ರಾಜ್ಯದಲ್ಲಿ ಶಕ್ತಿ ಯೋಜನೆ (Power Scheme) ಜಾರಿಯಾದ ಬೆನ್ನಲ್ಲೆಯಲ್ಲಿ ಇದರ ಎಫೆಕ್ಟ್ ರಾಜ್ಯದಲ್ಲಿ ಜೋರಾಗಿಯೇ ಇದೆ. ಶಕ್ತಿ ಯೋಜನೆಯೂ ಜಾರಿಗೆ ಬಂದ ಬೆನ್ನಲ್ಲೇ ಧಾರ್ಮಿಕ ಕೇಂದ್ರಗಳಿಗೆ ತೆರಳುವ ಮಹಿಳೆಯರ ಸಂಖ್ಯೆಯಲ್ಲಿ ಏರಿಕೆ ಕಂಡಿದೆ. ಅದಲ್ಲದೇ, ಸರ್ಕಾರ (Government) ದ ಪ್ರಮುಖ ಗ್ಯಾರಂಟಿಯಾದ ಶಕ್ತಿ ಯೋಜನೆ ಜಾರಿಯಾದ ದಿನದಿಂದಲೇ ಮಹಿಳೆಯರು ಬಸ್ಸಿನ ಕಿಟಿಕಿಗಳು, ಬಾಗಿಲುಗಳು ಮುರಿದು ಬೀಳುತ್ತಿವೆ. ಈ ಯೋಜನೆಯಡಿಯಲ್ಲಿ ನಾನಾ ರೀತಿಯ ಅವಂತಾರಗಳು ಕಂಡು ಬರುತ್ತಿದೆ.
ಸದ್ಯಕ್ಕೆ ಮಹಿಳೆಯರ ಕಿತ್ತಾಟದ ವಿಡಿಯೋಗಳು ಕೂಡ ವೈರಲ್ ಆಗುತ್ತಿವೆ. ಅಂದಹಾಗೆ, ಮೈಸೂರಿ (Mysore) ನಲ್ಲಿ ಚಾಮುಂಡಿಬೆಟ್ಟಕ್ಕೆ ತೆರಳುವ ನಗರ ಸಾರಿಗೆ ಬಸ್‌ನಲ್ಲಿ ಮಹಿಳೆಯರ ಗಲಾಟೆ ಮಾಡಿ ಕೊಂಡಿದ್ದಾರೆ. ಕೊನೆಗೆ ಮಹಿಳೆಯರಿಬ್ಬರೂ ಸೀಟಿಗಾಗಿ ಕೈಕೈ ಮಿಲಾಯಿಸಿದ್ದಾರೆ. ಬಸ್ಸಿನೊಳಗೆ ಜಗಳ ಮಾಡಿಕೊಂಡಿರುವ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.
ಶಕ್ತಿ ಯೋಜನೆಗೆ ಸಂಬಂಧ ಪಟ್ಟಂತೆ ಹೊಸ ಮಾರ್ಗ ಸೂಚಿಯನ್ನು ತರುವ ಬಗ್ಗೆ ಸಚಿವರು ಸುಳಿವು ನೀಡಿದ್ದಾರೆ. ಹೌದು, ಈ ಯೋಜನೆಗೆ ಬಗೆಗೆ ಮಾಧ್ಯಮದವರ ಜೊತೆಗೆ ಮಾತನಾಡಿದ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ (Transport Minister Ramalinga Reddy) , “ಈ ಉಚಿತ ಯೋಜನೆಯನ್ನು ಶಿಸ್ತುಬದ್ಧವಾಗಿ ರಾಜ್ಯದಲ್ಲಿ ಯಶಸ್ವಿಯಾಗಬೇಕು.
ಅದಲ್ಲದೇ ಮುಂಬರು ಐದು ವರ್ಷಗಳ ಕಾಲ ಯೋಜನೆ ಜಾರಿಯಲ್ಲಿರಬೇಕಿದ್ದು, ಮಾರ್ಗಸೂಚಿ ಜಾರಿಗೆ ತರುವ ಬಗ್ಗೆ ಚಿಂತನೆ ನಡೆದಿದೆ. ಫ್ರೀ ಅಂತ ಎಲ್ಲರೂ ಒಂದೇ ದಿನ ಬಸ್ನಲ್ಲಿ ಪ್ರಯಾಣ ಮಾಡಲು ಸಾಧ್ಯವಿಲ್ಲ. ದೂರದ ಪ್ರಯಾಣಕ್ಕೆ ಟಿಕೆಟ್ ಕಾಯ್ದಿರಿಸಿದ ಪ್ರಯಾಣಿಕರಿಗೆ ಮಾತ್ರ ಅವಕಾಶ ನೀಡುವ ಬಗ್ಗೆ ಚಿಂತನೆ ನಡೆದಿದೆ ಎಂದಿದ್ದಾರೆ.
ಅದಲ್ಲದೇ, “ಸ್ಟ್ಯಾಂಡಿಂಗ್ ಪ್ರಯಾಣದಿಂದ ಇತರೆ ಪ್ರಯಾಣಿಕರಿಗೆ ತೊಂದರೆ ಆಗಲಿದೆ. ಈ ಯೋಜನೆಯನ್ನು ಕ್ರಮಬದ್ಧವಾಗಿ ಜಾರಿಗೆ ತರುವ ಉದ್ದೇಶದಿಂದ ಕೆಲವು ಮಾರ್ಗಸೂಚಿ ತರೋದು ಅನಿವಾರ್ಯ. ಮೊದಲೇ ಆಸನ ಕಾಯ್ದಿರಿಸಿದ್ರೆ ಎಲ್ಲರೂ ಆರಾಮವಾಗಿ ಪ್ರಯಾಣಿಸಬಹುದು. ವೀಕೆಂಡ್ ಪ್ರಯಾಣಕ್ಕೆ ಪ್ರತ್ಯೇಕ ಮಾರ್ಗಸೂಚಿ ಪ್ರಕಟವಾಗುವ ಸಾಧ್ಯತೆಗಳಿವೆ. ಯಾವುದೇ ಮಾರ್ಗಸೂಚಿ ಪ್ರಕಟವಾದ್ರೂ ಅದು ಪ್ರಯಾಣಿಕರ ಸುರಕ್ಷತೆಗಾಗಿ, ಇನ್ನುಳಿದಂತೆ ಪ್ರಯಾಣ ಮಹಿಳೆಯರಿಗೆ ಉಚಿತವಾಗಿರಲಿದೆ” ಎಂದು ಸಚಿವರು ಹೇಳಿದ್ದಾರೆ.