Meghana raj : ಮೇಘನಾ ರಾಜ್ ಅವರ ಬದುಕಿಗೆ ಚಿರು (Chiru) ಎನ್ನುವ ಹೆಸರೇ ಜೀವಂತಿಕೆಯ ಸಂಕೇತ ಎನ್ನಬಹುದು. ಮೂರು ವರ್ಷಗಳ ಹಿಂದೆ ಇದೇ ದಿನ (ಜೂನ್ 7) ಕನ್ನಡ ಚಿತ್ರರಂಗ ಯುವ ಸಾಮ್ರಾಟ್ ಚಿರಂಜೀವಿ ಸರ್ಜಾರವರು ಹೃದಯಾಘಾತದಿಂದ ಕೊನೆ ಯುಸಿರೆಳೆದರು. ಇದು ಸರ್ಜಾ ಕುಟುಂಬಕ್ಕೆ, ಇಡೀ ಚಿತ್ರರಂಗಕ್ಕೆ ಆಘಾತವನ್ನುಂಟು ಮಾಡಿತ್ತು. ಅದರಲ್ಲಿಯೂ ಮೇಘನಾ ರಾಜ್ (Meghana Raj) ಅವರು ಪತಿಯಿಲ್ಲ ಎನ್ನುವ ಸತ್ಯ ವನ್ನು ಅರಗಿಸಿಕೊಳ್ಳಲು ಸಾಧ್ಯವಿಲ್ಲ ಎನ್ನುವ ಪರಿಸ್ಥಿತಿಯಲ್ಲಿದ್ದರು. ಇದೀಗ ಪತಿಯ ನೆನಪಿನಲ್ಲಿಯೇ ಜೀವನ ಸಾಗಿಸುವುತ್ತಿದ್ದು, ಮಗನ್ ಖುಷಿಯಲ್ಲಿ ತನ್ನ ಖುಷಿಯನ್ನು ಕಾಣುತ್ತಿದ್ದಾರೆ.
ಜೂನ್ 7 ರಂದು ಚಿರಂಜೀವಿ ಸರ್ಜಾ (Chiranjeevi Sarja) ಅವರ ಮೂರನೇ ಪುಣ್ಯತಿಥಿ. ಚಿರುರವರ ಪುಣ್ಯತಿಥಿಯಂದು ಸಹೋದರ ಧ್ರುವ ಸರ್ಜಾ (Dhruva Sarja) , ಪುತ್ರ ರಾಯನ್ (Rayan) ಸೇರಿದಂತೆ ಇಡೀ ಕುಟುಂಬವೇ ಪುಣ್ಯತಿಥಿಯಲ್ಲಿ ಭಾಗಿಯಾಗಿತ್ತು. ಈ ದಿನವೆ ಮೇಘನಾ ರಾಜ್ ಪತಿ ಚಿರಂಜೀವಿ ಸರ್ಜಾರನ್ನು ನೆನೆದು ಭಾವುಕ ಪೋಸ್ಟ್ ಮಾಡಿದ್ದಾರೆ. ಪತಿಯ ಪುಣ್ಯತಿಥಿಯಂದು ಮೇಘನಾ ರಾಜ್ ಇಬ್ಬರೂ ಜೊತೆಗಿರುವ ಹಳೆಯ ಫೋಟೊವನ್ನು ಇನ್‌ಸ್ಟಾಗ್ರಾಂನಲ್ಲಿ ಶೇರ್ ಮಾಡಿಕೊಂಡಿದ್ದು, ಪತಿಯ ಬಗ್ಗೆ ಭಾವನಾತ್ಮಕ ಸಾಲುಗಳನ್ನು ಬರೆದುಕೊಂಡಿದ್ದಾರೆ.
ಹೌದು ನಟಿ ಮೇಘನಾ ರಾಜ್ ಅವರು ಇನ್‌ಸ್ಟಾಗ್ರಾಂನಲ್ಲಿ ಹಳೆಯ ಫೋಟೊವನ್ನು ಶೇರ್ ಮಾಡಿದ್ದು, “ನನ್ನ ನಿನ್ನೆಗಳು, ಇಂದು ಮತ್ತು ಎಂದೆಂದಿಗೂ ನೀನೆ” ಎನ್ನುವ ಅರ್ಥದಲ್ಲಿ ಕೆಲವು ಪದಗಳನ್ನು ಬರೆದುಕೊಂಡಿದ್ದಾರೆ. ಮೇಘನಾ ರಾಜ್ ಅವರ ಪೋಸ್ಟ್ ನೋಡಿ ಫ್ಯಾನ್ಸ್ ಕೂಡ ಭಾವುಕರಾಗಿದ್ದಾರೆ. ಈ ಪೋಸ್ಟ್ ಗೆ ಪ್ರತಿಕ್ರಿಯೆ ನೀಡುವ ಮೂಲಕ ಮೇಘನಾ ರಾಜ್ ಅವರನ್ನು ಸಮಾಧಾನ ಪಡಿಸುವ ಪ್ರಯತ್ನ ಮಾಡಿದ್ದಾರೆ.
“ಓ ಮೈ ಗಾಢ್.. ನನಗೆ ಅವರು ಇಲ್ಲಿ ಇಲ್ಲ ಅಂತ ಈಗ ಫೀಲ್ ಆಗುತ್ತಿದೆ” ಎಂದು ನೆಟ್ಟಿಗರೊಬ್ಬರು ಕಮೆಂಟ್ ಮಾಡಿದರೆ, ಮತ್ತೊಬ್ಬರು “ಎಂದೆಂದಿಗೂ ಚಿರು” ನೆನೆಪು ಎಂದು ಬರೆದುಕೊಂಡಿದ್ದಾರೆ. ಅದಲ್ಲದೇ ಮೇಘನಾ ರಾಜ್ ಅವರು ತಮ್ಮ ಇನ್ಸ್ಟಾಗ್ರಾಮ್ ನಲ್ಲಿ ವಿಡಿಯೋವೊಂದನ್ನು ಶೇರ್ ಮಾಡಿಕೊಂಡಿದ್ದಾರೆ. ಈ ವಿಡಿಯೋದಲ್ಲಿ ಮೂವರು ಮಕ್ಕಳು ಚಿರು ಸಮಾಧಿಯ ಬಳಿ ಚಿರು ಫೋಟೋಗೆ ಹೂವನ್ನು ಹಾಕುತ್ತಿದ್ದಾರೆ. ಈ ವಿಡಿಯೋ ನೋಡಿದರೆ, ಮಗುವಿನ ಮನಸ್ಸಿನ ಚಿರು ಇಷ್ಟು ಬೇಗ ಎಲ್ಲರನ್ನು ಬಿಟ್ಟು ಹೋಗಬಾರದಿತ್ತು ಎಂದೇನಿಸದೇ ಇರದು.
View this post on Instagram