ಕೂದಲೆಳೆ ಅಂತರದಲ್ಲಿ ಅಂತರದಲ್ಲಿ ಸೋತ ಯಂಗ್ ಅಂಡ್ ಎನರ್ಜಿಟಿಕ್ ಲೀಡರ್ ನಿಖಿಲ್ ಕುಮಾರಸ್ವಾಮಿ ಕುಟುಂಬದ ಜೊತೆ ಸುಂದರ ಕ್ಷಣಗಳು ನೋಡಿ!!

ನಟ ಕಮ್ ರಾಜಕಾರಣಿ ನಿಖಿಲ್ ಕುಮಾರಸ್ವಾಮಿಯವರು ಯಾರಿಗೆ ತಾನೇ ಗೊತ್ತಿಲ್ಲ ಹೇಳಿ?. ಬಣ್ಣದ ಲೋಕ ಹಾಗೂ ರಾಜಕಾರಣಿದಲ್ಲಿ ಗುರುತಿಸಿಕೊಂಡಿರುವ ನಿಖಿಲ್ ಕುಮಾರಸ್ವಾಮಿಯವರು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟಿವ್ ಆಗಿದ್ದಾರೆ. ಆಗಾಗ ತಮ್ಮ ವೈಯುಕ್ತಿಕ ಬದುಕಿನ ಬಗ್ಗೆ ಅಪ್ಡೇಟ್ ನೀಡುವ ನಿಖಿಲ್ ಪ್ರತಿಯೊಂದು ಹಬ್ಬವನ್ನು ತಮ್ಮ ಮುದ್ದಾದ ಕುಟುಂಬದ ಜೊತೆಗೆ ಆಚರಿಸುತ್ತಾರೆ.

ಈ ಹಿಂದೆ ಭಾರತೀಯ ಹೊಸ ವರ್ಷವಾಗಿರುವ ಯುಗಾದಿ ಹಬ್ಬವನ್ನು ತನ್ನ ಕುಟುಂಬದ ಜೊತೆಗೆ ಆಚರಿಸಿದ್ದು, ಫ್ಯಾಮಿಲಿ ಜೊತೆಗಿನ ಫೋಟೋವನ್ನು ಹಂಚಿಕೊಂಡು, ಯುಗಾದಿ ಹಬ್ಬದ ಶುಭಾಶಯಗಳು ಎಂದು ಶುಭಾಶಯ ಕೋರಿದ್ದರು. ಈ ಪೋಸ್ಟ್ ಗೆ ಒಂದೂವರೆ ಲಕ್ಷದಷ್ಟು ಲೈಕ್ಸ್ ಬಂದಿತ್ತು. ಜಾಗ್ವಾರ್ (jagvar) ಸಿನಿಮಾದ ಮೂಲಕ ಕನ್ನಡ ಚಿತ್ರರಂಗಕ್ಕೆ ನಾಯಕನಾಗಿ ಎಂಟ್ರಿ ಕೊಟ್ಟ ನಿಖಿಲ್ ಕುಮಾರ್ (Nikhil Kumaraswami) ಸಿನಿಮಾರಂಗದಲ್ಲಿ ಹೇಳಿಕೊಳ್ಳುವಷ್ಟೇನು ಯಶಸ್ಸು ಕಂಡಿಲ್ಲ.

PhotoGrid Site 1686918289464

ರಾಜಕೀಯರಂಗದಲ್ಲಿಯೂ ಅಷ್ಟೇನು ಯಶಸ್ಸು ಸಿಕ್ಕಿಲ್ಲ. ಆದರೆ ಈ ಎರಡು ರಂಗದಲ್ಲಿಯೂ ಆಕ್ಟಿವ್ ಆಗಿರುವ ನಿಖಿಲ್ ಕುಮಾರಸ್ವಾಮಿಯವರ ಅಭಿಮಾನಿ ಬಳಗ ದೊಡ್ಡದಿದೆ. ಅದಲ್ಲದೇ, 2020 ಲಾಕ್ಡೌನ್ ನಲ್ಲಿ ಅಂದರೆ ಏಪ್ರಿಲ್ 17 ರಲ್ಲಿ ನಿಖಿಲ್ ಕುಮಾರಸ್ವಾಮಿ (Nikhil Kumaraswami) ರವರು ರೇವತಿ ( Revathi) ಯವರ ಜೊತೆಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟರು.

ವೈವಾಹಿಕ ಜೀವನಕ್ಕೆ ಕಾಲಿಟ್ಟ ಬಳಿಕ ಬಿಡದಿ (Bidadi) ಸಮೀಪದ ತೋಟದ ಮನೆಯಲ್ಲಿ ವಾಸವಾಗಿದ್ದರು. ಇದೀಗ ನಿಖಿಲ್ ಕುಮಾರಸ್ವಾಮಿಯವರ ಸಬದುಕನ್ನು ಮತ್ತಷ್ಟು ಸೊಗಸಾಗಿಸಲು ಮಗ ಅವ್ಯಾನ್ ದೇವ್ ಬಂದಿದ್ದನು. ಕಳೆದ ವರ್ಷ 2022 ಸೆಪ್ಟೆಂಬರ್ 24 ಕ್ಕೆ ಮುದ್ದಿನ ಮಗನಿಗೆ ಒಂದು ವರ್ಷ ತುಂಬಿತ್ತು. ನಿಖಿಲ್ ಕುಮಾರಸ್ವಾಮಿ ಪುತ್ರ ಆವ್ಯಾನ್ ದೇವ್ (Avyan Dev) 1 ನೇ ವರ್ಷದ ಹಟ್ಟುಹಬ್ಬದ ಅಂಗವಾಗಿ ರಾಮನಗರ (Ramanagara) ದ ಚಾಮುಂಡೇಶ್ವರಿಗೆ ಪೂಜೆ ಸಲ್ಲಿಸಿದರು.

PhotoGrid Site 1686918304936

ರಾಮನಗರದ ಶಕ್ತಿದೇವತೆ ಶ್ರೀ ಚಾಮುಂಡೇಶ್ವರಿ ತಾಯಿಗೆ ಶಾಸಕಿ ಅನಿತಾ ಕುಮಾರಸ್ವಾಮಿ, ನಿಖಿಲ್ ಕುಮಾರಸ್ವಾಮಿ, ನಿಖಿಲ್ ಪತ್ನಿ ರೇವತಿ ಒಟ್ಟಿಗೆ ಕಾಣಿಸಿಕೊಂಡಿದ್ದರು. ತದನಂತರದಲ್ಲಿ ಜೆಡಿಎಸ್ ಕಾರ್ಯಕರ್ತರ ಸಂಭ್ರಮಾಚರಣೆಯಲ್ಲಿ ಭಾಗಿಯಾಗಿ ಅವ್ಯಾನ್ ದೇವ್ ಕೈಯಲ್ಲಿ ಕೇಕ್ ಕಟ್ ಮಾಡಿಸಿದ್ದರು. ಹೌದು, ಪಟಾಕಿ ಸಿಡಿಸಿ ಕೇಕ್ ಕಟ್ ಮಾಡುವ ಮೂಲಕ ಹುಟ್ಟುಹಬ್ಬ ಆಚರಿಸಿದ್ದರು. ಹೀಗೆ ಫ್ಯಾಮಿಲಿ ಜೊತೆಗೆ ಸದಾ ಸುದ್ದಿಯಲ್ಲಿರುವ ನಟ ನಿಖಿಲ್ ಕುಮಾರಸ್ವಾಮಿಯವರು ಅಭಿಮಾನಿಗಳಿದ್ದಾರೆ.