ವಿಜನಾಥ ಬಸಪ್ಪ ಬಿರಾದರ್ ರವರು ಕನ್ನಡದ ಕಾಮಿಡಿಯನ್ ಹಲವಾರು ದಶಕಗಳಿಂದ ಇವರು ಕನ್ನಡ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ.ಇವರು ಕನ್ನಡದಲ್ಲಿ 500 ಕ್ಕಿಂತ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ಗಿರೀಶ್ ಕಾಸರವಳ್ಳಿ ನಿರ್ದೇಶನದ ಕನಸೆಂಬ ಕುದುರೆಯನ್ನೆರಿ ಎನ್ನುವ ಸಿನಿಮಾದಲ್ಲಿ ಇವರು ಅದ್ಭುತವಾಗಿ ನಟಿಸಿದ್ದರು ಈ ಚಿತ್ರಕ್ಕೆ 2011 ರಲ್ಲಿ ಬೆಸ್ಟ್ ಕನ್ನಡ ಆಕ್ಟರ್ ಎಂದು ಫಿಲ್ಮ್ ಫೇರ್ ಅವಾರ್ಡ್ಸ್ ಕೂಡ ಪಡೆದುಕೊಂಡಿದ್ದಾರೆ.
ಇವರು ಮೂಲತಃ ಬೀದರ್ ನವರು ಇವರಿಗೆ ಈಗ ಸುಮಾರು 70 ವರ್ಷ ವಯಸ್ಸಾಗಿದೆ ಬಿರಾದರ್ ಕನ್ನಡದ ಫೇಮಸ್ ಕಾಮಿಡಿಯನ್ ಹಲವು ದಶಕಗಳ ಹಿಂದೆ ಹಿರಿಯ ನಟರು ಸಾಕಷ್ಟು ಅವಕಾಶಗಳನ್ನು ಸಂಭಾವನೆಯನ್ನು ಪಡೆಯುತ್ತಿದ್ದರು ವಯಸ್ಸಾಗುತ್ತಿದ್ದಂತೆ ಅವರಿಗೆ ಅವಕಾಶಗಳು ಕೂಡ ಕಡಿಮೆಯಾಗುತ್ತಿವೆ ಅಷ್ಟೇ ಅಲ್ಲದೆ ಅವರ ಜಾಗದಲ್ಲಿ ಹೊಸ ಹೊಸ ಕಲಾವಿದರು ಹುಟ್ಟಿಕೊಳ್ಳುತ್ತಾರೆ.
ನಟ ಬಿರಾದರ್ 70ನೇ ವಯಸ್ಸಿನಲ್ಲಿ ಕೂಡ ಹಲವಾರು ಜನರಿಗೆ ನಿರ್ಗತಿಕರಿಗೆ ಕೈಲಾಗವರಿಗೆ ಸಹಾಯ ಮಾಡುತ್ತಾ ಜೀವನವನ್ನು ಸಾಗಿಸುತ್ತಿದ್ದಾರೆ. ಕೋಟಿ ಕೋಟಿ ಹಣವಿದ್ದವರು ಸಹಾಯ ಮಾಡುವುದು ಸುಲಭದ ಮಾತು ಏನು ಇಲ್ಲದವರು ತನ್ನಲ್ಲಿ ಇರುವುದನ್ನು ಮತ್ತೊಬ್ಬರಿಗೆ ಹಂಚಿ ತಿನ್ನುವುದನ್ನು ಕಲಿಯುವುದು ದೊಡ್ಡತನವಾಗಿದೆ ಕಾಮಿಡಿಯನ್ ಬಿರಾದರ್ ಕೂಡ ಈ ರೀತಿ ಉತ್ತಮ ಕೆಲಸಗಳನ್ನು ಮಾಡುತ್ತಿದ್ದಾರೆ.
ಇಂತಹ ಹಿರಿಯ ಕಲಾವಿದರು ತನ್ನಲ್ಲಿ ಇರುವುದನ್ನು ಹಂಚಿ ತಿನ್ನುವ ಗುಣವನ್ನು ನೋಡಿ ಇಂದಿನ ಯುವಕರು ಕಲಿಯಬೇಕಾಗಿದೆ ಪುನೀತ್ ರಾಜಕುಮಾರ್ ಸೇರಿದಂತೆ ಇನ್ನು ದೊಡ್ಡ ದೊಡ್ಡ ಸ್ಟಾರ್ ಹಲವರಿಗೆ ಸಹಾಯ ಮಾಡುತ್ತಾ ತಮ್ಮ ಸಾವಿನಲ್ಲು ಬದುಕನ್ನು ಕಂಡುಕೊಂಡಿದ್ದಾರೆ. ಇಂದಿಗೂ ಇವರೆಲ್ಲರೂ ಸಾವಿರಾರು ಜನರ ನಾಲಿಗೆಯ ಮೇಲೆ ಬದುಕಿದ್ದಾರೆ ನಟ ಹಾಗೂ ಕಾಮಿಡಿಯನ್ ಬಿರಾದರ್ ಕೂಡ ಅಂತಹ ಸಾಲಿಗೆ ಸೇರ್ಪಡೆಯಾಗುತ್ತಾರೆ.