ಕನ್ನಡ ಕಿರುತೆರೆ ಲೋಕದಲ್ಲಿ ಜನಪ್ರಿಯತೆಯನ್ನು ಗಳಿಸಿಕೊಂಡಿರುವರಲ್ಲಿ ಆಕಾಶ ದೀಪ ಖ್ಯಾತಿಯ ದಿವ್ಯಾ ಶ್ರೀಧರ್ (Divya Shreedhar) ಕೂಡ ಒಬ್ಬರು. ಆಕಾಶ ದೀಪ ಸೀರಿಯಲ್‌ನಲ್ಲಿ ಜನಪ್ರಿಯರಾಗಿದ್ದ ದಿವ್ಯಾ ಶ್ರೀಧರ್‌ ಅವರು ಮುಂದೆ ಸ್ಯಾಂಡಲ್‌ ವುಡ್‌ (Sandal Wood) ನಲ್ಲೂ ಬೆಳ್ಳಿತೆರೆಯಲ್ಲಿ ನಟಿಸಿದ್ದಾರೆ. ಇತ್ತೀಚೆಗಷ್ಟೇ ವೈವಾಹಿಕ ಜೀವನದಲ್ಲಿನ ಕೆಲವು ವಿಚಾರಗಳಿಂದ ಸುದ್ದಿಯಾಗಿದ್ದರು. ಆದರೆ ಇದೀಗ ಒಂದು ತಿಂಗಳ ಮಗುವನ್ನು ಹಿಡಿದುಕೊಂಡು ವೃತ್ತಿ ಜೀವನದಲ್ಲಿ ಬ್ಯುಸಿಯಾಗಿದ್ದಾರೆ. ಏಪ್ರಿಲ್ 7ರಂದು ಹೆಣ್ಣು ಮಗುವಿಗೆ ಜನ್ಮ ನೀಡಿದ್ದು, ಮಗು ಹುಟ್ಟಿ ಒಂದು ತಿಂಗಳು ಕಳೆಯುತ್ತಿದ್ದಂತೆ, ಮೇ 21ರಿಂದಲೇ ಮತ್ತೆ ಶೂಟಿಂಗ್ ಗೆ ತೆರಳಿದ್ದಾರೆ.

ಹೀಗಾಗಿ ನಟಿ ದಿವ್ಯಾ ಶ್ರೀಧರ್ ಅವರು ವರ್ಕಿಂಗ್ ವುಮೆನ್ (Working Women) ಬಗ್ಗೆ ನಟಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಒಂದು ತಿಂಗಳ ಮಗುವನ್ನು ಕೂಡ ಶೂಟಿಂಗ್ ಸ್ಥಳಕ್ಕೆ ಕರೆದುಕೊಂಡು ಹೋಗಬೇಕಾದ ಅನಿವಾರ್ಯತೆಯಿದೆ. ಕೆಲಸ ಮಾಡುವ ಮಹಿಳೆ ಮಾಡದಿರುವ ಕೆಲಸ ಇಲ್ಲ, ಮರಳಿ ಕೆಲಸಕ್ಕೆ ಎಂದು ದಿವ್ಯಾ ಶ್ರೀಧರ್ ಅವರು ಇಬ್ಬರು ಹೆಣ್ಣು ಮಕ್ಕಳ ಜೊತೆಗೆ ಶೂಟಿಂಗ್ ಸ್ಥಳಕ್ಕೆ ಬರುವ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಅದಲ್ಲದೇ, ತಾಯಿಯ ಸಂಪತ್ತು ಮಗಳು ಎಂದು ಮುದ್ದು ಮಗಳ ಜೊತೆಗೆ ಆಟ ಆಡುತ್ತಿರುವ ವಿಡಿಯೋವನ್ನು ಶೇರ್ ಮಾಡಿಕೊಂಡಿದ್ದಾರೆ.

