ಬಣ್ಣದ ಲೋಕದ ಸೆಳೆತ ಸಹಜವಾಗಿ ಎಲ್ಲರಿಗೂ ಕೂಡ ಇರುತ್ತದೆ. ಹೆಚ್ಚಿನವರು ಫ್ಯಾಮಿಲಿ ಬ್ಯಾಕ್ ಗ್ರೌಂಡ್ ನಿಂದಲೇ ಬಣ್ಣದ ಲೋಕಕ್ಕೆ ಎಂಟ್ರಿ ಕೊಡುತ್ತಾರೆ. ದೂರದಿಂದ ಸುಂದರವಾಗಿ ಕಾಣುವ ಈ ಬಣ್ಣದ ಲೋಕದಲ್ಲಿ ಬದುಕು ಕಟ್ಟಿಕೊಳ್ಳಲು ರಿಸ್ಕ್ ತೆಗೆದುಕೊಳ್ಳಬೇಕಾಗುತ್ತದೆ. ಆದರೆ ಅದೇನೋ ಕ್ರೇಜ್ ಗೆ ಬಿದ್ದು ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟರೂ, ಒಂದೆರಡು ಸಿನಿಮಾಗಳನ್ನು ಮಾಡಿ ಈ ಲೋಕದ ಸಹವಾಸವೇ ಬೇಡ ಎನ್ನುವವರು ಇದ್ದಾರೆ. ಇದೀಗ ಕಿಚ್ಚ ಸುದೀಪ್ (Kiccha Sudeep) ಅಳಿಯ ಸಂಚಿತ್ ಸಂಜೀವ್ (Sanchit Sanjeev) ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಟ್ಟಿದ್ದಾರೆ.
ಸಂಚಿತ್ ಚಿತ್ರರಂಗದ ಎಂಟ್ರಿಗೆ ವೇದಿಕೆ ಸಿನಿಮಾ ಮುಹೂರ್ತ ಕಾರ್ಯಕ್ರಮವು ನಡೆಡಿದ್ದು, ಈ ಕಾರ್ಯಕ್ರಮದಲ್ಲಿ ಕಿಚ್ಚ ಸುದೀಪ್ ಅವರ ಮಗಳು ಸಾನ್ವಿ (Sanvi) ಸೀರೆಯುಟ್ಟು ಬಹಳ ಸುಂದರವಾಗಿ ಕಾಣಿಸಿಕೊಂಡಿದ್ದಾರೆ. ಸಿನಿಮಾ ಮುಹೂರ್ತ ಕಾರ್ಯಕ್ರಮದಲ್ಲಿ ಭಾಗಿಯಾದ ಕಿಚ್ಚ ಸುದೀಪ್ ಅವರ ಮಗಳ ಮುದ್ದಾದ ವಿಡಿಯೋವೊಂದು ವೈರಲ್ ಆಗುತ್ತಿದೆ.
ಸಂಚಿತ್ ಸಂಜೀವ್ ಅವರಿಗೆ ಕಿಚ್ಚನ ಅಂಬಿ ನಿಂಗೆ ವಯಸ್ಸಾಯ್ತೋ (Ambi Ninge Vayassaayto), ವಿಕ್ರಾಂತ್ ರೋಣ (Vikranth Rona) ಸಿನಿಮಾಗಳಲ್ಲಿ ಕೆಲಸ ಮಾಡಿದ ಅನುಭವವಿದೆ. ತೆರೆ ಮೇಲೆ ಗುರುತಿಸಿಕೊಳ್ಳದಿದ್ದರೂ ತೆರೆ ಹಿಂದೆ ಸಕ್ರಿಯರಾಗಿದ್ದರು. ಬಣ್ಣದ ಲೋಕಕ್ಕೆ ಎಂಟ್ರಿ ಕೊಡಲು ಎಲ್ಲಾ ರೀತಿಯ ತಯಾರಿ ಮಾಡಿದ್ದು, ಈಗಾಗಲೇ ಮುಂಬೈ (Mumbai) ನಲ್ಲಿ ನಟನೆಯನ್ನು ಅಭ್ಯಾಸ ಮಾಡಿದ್ದಾರೆ. ಇದೀಗ ಬಣ್ಣದ ಲೋಕಕ್ಕೆ ಎಂಟ್ರಿ ಕೊಡುತ್ತಿರುವ ಸಂಚಿತ್ ಸಂಜೀವ್ ಅವರು ತಾವೇ ನಟಿಸಿ ನಿರ್ದೇಶನ ಮಾಡುತ್ತಿರುವುದು ವಿಶೇಷ.
ಜಿಮ್ಮಿ (Jimmi) ಸಿನಿಮಾವು ಕ್ರೈಂ ಡ್ರಾಮಾ ಆಗಿದ್ದು, ತಂದೆ-ಮಗನ ಬಾಂಧವ್ಯವನ್ನು ಸಾರುವ ಕಥೆಯಾಗಿದ್ದು, ಕಿಚ್ಚ ಕ್ರಿಯೇಷನ್ಸ್ ಬ್ಯಾನರ್ (Kiccha Creation Banner) ಜೊತೆ ಕೆ.ಪಿ ಶ್ರೀಕಾಂತ್ (KP Shreekanth) , ಮನೋಹರ್ ನಾಯ್ಡು (Manohar Naydu) ಚಿತ್ರಕ್ಕೆ ಬಂಡವಾಳ ಹೂಡಿಕೆ ಮಾಡಿದ್ದಾರೆ, ಈ ಬಗ್ಗೆ ಟ್ವೀಟ್ ಮಾಡಿ ಶ್ರೀಕಾಂತ್ ಮಾಹಿತಿ ನೀಡಿದ್ದು, ಸಂಚಿತ್ ಸಿನಿಮಾ ಬಗ್ಗೆ ಅಧಿಕೃತವಾಗಿ ಜೂನ್ 14ರಂದು (ನಿನ್ನೆ) ಘೋಷಣೆ ಮಾಡಿದ್ದಾರೆ.
ಲಹರಿ ಸಂಸ್ಥೆಯ ಮನೋಹರ್ ನಾಯ್ಡು, ವೀನಸ್ ಮೂವಿಸ್‌ನ ಕೆ. ಪಿ ಶ್ರೀಕಾಂತ್ ಜೊತೆ ಸೇರಿ ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ. ಉಪೇಂದ್ರ ನಟನೆಯ ‘ಯುಐ’ ಚಿತ್ರಕ್ಕೆ ಬಂಡವಾಳ ಹೂಡಿದ್ದು, ಅದರ ಜೊತೆಗೆ ವಿನಯ್ ರಾಜ್‌ಕುಮಾರ್ ನಟನೆಯ ‘ಗ್ರಾಮಾಯಣ’ ಚಿತ್ರಕ್ಕೂ ಬಂಡವಾಳ ಹೂಡಿದ್ದಾರೆ. ಆದರೆ ಇದೀಗ ಸಂಚಿತ್ ಸಂಜೀವ್ ಅವರ ಸಿನಿಮಾಕ್ಕೆ ಬಂಡವಾಳ ಹೂಡಿಕೆ ಮಾಡುತ್ತಿದ್ದು, ಕಿಚ್ಚ ಸುದೀಪ್ ಅಳಿಯ ತೆರೆ ಮೇಲೆ ಹೇಗೆ ಅಬ್ಬರಿಸುತ್ತಾರೆ ಎನ್ನುವುದನ್ನು ಕಾದು ನೋಡಬೇಕು