ನಿನ್ನೆ ( ಜೂನ್ 29 ) ಬಹು ನಿರೀಕ್ಷಿತ ಚಿತ್ರ ಲಸ್ಟ್ ಸ್ಟೋರೀಸ್ 2 ನೆಟ್‌ಫ್ಲಿಕ್ಸ್ ಅಪ್ಲಿಕೇಶನ್‌ನಲ್ಲಿ ಬಿಡುಗಡೆಗೊಂಡಿದೆ. ನಾಲ್ಕು ಸಣ್ಣ ಕಥೆಗಳನ್ನು ಒಳಗೊಂಡಿರುವ ಆಂಥಾಲಜಿ ಚಿತ್ರ ಇದಾಗಿದ್ದು, ಮೊದಲ ಎಪಿಸೋಡ್ ‘ಮೇಡ್ ಫಾರ್ ಈಚ್ ಅದರ್’ ಅನ್ನು ಆರ್ ಬಾಲ್ಕಿ ನಿರ್ದೇಶಿಸಿದ್ದು, ಎರಡನೇ ಎಪಿಸೋಡ್ ‘ದ ಮಿರರ್’ ಅನ್ನು ಕೊಂಕಣ ಸೇನ್ ನಿರ್ದೇಶಿಸಿದ್ದಾರೆ, ಮೂರನೇ ಎಪಿಸೋಡ್ ‘ಸೆ- ವಿಥ್ ಎಕ್ಸ್’ಗೆ ಸುಯೋಗ್ ಘೋಷ್ ಆಕ್ಷನ್ ಕಟ್ ಹೇಳಿದ್ದು, ನಾಲ್ಕನೇ ಎಪಿಸೋಡ್ ‘ತಿಲ್ಚಟ್ಟಾ’ಗೆ ಅಮಿತ್ ಶರ್ಮಾ ನಿರ್ದೇಶನವಿದೆ.
ಇನ್ನು ಪ್ರತಿಯೊಂದು ಭಾಗವೂ ಸಹ ವಿಭಿನ್ನ ಕಥೆಯನ್ನು ಹೊಂದಿದ್ದು, ಈ ಪೈಕಿ ಕೊಂಕಣ್ ಸೇನ್ ನಿರ್ದೇಶನದ ಎರಡನೇ ಎಪಿಸೋಡ್ ಹಾಗೂ ಅಮಿತ್ ಶರ್ಮಾ ಆಕ್ಷನ್ ಕಟ್ ಹೇಳಿರುವ ನಾಲ್ಕನೇ ಎಪಿಸೋಡ್ ನೋಡುಗರ ಮನ ಗೆದ್ದಿವೆ. ಇನ್ನುಳಿದ ಎರಡು ಎಪಿಸೋಡ್‌ಗಳು ನಿರೀಕ್ಷಿಸಿದ ಪ್ರತಿಕ್ರಿಯೆ ಪಡೆದುಕೊಳ್ಳದೇ ನಿರಾಸೆ ಮೂಡಿಸಿವೆ.

ಹೌದು, ನಟಿ ಮೃಣಾಲ್ ಠಾಕೂರ್ ಕಾಣಿಸಿಕೊಂಡಿರುವ ಮೊದಲ ಎಪಿಸೋಡ್ ಹಾಗೂ ತಮನ್ನಾ ನಟಿಸಿರುವ ಮೂರನೇ ಎಪಿಸೋಡ್‌ಗಳು ಒಳ್ಳೆಯ ಕಥೆ ಇಲ್ಲದ ಕಾರಣದಿಂದಾಗಿ ನಿರಾಸೆ ಮೂಡಿಸಿವೆ. ಇನ್ನು ಉಳಿದೆರಡು ಎಪಿಸೋಡ್‌ಗಳಿಗೆ ಹೋಲಿಸಿದರೆ ಈ ಎಪಿಸೋಡ್‌ನಲ್ಲಿಯೇ ಹಸಿಬಿಸಿ ದೃಶ್ಯಗಳು ಹೆಚ್ಚಾಗಿದ್ದು, ಮೃಣಾಲ್ ಹಾಗೂ ತಮನ್ನಾ ಮೈಚಳಿ ಬಿಟ್ಟು ನಟಿಸಿದ್ದಾರೆ.
ಆದರೂ ಸಹ ಪ್ರೇಕ್ಷಕ ಮಹಾಪ್ರಭು ಈ ಎರಡೂ ಎಪಿಸೋಡ್‌ಗಳನ್ನು ಮೆಚ್ಚಿಕೊಳ್ಳುವ ಮನಸ್ಸು ಮಾಡಿಲ್ಲ. ಸಾಮಾಜಿಕ ಜಾಲತಾಣದಲ್ಲಿ ಈ ಎಪಿಸೋಡ್‌ಗಳ ಕುರಿತು ಟೀಕೆಗಳು ವ್ಯಕ್ತವಾಗುತ್ತಿವೆ. ಒಂದೆಡೆ ಈ ಎರಡು ಎಪಿಸೋಡ್ ಬಗ್ಗೆ ನೆಗೆಟಿವ್ ಕಾಮೆಂಟ್ಸ್ ಹರಿದಾಡುತ್ತಿದ್ದರೆ, ಮತ್ತೊಂದೆಡೆ ಪಡ್ಡೆ ಹೈಕಳು ಈ ಇಬ್ಬರ ಹಾಟ್ ಸೀನ್‌ಗಳ ಬಗ್ಗೆ ಚರ್ಚೆಯನ್ನು ಸಾಮಾಜಿಕ ಜಾಲತಾಣದಲ್ಲಿ ದೊಡ್ಡ ಮಟ್ಟದಲ್ಲಿಯೇ ನಡೆಸುತ್ತಿದ್ದಾರೆ.
