಅಚ್ಚ ಹಸಿರಿನಿಂದ ಕೂಡಿದೆ ಮೈಸೂರಿನಲ್ಲಿರುವ ಮನೆಯಲ್ಲಿ ಅಪ್ಪು ತನ್ನ ಪತ್ನಿಯ ಅಭಿರುಚಿಗೆ ತಕ್ಕಂತೆ ಕಟ್ಟಿಸಿದ್ದಾರೆ.