ಚಂದನವನದ ನಟ ಕಮ್ ನಿರ್ದೇಶಕ ರಿಯಲ್ ಸ್ಟಾರ್ ಉಪೇಂದ್ರ (Actor and Director Real Star Upendra) ಸಿನಿಮಾರಂಗ ಹಾಗೂ ರಾಜಕೀಯ ರಂಗದಲ್ಲಿ ಬ್ಯುಸಿಯಾಗಿದ್ದಾರೆ. ಹೊಸತೆರೆನಾದ ಸಿನಿಮಾಗಳನ್ನು ನೀಡುವ ಮೂಲಕ ಕನ್ನಡ ಸಿನಿಮಾರಂಗದಲ್ಲಿ ಸಕ್ರಿಯರಾಗಿದ್ದಾರೆ. ಇತ್ತೀಚೆಗಷ್ಟೇ ಹೊಸ ಮನೆ ಗೃಹಪ್ರವೇಶ ಮಾಡುವ ಸುದ್ದಿಯಾಗಿದ್ದಾರೆ. ಕಬ್ಜ (Kabzaa) ಸಿನಿಮಾದ ಯಶಸ್ಸಿನ ಬಳಿಕ ಹೊಸ ಮನೆಯನ್ನು ಖರೀದಿ ಮಾಡಿದ್ದಾರೆ. ಬೆಂಗಳೂರಿನ ಪ್ರತಿಷ್ಠಿತ ಬಡಾವಣೆಗಳಲ್ಲಿ ಒಂದಾದ ಸದಾಶಿವನಗರದಲ್ಲಿ ಮನೆ ಖರೀದಿಸಿದ್ದು, ಮನೆಯು ಐಷಾರಾಮಿ ಸೌಲಭ್ಯವನ್ನು ಹೊಂದಿದೆ.

ಅಂದಹಾಗೆ, 20 ವರ್ಷದಿಂದ ಕತ್ರಿಗುಪ್ಪೆ (Katriguppe) ಯಲ್ಲಿರುವ ಉಪೇಂದ್ರ ಕುಟುಂಬಸ್ಥರು ಮನೆಯಲ್ಲೇ ವಾಸವಿದ್ದರು. ನಟ ಉಪೇಂದ್ರ ಮನೆ ಬದಲಾವಣೆ ಮಾಡ್ಬೇಕು ಎಂದು ಬಹಳ ದಿನದಿಂದಲೂ ಅಂದುಕೊಂಡಿದ್ದರು. ಆದರೆ ಇದೀಗ, ಉಪ್ಪಿ ಜಾತಕದಲ್ಲಿ ಮನೆ ಚೇಂಜ್ ಮಾಡುವುದಕ್ಕೆ ಒಳ್ಳೆಯ ಟೈಂ ಎಂದು ತಿಳಿದು ಹೊಸ ಮನೆ ನೋಡಿ ಶಿಫ್ಟ್ ಆಗಿದ್ದಾರೆ ಎನ್ನಲಾಗಿತ್ತು. ಕೊನೆಗೂ ಹೊಸ ಮನೆಗೆ ಶಿಫ್ಟ್ ಆಗಿದ್ದಾರೆ.

PhotoGrid Site 1686899506422

ರಿಯಲ್ ಸ್ಟಾರ್ ಉಪೇಂದ್ರರವರ ಫೋಟೋ ಹಾಗೂ ವಿಡಿಯೋಗಳು ವೈರಲ್ ಆಗಿವೆ. ಸದಾಶಿವ ನಗರದಲ್ಲಿ ಖರೀದಿಸಿ ದ ಹೊಸ ಮನೆಯ ಗೃಹಪ್ರವೇಶವು ಅದ್ದೂರಿಯಾಗಿ ಮಾಡಲಾಗಿದೆ. ಅದ್ದೂರಿಯಾಗಿ ನಡೆದ ಗೃಹಪ್ರವೇಶದಲ್ಲಿ ಉಪೇಂದ್ರ ಅವರ ತಂದೆ-ತಾಯಿ, ಸಹೋದರ, ಗೋಲ್ಡನ್ ಸ್ಟಾರ್ ಗಣೇಶ್ (Golden Star Ganesh) , ಗುರುಕಿರಣ್ (Gurukiran) ದಂಪತಿಗಳು, ಹಿರಿಯ ನಟಿ ಸರೋಜಾ ದೇವಿ (Senior Actor Saroja Devi) , ನಿರ್ದೇಶಕ ಮುರಳಿ ಮೋಹನ್ (Director Muruli Mohan) ಸೇರಿದಂತೆ ಸಿನಿಮಾರಂಗದವರು ಭಾಗಿಯಾಗಿದ್ದರು. ಮನೆಯ ಗೃಹಪ್ರವೇಶದ ಫೋಟೋ ಹಾಗೂ ವಿಡಿಯೋಗಳು ವೈರಲ್ ಆಗಿವೆ.

PhotoGrid Site 1686899542699

ಬಣ್ಣದ ಲೋಕದಲ್ಲಿ ಸಕ್ರಿಯರಾಗಿರುವ ನಟ ರಿಯಲ್ ಸ್ಟಾರ್ ಉಪೇಂದ್ರರವರು ಏಳು ವರ್ಷಗಳ ಬಳಿಕ ಯುಐ ಸಿನಿಮಾಗೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಪ್ಪ್ಯಾನ್ ಇಂಡಿಯಾ ಲೆವೆಲ್ ನಲ್ಲಿ ತಯಾರಾಗುತ್ತಿರುವ ಈ ಸಿನಿಮಾಕ್ಕೆ ನಿರ್ಮಾಪಕರಾದ ಲಹರಿ ಸಂಸ್ಥೆಯ ಮನೋಹರ್ (Manohar ) ಹಾಗೂ ಕೆ.ಪಿ ಶ್ರೀಕಾಂತ್ (KP Shreekant) ಬಂಡವಾಳ ಹೂಡಿಕೆ ಮಾಡಿದ್ದಾರೆ. ಕಬ್ಜ 2 (Kabza 2) ಸಿನಿಮಾದ ಬಗ್ಗೆ ಅಧಿಕೃತ ಮಾಹಿತಿಯೂ ಹೊರ ಬಿದ್ದಿದ್ದು ಶೂಟಿಂಗ್ ಆರಂಭವಾಗಿದೆ. ಹೀಗಾಗಿ ಉಪ್ಪಿ ಫ್ಯಾನ್ಸ್ ಗಳ ಚಿತ್ತ ಯುಐ ಹಾಗೂ ಕಬ್ಜ 2 ಸಿನಿಮಾಗಳತ್ತ ನೆಟ್ಟಿದ್ದು, ಸಿನಿಮಾದ ಬಗ್ಗೆ ಬಹಳ ನಿರೀಕ್ಷೆಯನ್ನು ಇಟ್ಟುಕೊಂಡಿದ್ದಾರೆ.

Advertisement