ಅಪ್ಪನ ರಿಯಲ್ ಕ್ಯಾರೆಕ್ಟರ್ ಬಿಚ್ಚಿಟ್ಟ ಐಶ್ವರ್ಯ! ವೀಕೆಂಡ್ ನಲ್ಲಿ ಭಾವುಕರಾದ ಡಿಕೆಶಿ.

Weekend With Ramesh 5 Grand Finale: ಕರ್ನಾಟಕ ರಾಜ್ಯದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ (Dk Shivakumar) ಅವರು ಕಾಂಗ್ರೆಸ್​​ನಲ್ಲಿ ಹಲವು ವರ್ಷಗಳಿಂದ ಆ್ಯಕ್ಟೀವ್ ಆಗಿದ್ದಾರೆ. ರಾಷ್ಟ್ರ ರಾಜಕೀಯದಲ್ಲಿಯೂ ಡಿಕೆ ಶಿವಕುಮಾರ್ ಪ್ರಮುಖ ವ್ಯಕ್ತಿಯಾಗಿ ಬಿಂಬಿತವಾಗುತ್ತಿದ್ದಾರೆ. ವರ್ಣರಜಿತ ರಾಜಕೀಯ ಜೀವನ ಅನುಭವಿಸಿರುವ ಹಾಗೂ ಅನುಭವಿಸುತ್ತಿರುವ ಡಿ.ಕೆ. ಶಿವಕುಮಾರ್ ಈಗ ‘ವೀಕೆಂಡ್ ವಿತ್ ರಮೇಶ್ ಸೀಸನ್​ 5’ರ (Weekend With Ramesh 5) ಕೊನೆಯ ಅತಿಥಿಯಾಗಿ ಆಗಮಿಸುತ್ತಿದ್ದಾರೆ. 100ನೇ ಸಾಧಕನಾಗಿ ಅವರು ವಿಶೇಷ ಕುರ್ಚಿ ಮೇಲೆ ಕೂರುತ್ತಿದ್ದಾರೆ. ಈ ಸಂಚಿಕೆಯ ಪ್ರೋಮೋ ವೈರಲ್ ಆಗಿದೆ.

‘ವೀಕೆಂಡ್ ವಿತ್ ರಮೇಶ್​ ಸೀಸನ್ 5’ ಮಾರ್ಚ್​ ತಿಂಗಳಲ್ಲಿ ಆರಂಭ ಆಯಿತು. ಮೊದಲ ಅತಿಥಿಯಾಗಿ ರಮ್ಯಾ ಆಗಮಿಸಿದ್ದರು. ನಂತರ ಡ್ಯಾನ್ಸಿಂಗ್ ಸ್ಟಾರ್ ಪ್ರಭುದೇವ, ಡಾಕ್ಟರ್​ ಮಂಜುನಾಥ್, ಹಿರಿಯ ನಟ ದತ್ತಣ್ಣ, ಅವಿನಾಶ್, ಮಂಡ್ಯ ರಮೇಶ್, ಸಿಹಿ ಕಹಿ ಚಂದ್ರು, ನೆನಪಿರಲಿ ಪ್ರೇಮ್ ಮೊದಲಾದವರು ಬಂದು ಸಾಧಕರ ಚೇರ್ ಮೇಲೆ ಕುಳಿತಿದ್ದಾರೆ. ಈಗ ಡಿಕೆ ಶಿವಕುಮಾರ್ ಅವರ ಬದುಕಿನ ಬಗ್ಗೆ ತಿಳಿದುಕೊಳ್ಳುವ ಸಮಯ.

‘ವೀಕೆಂಡ್ ವಿತ್ ರಮೇಶ್’ ವೇದಿಕೆ ಮೇಲೆ ಪತ್ನಿ ಉಶಾ ಶಿವಕುಮಾರ್, ಮಗಳು ಐಶ್ವರ್ಯಾ ಶಿವಕುಮಾರ್ ಮೊದಲಾದವರು ಆಗಮಿಸಿದ್ದಾರೆ. ‘ಹೊರಗಡೆ ಅವರು ಟಫ್ ಮ್ಯಾನ್. ಮನೆಯಲ್ಲಿ ಸಖತ್ ಎಮೋಷನಲ್. ಅವರು ನನ್ನ ಹೀರೋ’ ಎಂದು ಐಶ್ವರ್ಯಾ ಹೇಳಿಕೊಂಡಿದ್ದಾರೆ. ಸಿಹಿ ಕಹಿ ಚಂದ್ರು ಕೂಡ ವೇದಿಕೆ ಏರಿದ್ದು, ‘ಏನೇ ಆದರೂ ಶಿವಕುಮಾರ್ ಇರ್ತಾರೆ ಅನ್ನೋ ಗ್ಯಾರಂಟಿ’ ಎಂದಿದ್ದಾರೆ. ಸಿಎಂ ಸಿದ್ದರಾಮಯ್ಯ ಕೂಡ ಡಿಕೆಶಿ ಬಗ್ಗೆ ಮೆಚ್ಚುಗೆಯ ಮಾತುಗಳನ್ನು ಆಡಿದ್ದಾರೆ. ಈ ಪ್ರೋಮೋ ವೈರಲ್ ಆಗಿದೆ. ಆರನೇ ಕ್ಲಾಸ್​ನಲ್ಲೇ ರಾಜಕಾರಣಿ ಆಗಬೇಕು ಎನ್ನುವ ಕನಸನ್ನು ಡಿಕೆಶಿ ಕಂಡಿದ್ದರು. ಈ ಬಗ್ಗೆ ಅವರು ಹೇಳಿಕೊಂಡಿದ್ದಾರೆ.

 

View this post on Instagram

 

A post shared by Zee Kannada (@zeekannada)

ಡಿ.ಕೆ. ಶಿವಕುಮಾರ್ ಅವರ ಬಾಲ್ಯ, ಅವರ ಕುಟುಂಬ, ಶಿಕ್ಷಣ, ಕಾಲೇಜು ದಿನಗಳು, ಹೋರಾಟ, ಕಾಂಗ್ರೆಸ್ ಪಕ್ಷ ಸೇರ್ಪಡೆ, ಮೊದಲ ಚುನಾವಣೆ ಸೋಲು, ದೇವೇಗೌಡರನ್ನು ಸೋಲಿಸಿದ್ದು, ದೊಡ್ಡ ರಾಜಕಾರಣಿಗಳ ಸಖ್ಯ, ರಾಜಕೀಯದ ಪಟ್ಟುಗಳು, ಸಿಬಿಐ, ಇಡಿ, ಐಟಿ ಪ್ರಕರಣಗಳು, ಈ ಚುನಾವಣೆಯಲ್ಲಿನ ಅಭೂತಪೂರ್ವ ಗೆಲುವುಗಳ ಜೊತೆಗೆ ತಮ್ಮ ಕುಟುಂಬ, ಪತ್ನಿ, ಮಕ್ಕಳು ಹಾಗೂ ಸಹೋದರ ಡಿಕೆ ಸುರೇಶ್ ಸೇರಿದಂತೆ ಇನ್ನೂ ಹಲವು ವಿಷಯಗಳ ಬಗ್ಗೆ ಡಿಕೆ ಶಿವಕುಮಾರ್ ಮಾತನಾಡಲಿದ್ದಾರೆ ಎಂದು ನಿರೀಕ್ಷಿಸಲಾಗಿದೆ.