ಮಗ ಗಾಲವ್ ಜೊತೆಗೆ ಕ್ಯಾಮೆರಾಗೆ ಪೋಸ್ ಕೊಟ್ಟ ನಟ ಅವಿನಾಶ್, ತಂದೆ ಮಗನ ಅಪರೂಪದ ಫೋಟೋ ವೈರಲ್!!

Avinash son photos ಸೆಲೆಬ್ರಿಟಿಗಳ ಜೀವನವು ಆರಾಮದಾಯಕವಾಗಿರುತ್ತದೆ ಎಂದೇ ಭಾವಿಸಿರುತ್ತೇವೆ. ಆದರೆ ಅವರುಗಳಿಗೂ ವೈಯುಕ್ತಿಕ ಬದುಕಿನಲ್ಲಿ ಸಾಕಷ್ಟು ಕಷ್ಟಗಳು ಇರುತ್ತದೆ. ಆದರೆ ಕೆಲವು ನಟ ನಟಿಯರು ಈ ಬಗ್ಗೆ ಎಲ್ಲಿಯೂ ಮಾತನಾಡುವುದಿಲ್ಲ. ಇತ್ತೀಚೆಗಷ್ಟೇ ವೀಕೆಂಡ್ ವಿತ್ ರಮೇಶ್ ಸೀಸನ್​ 5 ನಟ ಅವಿನಾಶ್ (Actor Avinash) ಹಾಗೂ ನಟಿ ಮಾಳವಿಕಾ (Actress Malavika) ರವರ ಮಗನನ್ನು ಮೊದಲ ಬಾರಿಗೆ ಪರದೆಯ ಮೇಲೆ ತೋರಿಸಲಾಗಿತ್ತು.

ಅದಲ್ಲದೇ, ಅಪರೂಪದ ಕಾಯಿಲೆಯಿಂದ ಬಳಲುತ್ತಿರುವ ಮಗ ಗಾಲವ್ (Gaalav) ನಿಗೆ ಇರುವ ಕಾಯಿಲೆ ಯಾವುದು ಎನ್ನುವ ಬಗ್ಗೆ ಅವಿನಾಶ್ ಹಾಗೂ ಅವರ ಪತ್ನಿ ಮಾಳವಿಕಾ ಅವಿನಾಶ್ ಮಾತನಾಡಿದ್ದು, ತಮ್ಮ ನೋವನ್ನು ತೋಡಿಕೊಂಡಿದ್ದರು. ಅದಲ್ಲದೆ ಇದೀಗ ನಟ ಅವಿನಾಶ್ ಅವರ ಮಗನ ಜೊತೆಗೆ ಇರುವ ಫೋಟೋವೊಂದು ವೈರಲ್ ಆಗಿವೆ. ಈ ಫೋಟೋದಲ್ಲಿ ಗಾಲವ್ ತಂದೆಯ ಪಕ್ಕದಲ್ಲಿ ಕುಳಿತುಕೊಂಡಿದ್ದಾನೆ. ಈ ಫೋಟೋಗೆ ಐದು ಸಾವಿರಕ್ಕೂ ಅಧಿಕ ಲೈಕ್ಸ್ ಬಂದಿದೆ.

