Sanju basayya wife : ಕನ್ನಡ ಕಿರುತೆರೆ ಲೋಕದ ಶೋಗಳು ಅನೇಕ ಪ್ರತಿಭೆಗಳಿಗೆ ಅವಕಾಶಗಳನ್ನು ನೀಡಿವೆ. ಈಗಾಗಲೇ ಶೋ ಮೂಲಕ ಫೇಮಸ್ ಆದವರಲ್ಲಿ ಸಂಜು ಬಸಯ್ಯಾ (Sanju Basayya) ಕೂಡ ಒಬ್ಬರು. ಕಾಮಿಡಿ ಕಿಲಾಡಿಗಳು ಶೋಗೆ ಎಂಟ್ರಿ ಕೊಟ್ಟು, ಸ್ಯಾಂಡಲ್ ವುಡ್ ನಲ್ಲಿ ಹಲವಾರು ಚಿತ್ರಗಳಲ್ಲಿ ನಟಿಸಿದರು. ಈ ಹಿಂದೆ ಕಾಮಿಡಿ ಕಿಲಾಡಿಗಳು ವೇದಿಕೆಯ ಮೇಲೆ ತಮ್ಮ ಲವ್ ಸ್ಟೋರಿ ಹಾಗೂ ಪ್ರೀತಿಸುತ್ತಿರುವ ಹುಡುಗಿಯ ಬಗ್ಗೆ ಸಂಜು ಬಸಯ್ಯ ಮುಕ್ತವಾಗಿ ಹೇಳಿಕೊಂಡಿದ್ದರು. ಇದೀಗ ಸದ್ದಿಲ್ಲದೆ, ತಮ್ಮ ಬಹುಕಾಲದ ಪ್ರೇಯಸಿಯ ಜೊತೆಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.
ಉತ್ತರ ಕರ್ನಾಟಕ (North Karnataka) ಮೂಲದ ಸಂಜುರವರು ವೃತ್ತಿ ಮತ್ತು ಪ್ರವೃತ್ತಿಯಿಂದ ನಟನೆಯನ್ನೇ ನಂಬಿಕೊಂಡು ಬಂದವರು. ಬೆಳಗಾವಿ ಜಿಲ್ಲೆಯ ಮುರುಗೋಡು ಗ್ರಾಮದ ಸಂಜುರವರು , ನಾಟಕ ಕಂಪೆನಿಗಳಲ್ಲಿ ಸಕ್ರಿಯರಾಗಿದ್ದರು. ಅದಲ್ಲದೇ, ಕುಳ್ಳ ಮಿಂಡ್ರಿ, ಮೆಣಸಿನಕಾಯಿ ಬಸ್ಯಾ, ಸಂಜು ಬಸಯ್ಯ ಹೀಗೆ ನಾನಾ ಹೆಸರುಗಳಿಂದ ಕರೆಯುವ ಸಂಜು ಬಸಯ್ಯರವರಿಗೆ ದೊಡ್ಡ ಸಂಖ್ಯೆಯಲ್ಲಿ ಅಭಿಮಾನಿಗಳಿದ್ದಾರೆ.
ತಮ್ಮ ನಟನೆಯಿಂದಲೇ ಎಲ್ಲರ ಮನಸ್ಸು ಗೆದ್ದುಕೊಂಡಿರುವ ಸಂಜು ಬಸಯ್ಯ ಇತ್ತೀಚೆಗಷ್ಟೇ ರಿಜಿಸ್ಟರ್ ಮದುವೆಯಾಗಿದ್ದಾರೆ. ಸಂಜು ಅವರು ಮದುವೆ ಆಗಿದ್ದು ನಟಿ ಪಲ್ಲವಿ ಬಳ್ಳಾರಿ (Pallavi Ballari) ಎನ್ನುವ ಯುವತಿಯನ್ನು. ಪಲ್ಲವಿ ಕೂಡ ನಾಟಕದಲ್ಲಿ ಕಲಾವಿದೆಯಾಗಿದ್ದು, ಮಲ್ಲು ಜಮಖಂಡಿ, ಶಿವಪುತ್ರ ಯಶಾರದಾ ಸೇರಿ ಅನೇಕ ಕಿರು ಚಿತ್ರಗಳಲ್ಲಿ ನಟಿಸಿದ್ದಾರೆ.
