ಸ್ವಿಮ್ಮಿಂಗ್ ಪೂಲ್ ನಲ್ಲಿ ತನ್ನ ಸೌಂದರ್ಯವನ್ನು ಪ್ರದರ್ಶನ ಮಾಡಿದ ನಿರೂಪಕಿ ಅನಸೂಯಾ! ಗಂಡನ ಎದುರೇ ಇದೆಂತಾ ಹುಚ್ಚಾಟ ಎಂದ ನೆಟ್ಟಿಗರು, ಫೋಟೋಸ್ ವೈರಲ್!!

ಸೆಲೆಬ್ರಿಟಿಗಳು ಎಂದ ಮೇಲೆ ಸಿನಿಮಾ ಹಾಗೂ ವೃತ್ತಿ ಜೀವನ ಹೊರತು ಪಡಿಸಿ ಇನ್ನಿತ್ತರ ವಿಚಾರಗಳಿಂದ ಸುದ್ದಿಯಾಗುವುದಿದೆ. ಈ ವಿಚಾರದಲ್ಲಿ ಖ್ಯಾತ ತೆಲುಗು ನಿರೂಪಕಿ ಕಮ್ ನಟಿ ಅನಸೂಯಾರವರು ಹೊರತಾಗಿಲ್ಲ. ಸೋಶಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿರುವ ನಟಿ ಅನಸೂಯಾ (Actress Anasuya) ರವರು ಆಗಾಗ ಫೋಟೋ ವಿಡಿಯೋಗಳನ್ನು ಶೇರ್ ಮಾಡುತ್ತಿರುತ್ತಾರೆ. ನಟಿ ಅನಸೂಯರವರು ಕಿರುತೆರೆಯಲ್ಲಿ ನಿರೂಪಕಿಯಾಗಿ ಕಾಣಿಸಿಕೊಂಡು ಜನಪ್ರಿಯ ಗಳಿಸಿಕೊಂಡಿದ್ದಾರೆ.

ತೆರೆಗೆ ಎಂಟ್ರಿ ಕೊಡುವ ಮೊದಲು ಎಂಬಿಎ (MBA)ಯಲ್ಲಿ ಎಚ್‌ಆರ್‌ (HR) ಪದವಿ ಪಡೆದುಕೊಂಡಿದ್ದ ಇವರು ಬ್ಯಾಂಕಿನಲ್ಲಿ ಟೆಲಿಕಾಲರ್‌ ಆಗಿ ಕೆಲಸದಲ್ಲಿದ್ದರು. ಆ ವೇಳೆಯಲ್ಲಿ ಕಾಮಿಡಿ ಶೋ (Comedy Show) ವೊಂದನ್ನು ನಿರೂಪಣೆ ಮಾಡುವ ಅವಕಾಶ ಸಿಕ್ಕಿತು. 2013 ರಲ್ಲಿ ಹಾಸ್ಯ ಕಾರ್ಯಕ್ರಮವನ್ನು ನಿರೂಪಣೆ ಜರ್ನಿಯನ್ನು ಆರಂಭಿಸಿದ ನಂತರದ ದಿನಗಳಲ್ಲಿ ಸಿನಿಮಾದಲ್ಲಿ ನಟಿಸಲು ಅವಕಾಶ ಸಿಕ್ಕಿತು, ಹೀಗಾಗಿ ನಟಿಯಾಗಿ ಕಾಣಿಸಿಕೊಂಡರು. ನಾಗಾ ಚಿತ್ರದಲ್ಲಿ ಎನ್ ಟಿಆರ್ ಜೊತೆಗೆ ತೆರೆ ಹಂಚಿಕೊಂಡರು.

2016 ರಲ್ಲಿ, ನಾಗಾರ್ಜುನ ಅಭಿನಯದ ಸೊಗ್ಗಾಡೆ ಚಿನ್ನಿ ನಯನ ನಾಗ್ ಕಿ ಮರಡಿಲು ಬಜ್ಜಿ ಪಾತ್ರದಲ್ಲಿ ನಟಿಸಿದ್ದರು. ಅಲ್ಲು ಅರ್ಜುನ್ ನಟನೆಯ ಪುಷ್ಪ (Pushpa) ಸಿನಿಮಾದಲ್ಲೂ ನಟಿಸಿ ಜನಪ್ರಿಯತೆ ಪಡೆದುಕೊಂಡಿದ್ದಾರೆ. ಸದ್ಯಕ್ಕೆ ನಿರೂಪಣೆ ಹಾಗೂ ಪುಷ್ಪ 2 (Pushpa 2) ಸಿನಿಮಾದ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದು, ಈ ನಡುವೆ ಮತ್ತೊಂದು ವಿಚಾರವಾಗಿ ಸುದ್ದಿಯಾಗಿದ್ದಾರೆ.

