ಮೋಹಕ ತಾರೆ ರಮ್ಯಾ (Ramya) ಕನ್ನಡ ಸಿನಿಮಾರಂಗದ ಖ್ಯಾತ ನಟಿ. ನಟನೆಯಿಂದಲೇ ಅಭಿಮಾನಿಗಳ ಮನಸ್ಸನ್ನು ಗೆದ್ದುಕೊಂಡಿರುವ ನಟಿ ರಮ್ಯಾ ಅವರಿಗೆ ಬಹುದೊಡ್ಡ ಸಂಖ್ಯೆಯಲ್ಲಿ ಅಭಿಮಾನಿಗಳಿದ್ದಾರೆ. ಸೆಲೆಬ್ರಿಟಿಗಳ ಮನೆಯ ಕಾರ್ಯಕ್ರಮದಲ್ಲಿ ನಟ ನಟಿಯರು ಭಾಗಿಯಾಗುವುದು ಹೊಸದೇನಲ್ಲ. ಇದೀಗ ರೆಬೆಲ್ ಸ್ಟಾರ್ ಪುತ್ರ ನಟ ಅಭಿಷೇಕ್ ಅಂಬರೀಶ್ (Abhishek Ambarish) ಹಾಗೂ ಅವಿವಾ ಬಿದ್ದಪ್ಪರವರ ಆರತಕ್ಷತೆಯೂ ಬೆಂಗಳೂರಿನ ಅರಮನೆ ಮೈದಾನದಲ್ಲಿ ಹಮ್ಮಿಕೊಳ್ಳಲಾಗಿತ್ತು. ಈ ಆರತಕ್ಷತೆಯಲ್ಲಿ ಮೋಹಕ ತಾರೆ ನಟಿ ರಮ್ಯಾರವರು ಭಾಗಿಯಾಗಿದ್ದರು.

ಹೌದು, ಸ್ಯಾಂಡಲ್‌ವುಡ್‌ ನಟಿ ಮೋಹಕ ತಾರೆ ರಮ್ಯಾ (Ramya) ಸಾಮಾಜಿಕ ಜಾಲತಾಣದಲ್ಲಿ ಸದಾ ಸಕ್ರಿಯರಾಗಿದ್ದಾರೆ. ಆಗಾಗ ಫೋಟೋಗಳನ್ನು ಹಂಚಿಕೊಳ್ಳುವ ನಟಿ ರಮ್ಯಾ ಮತ್ತೆ ಸುದ್ದಿಯಾಗಿದ್ದಾರೆ. ಇದೀಗ ನಟ ಅಭಿಷೇಕ್ ಅಂಬರೀಶ್ ಅವರ ಆರತಕ್ಷತೆ ಕಾರ್ಯಕ್ರಮಕ್ಕೆ ನಟಿ ಕೇಸರಿ ಬಣ್ಣದ ಸೀರೆಯುಟ್ಟು ಬಂದಿದ್ದರು. ನಟಿಯು ಕೇಸರಿ ಬಣ್ಣದ ಸೀರೆಯನ್ನುಟ್ಟ ಫೋಟೋವನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ. ನಟಿಯ ಈ ಫೋಟೋ ನೋಡಿ ನೆಟ್ಟಿಗರು ಶಾಕ್ ಆಗಿದ್ದಾರೆ.

ಮೋಹಕತಾರೆ ರಮ್ಯಾರವರು ಕಳೆದ ಕೆಲವು ವರ್ಷಗಳಿಂದ ಸಿನಿಮಾರಂಗದಿಂದ ದೂರ ಉಳಿದಿದ್ದರೂ ಅವರ ಬೇಡಿಕೆಯೇನು ಕಡಿಮೆಯಾಗಿಲ್ಲ. ನಟಿ ರಮ್ಯಾರವರು ರಾಜ್ ಬಿ ಶೆಟ್ಟಿ (Raj B Shetty) ಯವರ ಸಿನಿಮಾದ ಮೂಲಕ ಮತ್ತೆ ಮರಳಿದ್ದಾರೆ. ರಮ್ಯಾ ಮತ್ತು ರಾಜ್​ ಬಿ. ಶೆಟ್ಟಿ ಕಾಂಬಿನೇಷನ್​ನ ಚಿತ್ರಕ್ಕೆ ‘ಸ್ವಾತಿ ಮುತ್ತಿನ ಮಳೆ ಹನಿಯೇ’ (Swathi Muttina Male Haniye) ಎಂದು ಶೀರ್ಷಿಕೆ ಇಡಲಾಗಿದ್ದು,

ಇದೇ ಮೊದಲ ಬಾರಿಗೆ ನಟಿ ಕಮ್ ನಿರ್ಮಾಪಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ ಎನ್ನಲಾಗಿತ್ತು. ಅದಲ್ಲದೇ, ನಟಿ ರಮ್ಯಾ ಸಿನಿಮಾದಲ್ಲಿ ನಟಿಸುತ್ತಿಲ್ಲ ಎನ್ನುವುದು ನಟ ಕಮ್ ನಿರ್ದೇಶಕ ರಾಜ್ ಬಿ ಶೆಟ್ಟಿಯವರಿಗೆ ಶಾಕ್ ನೀಡಿತ್ತು.ಇತ್ತ ಸಾಕಷ್ಟು ಸುದ್ದಿಯಲ್ಲಿದ್ದ ಈ ಸಿನಿಮಾಕ್ಕೆ ಶೀರ್ಷಿಕೆಯಿಂದ ಕಾನೂನು ಸಂಕಷ್ಟ ಎದುರಾಗಿತ್ತು. ಅದಲ್ಲದೆ, ಮೋಹಕತಾರೆ ರಮ್ಯಾ ನಿರ್ಮಾಣ ಮಾಡ್ತಿರುವ `ಸ್ವಾತಿ ಮುತ್ತಿನ ಮಳೆ ಹನಿಯೇ’ ಚಿತ್ರದ ಟೈಟಲ್ ಬಳಸದಂತೆ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು (Director Rajendra Singh Babu) ತಡೆ ನೀಡಿದ್ದರು.

ಹೌದು, ಸ್ವಾಂಡಲ್​ವುಡ್ ಕ್ವೀನ್ ರಮ್ಯಾ ನಿರ್ಮಾಣದ ಮೊದಲ ಸಿನಿಮಾ ಸ್ವಾತಿ ಮುತ್ತಿನ ಮಳೆ ಹನಿಯೇ ಸಿನಿಮಾವನ್ನು ರಾಜ್ ಬಿ ಶೆಟ್ಟಿ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಅಷ್ಟೇ ಅಲ್ಲದೇ ಡಾಲಿ ಧನಂಜಯ್ ನಟನೆಯ ಉತ್ತರಕಾಂಡ ಸಿನಿಮಾದಲ್ಲಿಯೂ ನಟಿಸುತ್ತಿದ್ದಾರೆ. 

Advertisement