ತನ್ನ ಗೆಳೆಯನ ಹುಟ್ಟುಹಬ್ಬಕ್ಕೆ ದುಬಾರಿ ಬೆಲೆಯ ಕಾರನ್ನು ಉಡುಗೊರೆ ನೀಡಿದ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ!! ಕಾರಿನ ಬೆಲೆ ಎಷ್ಟು ಗೊತ್ತಾ? ಇದು ಕಣ್ರೋ ನಿಜವಾದ ಗೆಳೆತನ ಅಂದರೆ!!!

Dhruva sarja gifts expensive car to his friend Ashwin on his birthday : ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ (Action Prince Dhruva Sarja) ಸ್ಯಾಂಡಲ್‌ವುಡ್‌ನಲ್ಲಿ ಬಹುಬೇಡಿಕೆಯ ನಟರಾಗಿದ್ದಾರೆ. ವೃತ್ತಿ ಜೀವನದಲ್ಲಿ ಬ್ಯುಸಿಯಾಗಿರುವ ನಟ, ಬಿಡುವು ಮಾಡಿಕೊಂಡು ತನ್ನ ಸ್ನೇಹಿತನಿಗಾಗಿ ವಿಶೇಷ ಉಡುಗೊರೆಯನ್ನು ನೀಡಿದ್ದಾರೆ. ಸ್ಟಾರ್ ನಟನಾಗಿದ್ದರೂ ತನ್ನ ಸ್ನೇಹಿತನನ್ನು ಖುಷಿ ಪಡಿಸುವ ಕೆಲಸ ಮಾಡಿದ್ದಾರೆ. ಹೌದು, ತನ್ನ ಆತ್ಮೀಯ ಗೆಳೆಯ ಅಶ್ವಿನ್‌ (Ashwin) ಗೆ ದುಬಾರಿ ಮೊತ್ತದ ಕಾರನ್ನು ಗಿಫ್ಟ್ ಮಾಡಿದ್ದಾರೆ.

ಅಶ್ವಿನ್ ಹುಟ್ಟುಹಬ್ಬದಂದು ಗೆಳೆಯನನ್ನು ಶೋ ರೂಮ್ ಗೆ ಕರೆದುಕೊಂಡು ಹೋಗಿದ್ದಾರೆ. ಸ್ನೇಹಿತನಿಗೆ ಗೊತ್ತಿಲ್ಲದಂತೆ ಸರ್ಪ್ರೈಸ್ ಆಗಿ ಕಾರನ್ನು ನೀಡಿದ್ದಾರೆ. ಸ್ಯಾಂಡಲ್ ವುಡ್ ನಟ ಧ್ರುವ ಸರ್ಜಾರವರು, ಗೆಳೆಯ ಅಶ್ವಿನ್ ಅವರಿಗೆ 52 ಲಕ್ಷ ಬೆಲೆ ಬರುವ ಕಾರನ್ನು ಉಡುಗೊರೆಯಾಗಿ ನೀಡಿದ್ದು, ಈ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.

ಧ್ರುವ ಸರ್ಜಾರವರು ಗಿಫ್ಟ್ ನೀಡಿದ ಬಗ್ಗೆ ಗೆಳೆಯ ಅಶ್ವಿನ್ (Ashwin) ಮಾಧ್ಯಮದವರ ಜೊತೆಗೆ ಮಾತನಾಡಿದ್ದಾರೆ, ಈ ಬಗ್ಗೆ ಮಾತನಾಡಿರುವ ಅಶ್ವಿನ್ ಅವರು, “ಹೀಗೊಂದು ಉಡುಗೊರೆ ಕೊಡುತ್ತಾರೆ ಎಂಬುದು ನನಗೇ ಗೊತ್ತಿರಲಿಲ್ಲ. ಸರ್ಪ್ರೈಸ್ ಆಗಿ ಎಲ್ಲವನ್ನು ಪ್ಲ್ಯಾನ್ ಮಾಡಿ ಉಡುಗೊರೆ ಕೊಟ್ಟಿದ್ದಾರೆ. ನಾನು ನೋಡದೇ ಇದ್ದ ಅಪ್ಪ-ಅಮ್ಮನ ಫೋಟೊ ಸಹ ಕೊಟ್ಟಿದ್ದಾರೆ. ಧ್ರುವ ಸರ್ಜಾ ಗೆಳೆತನಕ್ಕೆ ಬಹಳ ಬೆಲೆ ಕೊಡುವ ವ್ಯಕ್ತಿ. ಎಷ್ಟೋ ಜನರಿಗೆ ಅವರು ಸಹಾಯ ಮಾಡಿದ್ದಾರೆ” ಎಂದಿದ್ದಾರೆ.