ಅದರಲ್ಲಿಯೂ ನಟಿ ತಮನ್ನಾ ಭಾಟಿಯಾ ತುಸು ಹೆಚ್ಚಿನ ಬೋಲ್ಡ್ ದೃಶ್ಯಗಳಲ್ಲಿಯೇ ಕಾಣಿಸಿಕೊಂಡಿದ್ದು, ಸಹ ನಟ ವಿಜಯ್ ವರ್ಮಾ ಜತೆ ಲಿಪ್‌ಲಾಕ್ ಹಾಗೂ ಬೆಡ್ ಸೀನ್‌ನಲ್ಲಿಯೂ ಸಹ ನಟಿಸಿದ್ದಾರೆ. ಈ ವಿಡಿಯೊ ಹಾಗೂ ಫೋಟೊಗಳು ಸದ್ಯ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದ್ದು, ತಮನ್ನಾ ಬೋಲ್ಡ್ ಅಭಿನಯನವನ್ನು ಯುವಕರು ಬಾಯಿ ಬಿಟ್ಟು ನೋಡುತ್ತಿದ್ದಾರೆ.
ಇನ್ನು ಇಷ್ಟರ ಮಟ್ಟಿಗೆ ಬೋಲ್ಡ್ ಆಗಿ ಕಾಣಿಸಿಕೊಂಡಿರುವ ನಟಿ ತಮನ್ನಾ ಇದೇ ಮೊದಲ ಬಾರಿಗೆ ಲಿಪ್ ಲಾಕ್ ಸಹ ಮಾಡಿರುವುದು ಹೆಚ್ಚಿನ ಚರ್ಚೆಗೆ ಕಾರಣವಾಗಿದೆ. ಹೌದು, ತಮನ್ನಾ ಚಿತ್ರವೊಂದನ್ನು ಒಪ್ಪಿಕೊಳ್ಳುವ ಮುನ್ನ ಮಾಡಿಕೊಳ್ಳುವ ಒಪ್ಪಂದದಲ್ಲಿ ಯಾವುದೇ ಕಾರಣಕ್ಕೂ ಲಿಪ್ ಲಾಕ್ ದೃಶ್ಯಗಳಲ್ಲಿ ನಟಿಸುವುದಿಲ್ಲ ಎಂದು ಉಲ್ಲೇಖಿಸುತ್ತಿದ್ದರು. ಆದರೆ ಈ ಲಸ್ಟ್ ಸ್ಟೋರೀಸ್ 2ನಲ್ಲಿ ತಮನ್ನಾ ನಿಮಿಷಗಟ್ಟಲೇ ಲಿಪ್ ಲಾಕ್ ದೃಶ್ಯಗಳಲ್ಲಿ ಕಾಣಿಸಿಕೊಂಡಿದ್ದಾರೆ.
ಈ ಮೂಲಕ ತಮ್ಮದೇ ಆದ ‘ನೋ ಲಿಪ್ ಲಾಕ್’ ನಿಯಮವನ್ನು ತಮನ್ನಾ ಮುರಿದುಹಾಕಿದ್ದಾರೆ. ಈ ಹಿಂದೊಮ್ಮೆ 2019ರಲ್ಲಿ ಸಂದರ್ಶನವೊಂದರಲ್ಲಿ ಭಾಗವಹಿಸಿದ್ದ ತಮನ್ನಾಗೆ ಲಿಪ್ ಲಾಕ್ ದೃಶ್ಯಗಳನ್ನು ಮಾಡಲ್ವಾ ಎಂಬ ಪ್ರಶ್ನೆ ಎದುರಾದಾಗ ನಟಿ ಲಿಪ್ ಲಾಕ್ ಮಾಡಲ್ಲ, ಅದನ್ನು ನಾನು ಒಪ್ಪಂದ ಮಾಡಿಕೊಳ್ಳುವಾಗಲೇ ಸ್ಪಷ್ಟವಾಗಿ ತಿಳಿಸಿರುತ್ತೇನೆ ಎಂದಿದ್ದರು. ಅಲ್ಲದೇ ಯಾರಾದರೂ ನಟನೋರ್ವನ ಜತೆ ಲಿಪ್ ಲಾಕ್ ಮಾಡಬಹುದು ಎಂದರೆ ಯಾರ ಜತೆ ಮಾಡ್ತೀರ ಎಂಬ ಪ್ರಶ್ನೆ ಎದುರಾದಾಗ ಉತ್ತರಿಸಿದ್ದ ತಮನ್ನಾ ಹೃತಿಕ್ ರೋಷನ್ ಆದರೆ ಖಂಡಿತ ಲಿಪ್ ಲಾಕ್ ಮಾಡಲು ನಾನು ರೆಡಿ ಎಂದಿದ್ದರು. ಆದರೆ ಇದೀಗ ವಿಜಯ್ ವರ್ಮಾ ಜತೆ ತಮನ್ನಾ ಲಿಪ್ ಲಾಕ್ ಮಾಡುವ ಮೂಲಕ ವರಸೆ ಬದಲಿಸಿದ್ದಾರೆ.