ಸ್ಯಾಂಡಲ್‌ವುಡ್‌ ಜೋಡೆತ್ತು ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ಮತ್ತು ಯಶ್‌ ಈ ಹಿಂದೆ ಸುಮಲತಾ ಅಂಬರೀಷ್‌ ಪರವಾಗಿ ಲೋಕಸಭಾ ಚುನಾವಣೆಯಲ್ಲಿ ಪ್ರಚಾರ ಮಾಡಿದ್ದರು. ಈ ಜೋಡಿಯ ಅಬ್ಬರ ಪ್ರಚಾರಕ್ಕೆ ಸುಮಲತಾ ಸಂಸದೆಯಾಗಿ ಆಯ್ಕೆಯಾಗಿದ್ದರು. ಅಂದಿನಿಂದ ದರ್ಶನ್‌ ಮತ್ತು ಯಶ್‌ ಒಟ್ಟಿಗೆ ಕಂಡಾಗ ಅಭಿಮಾನಿಗಳ ಬಾಯಲ್ಲಿ ಬರುವುದು ಜೋಡೆತ್ತು ಎಂಬ ಪದ.

ಇದೀಗ ಈ ಜೋಡೆತ್ತುಗಳು, ಅಭಿಷೇಕ್‌ ಮತ್ತು ಅವಿವಾ ಜೋಡಿಯ ಸಂಗೀತ್‌ ಕಾರ್ಯಕ್ರಮದಲ್ಲೂ ಸ್ಟೆಪ್ಸ್‌ ಹಾಕಿದೆ. ಹಾಡಿ, ಕುಣಿದು ಸಂಭ್ರಮಿಸಿದ್ದಾರೆ ಈ ಇಬ್ಬರು ಸ್ಟಾರ್‌ಗಳು. ಕಳೆದ ಒಂದು ವಾರದಿಂದ ಸ್ಯಾಂಡಲ್‌ವುಡ್‌ನಲ್ಲಿ ನಟ ಅಭಿಷೇಕ್ ಅಂಬರೀಶ್‌ ಮದುವೆಯದ್ದೇ ಹವಾ. ಕನ್ನಡ ಸಿನಿಮಾ ಸ್ಟಾರ್‌ಗಳು ಮಾತ್ರವಲ್ಲದೇ ಸೌತ್‌ ನಟ, ನಟಿಯರು ಮತ್ತು ಬಾಲಿವುಡ್‌ನ ಕಲಾವಿದರೂ ಅಂಬಿ ಮಗನ ಮದುವೆಗೆ ಆಗಮಿಸಿ ಶುಭ ಕೋರಿದ್ದರು.

ತಮಿಳಿನ ಸೂಪರ್‌ಸ್ಟಾರ್‌ ರಜನಿಕಾಂತ್‌ ಸಹ ಬಂದಿದ್ದರು. ಮಾಜಿ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು, ಸಂಸದ ರಘುರಾಮರಾಜು, ಮೆಗಾಸ್ಟಾರ್ ಚಿರಂಜೀವಿ, ಮೋಹನ್ ಬಾಬು ಬಂದು ನವಜೋಡಿಗೆ ಶುಭ ಹಾರೈಸಿದ್ದರು. ಇದೆಲ್ಲ ಮುಗಿದ ಬಳಿಕ ಸಂಗೀತ್‌ ಕಾರ್ಯಕ್ರಮ ಮತ್ತಷ್ಟು ಕಳೆಗಟ್ಟಿದ್ದು; ದರ್ಶನ್‌ ಮತ್ತು ಯಶ್‌ ಅವರಿಂದ. ರೆಬೆಲ್‌ಸ್ಟಾರ್‌ ಅಂಬರೀಶ್‌ ಅವರ ಸಿನಿಮಾ ಹಾಡುಗಳಿಂದಲೇ ತುಂಬಿದ್ದ ಸಂಗೀತ್ ಕಾರ್ಯಕ್ರಮದಲ್ಲಿ ನಟ ದರ್ಶನ್‌ ಮತ್ತು ಯಶ್‌ ಒಟ್ಟಿಗೆ ಕೈ ಕೈ ಹಿಡಿದು ಕುಣಿದಿದ್ದಾರೆ.

ಈ ಜೋಡಿಯ ಕುಣಿತಕ್ಕೆ ಎಲ್ಲರೂ ಫಿದಾ ಆಗಿದ್ದಾರೆ. ಸ್ವತಃ ಅಭಿಷೇಕ್‌ ಬಾಯಿ ಮೇಲೆ ಕೈ ಇಟ್ಟುಕೊಂಡಿದ್ದಾರೆ. ಹೀಗೆ ಕುಣಿದು ಕುಪ್ಪಳಿಸಿದ ಈ ಜೋಡಿಯ ವಿಡಿಯೋಗಳು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿವೆ. ಹಿರಿಯ ನಟಿ ಜಯಪ್ರದಾ, ಮಾಲಾಶ್ರೀ, ಶಿವಣ್ಣ, ಪ್ರಭುದೇವ, ಗುರುಕಿರಣ್ ಸೇರಿ ಸ್ಯಾಂಡಲ್‌ವುಡ್‌ನ ಹಲವು ತಾರೆಯರು ಈ ಸಂಗೀತ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಈ ಜೋಡಿಯ ಡಾನ್ಸ್‌ ನೋಡಿ ಅವರೂ ನೃತ್ಯದಲ್ಲಿ ಜತೆಯಾಗಿ ಹೆಜ್ಜೆ ಹಾಕಿದ್ದಾರೆ.

ಇತ್ತ ಅಣ್ತಮ್ಮ ಎಂದು ಕೈ ಕೈ ಹಿಡಿದು ಕುಣಿದ ಯಶ್‌ ಮತ್ತು ದರ್ಶನ್‌ ಅವರ ವಿಡಿಯೋಗಳು ಜಾಲತಾಣದಲ್ಲಿ ಹೊರಬರುತ್ತಿದ್ದಂತೆ, ಈ ಹೀರೋಗಳ ಅಭಿಮಾನಿಗಳು ಸಂಭ್ರಮಿಸಿದ್ದಾರೆ. ಕಾಮೆಂಟ್ಸ್‌ ಮೂಲಕವೇ ತಮ್ಮ ಖುಷಿಯನ್ನು ಹೊರಹಾಕಿದ್ದಾರೆ. ಅದ್ರಲ್ಲೂ ನಟಿ ರಮ್ಯಾ ದರ್ಶನ್ ಡ್ಯಾನ್ಸ್ ನೋಡಿ ಫಿದಾ ಆಗಿರುವುದಾಗಿಯೂ ನಟ ಯಶ್ ಮತ್ತು ದರ್ಶನ್ ಸ್ನೇಹ ಯಾವಾಗಲೂ ಹೀಗೆ ಇರಲಿ ಎಂದು ಹಾರೈಸಿದ್ದಾರೆ. (ಪ್ರೀಯ ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.

Advertisement