ಯೂಟ್ಯೂಬರ್ ಚಂದನ್ ಗೌಡ (YouTuber Chandan Gowda)ಕೆ ಆರ್ ಪೇಟೆ ಚುನಾವಣೆಯಲ್ಲಿ ಸ್ಪರ್ಧಿಸಿ ಸೋಲನ್ನು ಕಂಡರು ಇದೀಗ youtuber ಚಂದನ್ ಗೌಡ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಖ್ಯಾತ ನಟಿಯ ಜೊತೆಗೆ ಚಂದನ್ ಗೌಡ ಎಂಗೇಜ್ಮೆಂಟ್ ಕೂಡ ಮಾಡಿಕೊಂಡಿದ್ದಾರೆ.
ಯೂಟ್ಯೂಬರ್ ಚಂದನ್ ಗೌಡ ತನ್ನ ಚಿಕ್ಕವಯಸ್ಸಿಗೆ ಯಾರ ಸಪೋರ್ಟ್ ಕೂಡ ಇಲ್ಲದೆ ಚುನಾವಣೆಗೆ ನಿಂತಿದ್ದರು ಅಷ್ಟೇ ಅಲ್ಲದೆ ವಿಧಾನಸಭಾ ಚುನಾವಣೆಯಲ್ಲಿ ಹೊಸ ಅಲೆಯನ್ನು ಕೂಡ ಸೃಷ್ಟಿ ಮಾಡಿದ್ದರು ಇದೀಗ ಚಂದನ್ ಖ್ಯಾತ ಕಿರುತೆರೆ ನಟಿಯ ಜೊತೆಗೆ ಆಪ್ತರ ಸಮ್ಮುಖದಲ್ಲಿ ಉಂಗುರವನ್ನು ಬದಲಾಯಿಸಿಕೊಂಡಿದ್ದಾರೆ.
ಉದಯ ಟಿವಿಯಲ್ಲಿ ಪ್ರಸಾರವಾಗುವ ಗೌರಿಪುರದ ಗಯ್ಯಾಳಿಗಳು ಧಾರವಾಹಿಯಲ್ಲಿ ನಟಿಸುತ್ತಿರುವ ನಟಿ ನವ್ಯ ನಾರಾಯಣಗೌಡ ರವರ ಜೊತೆಗೆ ಚಂದನ್ ಗೌಡ ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದಾರೆ. ನವ್ಯ ಗೌಡ ಕಿರುತೆರೆಯಲ್ಲಿ ಸಕ್ರಿಯ ರಾಗಿರುವ ನಟಿ ಹಲವಾರು ಧಾರವಾಹಿಗಳಲ್ಲಿ ನಟಿಸುತ್ತಿದ್ದಾರೆ.
ಇದೀಗ ನವ್ಯನಾರಾಯಣಗೌಡ ಯೌಟ್ಯೂಬರ್ ಚಂದನ್ ಗೌಡ ಜೊತೆಗೆ ಹಸೆಮಣೆ ಏರಲು ಎಲ್ಲಾ ಸಿದ್ಧತೆಗಳನ್ನು ಮಾಡಿಕೊಂಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಇವರಿಬ್ಬರ ಎಂಗೇಜ್ಮೆಂಟ್ ಫೋಟೋ ಹಾಗೂ ವಿಡಿಯೋಗಳು ಸಿಕ್ಕಾಪಟ್ಟೆ ವೈರಲ್ ಆಗುತ್ತಿವೆ.
ಇವರಿಬ್ಬರೂ ಎಂಗೇಜ್ಮೆಂಟ್ ಮಾಡಿಕೊಂಡಿರುವ ವಿಚಾರವನ್ನು ಬಿಟ್ಟು ಕೊಟ್ಟಿರಲಿಲ್ಲ ನವ್ಯ ಕೂಡ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿರಲಿಲ್ಲ ಹಾಗೆ ಚಂದನ್ ಗೌಡ ಕೂಡ ಯೂಟ್ಯೂಬ್ನಲ್ಲಿ ಅಪ್ಲೋಡ್ ಮಾಡಿಲ್ಲ ಆದರೂ ಇವರಿಬ್ಬರ ನಿಶ್ಚಿತಾರ್ಥದ ಫೋಟೋ ಹಾಗು ವಿಡಿಯೋಗಳು ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.