PhotoGrid Site 1687319300035

ಕಳೆದ ಕೆಲವು ತಿಂಗಳ ಹಿಂದೆಯಷ್ಟೇ ಆಕಾಶದೀಪ ಧಾರವಾಹಿ ಖ್ಯಾತಿಯ ನಟಿ ದಿವ್ಯಾ ಶ್ರೀಧರ್ ಮೇಲೆ ಪತಿ ಅಮ್ಜದ್ ಖಾನ್ (Amjad Khan) ಹ-ಲ್ಲೆ ನಡೆಸಿರುವುದಾಗಿ ವರದಿಯಾಗಿತ್ತು. ಪ್ರೀತಿಸಿ ಮದುವೆಯಾಗಿದ್ದ ದಿವ್ಯಾ ಶ್ರೀಧರ್ ಪತಿ ಅಮ್ಜದ್ ಖಾನ್ ತಮ್ಮ ಮೇಲೆ ಹ-ಲ್ಲೆ ನಡೆಸಿದ್ದು, ಆಸ್ಪತ್ರೆಗೆ ದಾಖಲಾಗಿದ್ದರು. 2015ರಲ್ಲಿ ಪ್ರಸಾರವಾದ ತಮಿಳು ಧಾರಾವಾಹಿ ʻಕೇಳಡಿ ಕಣ್ಮಣಿʼಯಲ್ಲಿ ಸಹನಟನಾಗಿದ್ದ ಅಮ್ಜದ್‌ ಖಾನ್‌ ಅವರನ್ನು ಪ್ರೀತಿಸಿ ಮದುವೆಯಾಗಿದ್ದರು. ಪ್ರೀತಿಸುತ್ತಿದ್ದ ದಿನಗಳಲ್ಲಿ ದಿವ್ಯಾ ಅವರು ಅರ್ನವ್‌ (Arnav) ಎಂದೇ ತಿಳಿದು ಪ್ರೀತಿಸಿದ್ದರು ಎನ್ನಲಾಗಿತ್ತು. ತದನಂತರದಲ್ಲಿ ಸುಮಾರು ಐದು ವರ್ಷ ಕಾಲ ಇವರಿಬ್ಬರೂ ಲಿವ್‌ ಇನ್‌ ರಿಲೇಷನ್‌ಷಿಪ್‌ನಲ್ಲಿದ್ದರು.

ಬಳಿಕ ಆತ ಅಮ್ಜದ್‌ ಖಾನ್‌ ಎಂದು ಆಕೆಗೆ ತಿಳಿದಿದೆ ಎನ್ನಲಾಗಿತ್ತು. 2022ರ ಜೂನ್‌ನಲ್ಲಿ ಅವರ ಮದುವೆ ನಡೆದಿದ್ದು, ಗರ್ಭಿಣಿಯಾಗಿದ್ದರು. ಗರ್ಭಿಣಿ ಲೆಕ್ಕಿಸದೇ ಹೊಟ್ಟೆಗೆ ಒ-ದ್ದು ಅಮ್ಜನ್ ಖಾನ್ ಹ-ಲ್ಲೆ ನಡೆಸಿದ್ದರು ಎನ್ನಲಾಗಿತ್ತು. ಇತ್ತೀಚೆಗಷ್ಟೇ ಮೂರು ತಿಂಗಳ ಗರ್ಭೀಣಿ ಆಗಿರುವ ನನ್ನ ಮೇಲೆ ಪತಿ ಅಮ್ಜದ್ ಖಾನ್ ಹ-ಲ್ಲೆ ಮಾಡಿದ್ದಾರೆ ಎಂದು ದಿವ್ಯಾ ಶ್ರೀಧರ್ ಆರೋಪಿಸಿದ್ದರು. ಪತಿಯ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು.

PhotoGrid Site 1687319262643

ದಿವ್ಯಾ ಶ್ರೀಧರ್ ಮಾಡಿರುವ ಆರೋಪದ ಕುರಿತು ಪ್ರತಿಕ್ರಿಯೆ ನೀಡಿದ್ದ ನಟ ಅಮ್ಜದ್ ಖಾನ್ (Amjad Khan), “ನಾನು, ದಿವ್ಯಾ ಮೇಲೆ ಹ-ಲ್ಲೆ ಮಾಡಿಲ್ಲ, ಬೇಕಿದ್ದರೆ ನಮ್ಮ ಮನೆಯ ಸಿಸಿಟಿವಿ ಕ್ಯಾಮೆರಾ ಪರಿಶೀಲನೆ ನಡೆಸಿ. ದಿವ್ಯಾಗೆ ಕೆಲವು ಕೆಟ್ಟ ಗೆಳೆಯರ ಸಹವಾಸವಿದೆ. ಅವರೊಟ್ಟಿಗೆ ಸೇರಿಕೊಂಡು ಹೀಗೆ ಮಾಡುತ್ತಿದ್ದಾಳೆ. ಸುಮ್ಮನೆ ನನ್ನ ಮೇಲೆ ಇಲ್ಲದ ಆರೋಪ ಹೊರಿಸುತ್ತಿದ್ದಾಳೆ. ಆಕೆಗೆ ತಾನು ತಾಯಿಯಾಗುತ್ತಿರುವುದು ಇಷ್ಟವಿಲ್ಲ, ಅಬಾರ್ಶನ್ ಮಾಡಿಸಿಕೊಳ್ಳಲು ಇಲ್ಲ-ಸಲ್ಲದ ನಾಟಕವಾಡುತ್ತಿದ್ದಾಳೆ. ನಾನು ಸಹ ದಿವ್ಯಾ ವಿರುದ್ಧ ಪೊಲೀಸ್ ಆಯುಕ್ತರಿಗೆ ದೂರು ನೀಡಲಿದ್ದೇನೆ” ಎಂದಿದ್ದರು

Advertisement