ಅದಲ್ಲದೇ, “ಸಾಕಷ್ಟು ಜನರ ಆಸ್ಪತ್ರೆ ಬಿಲ್ ಕೊಟ್ಟಿದ್ದಾರೆ. ಶಾಲೆಯ ಫೀಸು ಕೊಟ್ಟಿದ್ದಾರೆ. ಬಂದವರಿಗೆಲ್ಲ ಸಹಾಯ ಮಾಡಿದ್ದಾರೆ. ಆದರೆ ಯಾವುದನ್ನೂ ಪ್ರಚಾರ ಮಾಡಿಕೊಂಡವರಲ್ಲ. ನನಗೂ ಸಹ ಈ ಉಡುಗೊರೆ ಕೊಟ್ಟ ವಿಡಿಯೋ ಹೊರಗೆ ಹೋಗಬಾರದು ಎಂದಿದ್ದರು. ಆದರೆ ಅವರು ಮಾಡುವ ಕಾರ್ಯವನ್ನು ಜನರಿಗೆ ಹೇಳಬೇಕು ಎಂದು ವಿಡಿಯೋ ಹಾಕಿಕೊಂಡಿದ್ದೇನೆ” ಎಂದಿದ್ದಾರೆ ಗೆಳೆಯ ಅಶ್ವಿನ್.

ನಟ ಧ್ರುವ ಸರ್ಜಾರವರ ಕೈಯಲ್ಲಿ ಸಾಲು ಸಾಲು ಸಿನಿಮಾಗಳಿದ್ದು, ಬಿಗ್ ಬಜೆಟ್ ಸಿನಿಮಾಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಎ ಪಿ ಅರ್ಜುನ್ (AP Arjun) ಆಕ್ಷನ್ ಕಟ್ ಹೇಳಿರುವ ಮಾರ್ಟಿನ್ (Martin) ಸಿನಿಮಾ ಬಿಡುಗಡೆಗೆ ಸಜ್ಜಾಗಿದ್ದು, ಸದ್ಯದಲ್ಲೇ ತೆರೆಗೆ ಬರಲಿದೆ. ಅದರ ಜೊತೆಗೆ, ಜೋಗಿ ಪ್ರೇಮ್ ( Jogi Prem) ನಿರ್ದೇಶಿಸುತ್ತಿರುವ ಪ್ಯಾನ್ ಇಂಡಿಯಾ ಸಿನಿಮಾ ‘ಕೆಡಿ’ (KD) ಶೂಟಿಂಗ್ ನಡೆಯುತ್ತಿದೆ. ಕೆವಿಎನ್ ಪ್ರೊಡಕ್ಷನ್ (KVN Production) ದುಬಾರಿ ಬಜೆಟ್‌ನಲ್ಲಿ ಈ ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದು, ಬಾಲಿವುಡ್ ನಟ ಸಂಜಯ್ ದತ್ ( Sanjay Datt) ಹಾಗೂ ಶಿಲ್ಪಾ ಶೆಟ್ಟಿ (Shilpa Shetty) ನಟಿಸುತ್ತಿದ್ದಾರೆ.