ಹೌದು ನಟಿ ಅನಸೂಯಾರವರು ತೆಲುಗು ಸಿನಿಮಾ ಇಂಡಸ್ಟ್ರಿಯಲ್ಲಿ ತಮ್ಮದೇ ಆದ ನೇಮ್ ಫೇಮ್ ಸಂಪಾದಿಸಿಕೊಂಡಿದ್ದು, ಮದುವೆಯಾಗಿದ್ದರೂ ಕೂಡ ಯಾವ ಯುವನಟಿಗೆ ಕಡಿಮೆಯಿಲ್ಲ ಎನ್ನುವಂತೆ ಇದ್ದಾರೆ. ಅದಲ್ಲದೇ ಆಗಾಗ ಹಾಟ್ ಉಡುಗೆಯ ಫೋಟೋ ಹಾಗೂ ವಿಡಿಯೋಗಳನ್ನು ಶೇರ್ ಮಾಡಿಕೊಂಡು ಪಡ್ಡೆ ಹೈಕಳ ನಿದ್ದೆ ಕದಿಯುತ್ತಾರೆ.

ಅಷ್ಟೇ ಅಲ್ಲದೇ ಟ್ರೋಲಿಗರ ಕೆಂಗಣ್ಣಿಗೂ ಗುರಿಯಾಗುವ ಈ ನಟಿ ಅನುಸೂಯ ಭಾರದ್ವಾಜ್ ಯಾವುದಕ್ಕೂ ತಲೆ ಕೆಡಿಸಿಕೊಳ್ಳುವುದಿಲ್ಲ. ತಮಗೆ ಖುಷಿಕೊಡುವಂತೆ ಬದುಕುವ ನಟಿಗೂ ಇದೀಗ ಮತ್ತೆ ಸುದ್ದಿಯಾಗಿರುವುದು ಫೋಟೋದ ಮೂಲಕ ಎನ್ನಬಹುದು. ಆದರೆ ಇದೀಗ ಗಂಡ ಹಾಗೂ ಮಕ್ಕಳೊಂದಿಗೆ ಸ್ವಿಮ್ಮಿಂಗ್ ಪೂಲ್ (Swimming pool) ನಲ್ಲಿ ಬಿಕನಿ ತೊಟ್ಟು ಎಂಜಾಯ್ ಮಾಡುತ್ತಿರುವ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಫೋಟೋಗೆ ನೆಟ್ಟಿಗರು ಫಿದಾ ಆಗಿದ್ದಾರೆ.

ಅಂದಹಾಗೆ ಈ ಬೇಸಿಗೆಯ ಬೇಗೆಯನ್ನು ತಾಳಲಾರದೆ ನೀರಿನಲ್ಲಿ ದೇಹವನ್ನು ತಂಪಾಗಿಸುವ ಪ್ರಯತ್ನದಲ್ಲಿದ್ದು, ಫೋಟೋ ಜೊತೆಗೆ ಬೇಸಿಗೆಯಲ್ಲಿ ನೀವೆಲ್ಲರೂ ಏನು ಮಾಡುತ್ತಿದ್ದೀರಾ? ಎಂದು ಪ್ರಶ್ನೆ ಕೇಳಿದ್ದಾರೆ. ಪತಿ ಹಾಗೂ ಮಕ್ಕಳ ಜೊತೆಗೆ ಹಾಟ್ ಉಡುಗೆ ಯಲ್ಲಿ ಫೋಟೋ ಶೇರ್ ಮಾಡಿದ ಕೂಡಲೇ ಫೋಟೋ ಅಧಿಕ ಲೈಕ್ಸ್ ಕಂಡಿದ್ದು, ಫೋಟೋಗೆ ಮೆಚ್ಚುಗೆಯ ಪ್ರತಿಕ್ರಿಯೆಗಳು ಹರಿದು ಬಂದಿವೆ.