ಸೈನಿಕನ ಜೊತೆ ಮದುವೆಯಾದ ಗಿಣಿ ರಾಮ ಸೀರಿಯಲ್ ನಟಿ ಕಾವೇರಿ

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಗಿಣಿ ರಾಮ ಧಾರಾವಾಹಿಯಲ್ಲಿ (colours Kannada Gini Rama serial)ಶಿವನ ತಂಗಿ ಪಾತ್ರ ಮಾಡುತ್ತಿರುವ ಸೀಮಾ ಅಲಿಯಾಸ್ ಕಾವೇರಿ (Kaveri bagalakote)ಸೈನಿಕರನ್ನು ಮದುವೆಯಾಗುತ್ತಿದ್ದಾರೆ. ಕಳೆದ ಐದು ವರ್ಷಗಳಿಂದ ಗಿಣಿ ರಾಮ ಧಾರಾವಾಹಿ ಪ್ರಸಾರವಾಗುತ್ತಿದೆ. ಈ ದಾರವಾಹಿಯಲ್ಲಿ ಮೊದಲು ನಿನ್ನ ಕೊನೆಯವರೆಗೂ ಕಾವೇರಿ ಬಾಗಲಕೋಟೆ ನಟಿಸಿದ್ದರು.

 

 

ಕಾವೇರಿ ನಟನೆ ಅಭಿಮಾನಿಗಳಿಗೆ ಇಷ್ಟವಾಗಿತ್ತು ಸೀಮಾ ಕೂಡ ಸಾಕಷ್ಟು ಜನಪ್ರಿಯತೆ ಗಳಿಸಿದ್ದರು ಇದೀಗ ಕಾವೇರಿ ಬಾಗಲಕೋಟೆ ಹಲವಾರು ವರ್ಷಗಳಿಂದ ಪ್ರೀತಿಸಿದ್ದ ಸೈನಿಕನನ್ನು ಮದುವೆಯಾಗುತ್ತಿದ್ದಾರೆ. ಕಾವೇರಿ ನನ್ನ ಪ್ರೀತಿಯ ವಿಚಾರವನ್ನು ಮನೆಯವರಿಗೆ ತಿಳಿಸಿದ್ದಾರೆ ಕಾವೇರಿ ಮನೆಯವರು ಮದುವೆಗೆ ಒಪ್ಪಿಕೊಂಡು ಖುಷಿ ಖುಷಿಯಿಂದ ಮದುವೆ ಕಾರ್ಯಗಳನ್ನು ಮಾಡುತ್ತಿದ್ದಾರೆ.

 

 

ಕಾವೇರಿಗೆ ಚಿಕ್ಕ ವಯಸ್ಸಿನಿಂದ ನಟನೆಯಲ್ಲಿ ಹೆಚ್ಚು ಆಸಕ್ತಿ ಇತ್ತು ಗಿಣಿ ರಾಮ ಧಾರವಾಹಿ ತಂಗಿಯ ಪಾತ್ರಧಾರಿಗಾಗಿ ಸೀಮಾ ಎನ್ನುವ ಪಾತ್ರವನ್ನು ಮಾಡಿದ್ದಾರೆ. ಕಾವೇರಿ ಮೇಕಪ್ ಆರ್ಟಿಸ್ಟ್ ಆಗಿದ್ದು ಬಾಗಲಕೋಟೆಯಲ್ಲಿ ತನ್ನದೇ ಆದ ಕೋರ್ಸ್ ಕೂಡ ಮಾಡುತ್ತಾರೆ. ಅಷ್ಟೇ ಅಲ್ಲದೆ ಧಾರವಾಹಿಗಳಲ್ಲಿ ಕೂಡ ನಟಿಸುತ್ತಾರೆ.

ಕಾವೇರಿ ಕೂಡ ತನ್ನ ಮದುವೆಯ ಬಗ್ಗೆ ತನ್ನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡು ನಾನು ಸೈನಿಕನನ್ನು ಮದುವೆಯಾಗುತ್ತಿರುವುದರ ಬಗ್ಗೆ ಹೆಮ್ಮೆ ಇದೆ ಎಂದು ಕ್ಯಾಪ್ಶನ್ ಹಾಕಿದ್ದಾರೆ.

 

 

ಅಭಿಮಾನಿಗಳು ಸಹ ಇವರ ಎಂಗೇಜ್ಮೆಂಟ್ ಫೋಟೋಗಳನ್ನು ನೋಡಿ ಖುಷಿಪಟ್ಟಿದ್ದಾರೆ ಹಾಗೆ ಮದುವೆಗೆ ವಿಷಸ್ ಕೂಡ ತಿಳಿಸಿದ್ದಾರೆ.