ಏಳೆಂಟು ವರ್ಷಗಳ ಹಿಂದೆಯೇ (Sanju basayya) ಮತ್ತು ಪಲ್ಲವಿ ಅವರ ಪರಿಚಯವಾಗಿತ್ತು. ಆ ಪರಿಚಯವು ಸ್ನೇಹವು, ಕೊನೆಗೆ ಪ್ರೀತಿಯಾಗಿ ಬದಲಾಗಿದೆ. ರಿಜಿಸ್ಟರ್ ಮದುವೆ ಆಗಿದ್ದು, ಮುಂಬರುವ ದಿನಗಳಲ್ಲಿ ಹೊಸ ಬದುಕಿಗೆ ಕಾಲಿಡಲಿದ್ದಾರೆ. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡು, ಎಲ್ಲರ ಆರ್ಶಿವಾದವನ್ನು ಕೇಳಿದ್ದಾರೆ.
ಸೋಶಿಯಲ್ ಮೀಡಿಯಾದಲ್ಲಿ ಸಂಜು ಬಸಯ್ಯ ರವರು ಪೋಸ್ಟ್ ಹಾಕಿದ್ದು “ಕನ್ನಡದ ಕಲಾಭಿಮಾನಿಗಳಿಗೆ ನಿಮ್ಮ ಪ್ರೀತಿಯ ಸಂಜು ಬಸಯ್ಯ ಮತ್ತು ಪಲ್ಲವಿ ಬಳ್ಳಾರಿ ಮಾಡುವ ಅನಂತ ಕೋಟಿ ನಮಸ್ಕಾರಗಳು. ಇಲ್ಲಿಯವರೆಗಿನ ನನ್ನ ಹಾಗೂ ಪಲ್ಲವಿ ಬಳ್ಳಾರಿಯವರ ನಡುವಿನ ಸಂಬಂಧಗಳ ಊಹಾಪೋಹಗಳಿಗೆ ಇಂದು ನಾವು ತೆರೆ ಎಳೆದಿದ್ದೆವೆ. ಮೊದಲಿಗೆ ನಮ್ಮಿಬ್ಬರ ಪರಿಚಯವಾಗಿತು, ಆ ಪರಿಚಯ ಸ್ನೇಹವಾಗಿ, ಸ್ನೇಹ ಪ್ರೀತಿಯಾಗಿದ್ದು ನಿಮಗೆಲ್ಲರಿಗೂ ಗೊತ್ತಿದ್ದ ವಿಷಯ. ಈಗ ನಾವಿಬ್ಬರು ಕಾನೂನಬದ್ದವಾಗಿ, ಅಧಿಕೃತವಾಗಿ, ರಿಜಿಸ್ಟರ್ ಮ್ಯಾರೇಜ್ ಆಗಿದ್ದೇವೆ” ಎಂದಿದ್ದಾರೆ.
“ನಮ್ಮ, ನಮ್ಮ ಕುಟುಂಬದ ಒಪ್ಪಿಗೆ ಪಡೆದು ನಿಮ್ಮೆಲ್ಲರ ಸುಮ್ಮುಖದಲ್ಲಿ ಆದಷ್ಟು ಬೇಗ ಸಪ್ತಪದಿ ತುಳಿಯಲಿದ್ದೇವೆ. ನಿಮ್ಮ ಪ್ರೀತಿ, ಆಶೀರ್ವಾದ ನಮ್ಮ ಮೇಲೆ ಹೀಗೆ ಇರ್ಲಿ. ನಿಜವಾದ ಪ್ರೀತಿಗೆ ಯಾವುದೇ ಜಾತಿ, ಧರ್ಮ, ಇನ್ನಿತರ ಯಾವುದೇ ವಿಷಯಗಳು ಅಡ್ಡ ಬರಲಾರದು ಎಂಬುದನ್ನು ಸಾಧಿಸಿ ತೋರಿಸಿದ್ದೇವೆ. ನಿಜವಾದ ಪ್ರೀತಿಗೆ ಜಯ ಸಿಕ್ಕೆ ಸಿಗುತ್ತದೆ” ಎಂದು ಬರೆದುಕೊಂಡಿದ್ದಾರೆ.
View this post on Instagram