ನೆನ್ನೆ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಪತ್ನಿ ಗೀತಾ ರವರು (Shiva Rajkumar wife geeta)ಈ ವರ್ಷ ತುಂಬಾ ಸರಳವಾಗಿ ಹುಟ್ಟು ಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಗೀತಾ ಶಿವರಾಜಕುಮಾರ್(Geeta Shivraj Kumar birthday celebration) ರವರಿಗೆ ಈ ವರ್ಷ ಬಹಳ ವಿಶೇಷವಾದ ಹುಟ್ಟು ಹಬ್ಬ ಆದರೂ ಕೂಡ ಅವರು ತುಂಬಾ ಸರಳವಾಗಿ ತಮ್ಮ ಹುಟ್ಟು ಹಬ್ಬವನ್ನು ಶಿವರಾಜ್ ಕುಮಾರ್ ಟೀಮ್ ಹಾಗೂ ತಮ್ಮ ಮೊಮ್ಮಗನ ಜೊತೆ ಆಚರಿಸಿಕೊಂಡಿದ್ದಾರೆ. ಈ ಹುಟ್ಟು ಹಬ್ಬದ ದಿನ ಶಿವರಾಜ್ ಕುಮಾರ್ ಹಾಗೂ ಅವರ ಪತ್ನಿ ಗೀತಾ ಅಪ್ಪು ಇಲ್ಲ ಎನ್ನುವುದನ್ನು ನೆನಪಿಸಿಕೊಂಡು ಬೇಸರ ಮಾಡಿಕೊಂಡಿದ್ದಾರೆ.
ಶಿವರಾಜ್ ಕುಮಾರ್ ರವರ ಪತ್ನಿ ಗೀತಕ್ಕ ಕರ್ನಾಟಕದ ಮಾಜಿ ಮುಖ್ಯಮಂತ್ರಿ ಬಂಗಾರಪ್ಪ ರವರ ಮಗಳು ಇಂದಿಗೂ ಕೂಡ ಕಾಂಗ್ರೆಸ್ ಪಕ್ಷದಲ್ಲಿ ಆಕ್ಟಿವ್ ಆಗಿದ್ದಾರೆ. ಶಿವರಾಜ್ ಕುಮಾರ್ ಪತ್ನಿ ಗೀತಾ ಶಿವರಾಜ್ ಕುಮಾರ್ ಕಳೆದ ವರ್ಷ ಅವರ ಪತಿ ಶಿವಣ್ಣರವರ ವೇದ ಚಿತ್ರಕ್ಕೆ ನಿರ್ಮಾಪಕವಾಗಿ ಕೆಲಸ ಮಾಡಿದ್ದರು ವೇದ ಚಿತ್ರ ಕೂಡ ಸೂಪರ್ ಹಿಟ್ ಆಗಿ ಯಶಸ್ಸನ್ನು ಕಂಡಿತ್ತು.
ಕಳೆದ ತಿಂಗಳ ಎಲೆಕ್ಷನ್ ಸಮಯದಲ್ಲಿ ಗೀತಕ್ಕ ಕಾಂಗ್ರೆಸ್ ಪಕ್ಷದ ಪ್ರಚಾರ ಕಾರ್ಯಗಳಲ್ಲಿ ಇದ್ದರು ಗೀತಾ ರವರ ಸಹೋದರ ಮಧು ಬಂಗಾರಪ್ಪ(Madhu bangarappa) ಈ ಬಾರಿ ಎಲೆಕ್ಷನ್ ನಲ್ಲಿ ಗೆದ್ದು ಎಂಎಲ್ಎ ಆಗಿದ್ದಾರೆ. ಗೀತಾ ಶಿವರಾಜಕುಮಾರ್ ಈ ವರ್ಷ ತಮ್ಮ ಮೊಮ್ಮಗು ಹಾಗೂ ಶಿವರಾಜ್ ಕುಮಾರ್ ಟೀಮ್ ಜೊತೆ ಸರಳವಾಗಿ ಹುಟ್ಟುಹಬ್ಬವನ್ನು ಆಚಿಸಿಕೊಂಡಿದ್ದಾರೆ.
ಗೀತಾ ಶಿವರಾಜಕುಮಾರ್ ರವರ ಸರಳವಾದ ಹುಟ್ಟು ಹಬ್ಬದ ಫೋಟೋಗಳು ಗೀತಾ ರವರು ಶಿವರಾಜ್ ಕುಮಾರ್ ರವರಿಗೆ ಕೇಕ್ ತಿನ್ನಿಸುತ್ತಿರುವ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಬಾರಿ ವೈರಲ್ ಆಗುತ್ತಿವೆ.
ಶಿವರಾಜ್ ಕುಮಾರ್ ಹಾಗೂ ಅವರ ಪತ್ನಿ ಗೀತಾ ಪುನೀತ್ ರಾಜಕುಮಾರ್(Punit Rajkumar) ರವರನ್ನು ತುಂಬಾ ಪ್ರೀತಿಸುತ್ತಿದ್ದರು ತಮ್ಮ ಹುಟ್ಟು ಹಬ್ಬಕ್ಕೆ ಪ್ರತಿ ವರ್ಷ ಅಪ್ಪು ವಿಶ್ ಮಾಡುತ್ತಿದ್ದರು ಆದರೆ ಈ ವರ್ಷ ಅಪ್ಪು ಇಲ್ಲ ಎಂದು ತುಂಬಾ ಬೇಸರವಾಗುತ್ತಿದೆ ಎಂದು ಹೇಳಿಕೊಂಡಿದ್ದಾರೆ. ಅಷ್ಟೇ ಅಲ್ಲದೆ ಅಪ್ಪುವಿನ ಹೆಸರಿನಲ್ಲಿ ಗೀತಕ್ಕ ತಮ್ಮ ಹುಟ್ಟು ಹಬ್ಬದ ಸಲುವಾಗಿ ಅನಾಥಾಶ್ರಮಕ್ಕೆ 5 ಲಕ್ಷದ ಚೆಕ್ ವಿತರಿಸಿದ್ದಾರೆ.