ವೀಕೆಂಡ್ ವಿತ್ ರಮೇಶ್ ವೇದಿಕೆಯಲ್ಲಿ ನಟಿ ಮಾಳವಿಕಾ ಅವಿನಾಶ್ (Actress Malavika Avinash) ಅವರು ಮಾತನಾಡಿದ್ದು , ರಮೇಶ್ ಅರವಿಂದ್ ಆ ರೀತಿ ಅಲ್ಲ. ಯಾವ ಪರಿಸ್ಥಿತಿಯಲ್ಲಿ ಹೇಗೆ ಮಾತನಾಡಬೇಕು ಎಂಬುದು ಅವರಿಗೆ ಗೊತ್ತು. ಇದೇ ಕಾರಣಕ್ಕೆ ಮಗನನ್ನು ‘ವೀಕೆಂಡ್ ವಿತ್ ರಮೇಶ್’ ಶೋಗೆ ಕರೆತರುವುದಕ್ಕೆ ಅವರು ಒಪ್ಪಿರುವ ಬಗ್ಗೆ ನಟಿ ಮಾಳವಿಕಾ ಅವಿನಾಶ್ ಬಹಿರಂಗ ಪಡಿಸಿದ್ದಾರೆ. ಅದರ ಜೊತೆಗೆ ಮಗನ ಬಗ್ಗೆ ಮಾತು ಆರಂಭಿಸಿದ ನಟಿ ‘ಮಗ ಗಾಲವ್​​ನನ್ನು ಕಾಳಿ (ಕೇರ್​ ಟೇಕರ್) ನೋಡಿಕೊಳ್ಳುತ್ತಾಳೆ. ಹೆತ್ತವಳು ಮಾತ್ರ ನಾನು, ಆದರೆ, ಇವನನ್ನು ಸಾಕುವವಳು ಇವಳೇ. ಗಾಲವ್ ಹುಟ್ಟಿದಾಗ ಎಲ್ಲರ ರೀತಿ ಇರಲಿಲ್ಲ. ಅವನನ್ನು ನೋಡಿ ಒಬ್ಬೊಬ್ಬರು ಒಂದೊಂದು ರೀತಿ ಹೇಳುತ್ತಿದ್ದರು. 2018ರಲ್ಲಿ ಆತನ ಆರೋಗ್ಯದಲ್ಲಿ ತೀವ್ರ ಏರುಪೇರಾಯಿತು. ಆತ 50 ದಿನ ಐಸಿಯುನಲ್ಲಿ ಇದ್ದ. ನಮ್ಮನ್ನು ಬಿಟ್ಟು ಹೋಗೋಕೆ ರೆಡಿ ಆದ ಎಂದುಕೊಂಡೆ. ಆದರೆ, ಬದುಕಿದ’ ಎಂದಿದ್ದರು.

ಅಭಿಷೇಕ್ ಅಂಬರೀಷ್ ಮದುವೆಯಲ್ಲಿ ರಮ್ಯಾ ಕೃಷ್ಣನ್ ಜೊತೆಗೆ ರಾಕಿಂಗ್ ಸ್ಟಾರ್ ಯಶ್ ಚಿಂದಿ ಡಾನ್ಸ್!! ರಾಧಿಕಾ ಪಂಡಿತ್ ಸುಸ್ತೋ ಸುಸ್ತು!!

ಅದರ ಜೊತೆಗೆ, ‘ನಾವು ಒಂದು ಪರೀಕ್ಷೆ​ ಮಾಡಿಸಿದೆವು. ಅವನಿಗೆ ವುಲ್ಫ್ ಹರ್ಷೋನ್ ಸಿಂಡ್ರೋಮ್ ಇದೆ ಅಂತ ನಮಗೆ ವೈದ್ಯಕೀಯ ಪರೀಕ್ಷೆಯಲ್ಲಿ ಗೊತ್ತಾಯ್ತು. ಆರಂಭದಲ್ಲಿ ನಮಗೆ ಯಾವ ವೈದ್ಯರೂ ಈ ಬಗ್ಗೆ ಹೇಳಿರಲಿಲ್ಲ. ಈ ಸಿಂಡ್ರೋಮ್ ಇದ್ದರೆ ಬುದ್ಧಿಮಾಂದ್ಯತೆ ಉಂಟಾಗುತ್ತದೆ. ಮಾತು ಬರುವುದಿಲ್ಲ. ನಡಿಗೆ ಸ್ವಲ್ಪ ಬರುತ್ತದೆ. ಆಯಸ್ಸಿನ ಬಗ್ಗೆ ಗ್ಯಾರಂಟಿ ಇಲ್ಲ. ಪರೀಕ್ಷೆ ಮಾಡಿಸಿದಾಗ, ನಿಮ್ಮ ಕಾರಣಕ್ಕೂ, ಅವಿನಾಶ್ ಕಾರಣಕ್ಕೂ ಅವನು ಹಿಗಿಲ್ಲ. ನೀವು ಅನ್​ಲಕ್ಕಿ ಅಷ್ಟೇ ಎಂದು ವೈದ್ಯರು ಹೇಳಿದರು’ ಎನ್ನುವುದನ್ನು ರಿವೀಲ್ ಮಾಡಿದ್ದರು.