Abhi Aviva Beegara Oota Live: ಪತ್ನಿ ಅವಿವ ಕಂಡ್ರೆ ಅಭಿಷೇಕ್​​ಗೆ ಎಷ್ಟೊಂದು ಪ್ರೀತಿ; ಇಲ್ಲಿದೆ ನೋಡಿ ವಿಡಿಯೋ

ಅಭಿಷೇಕ್ ಅಂಬರೀಷ್ ಹಾಗೂ ಅವಿವಾ (Aviva Bidapa) ಅವರದ್ದು ಪ್ರೇಮ ವಿವಾಹ. ಹಲವು ವರ್ಷಗಳ ಕಾಲ ಪ್ರೀತಿಸುತ್ತಿದ್ದ ಇವರು ಈಗ ಮದುವೆ ಆಗಿದ್ದಾರೆ. ಇಂದು (ಜೂನ್ 16) ಮಂಡ್ಯದಲ್ಲಿ ಬೀಗರ ಊಟ ನಡೆಯಲಿದೆ. ಬೆಂಗಳೂರಿನ ನಿವಾಸದಿಂದ ಈ ದಂಪತಿ ಮಂಡ್ಯ ಕಡೆ ಪ್ರಯಾಣ ಬೆಳೆಸಿತು. ಮನೆಯಿಂದ ಕಾರಿನವರೆಗೆ ಆಗಮಿಸುವಾಗ ಇಬ್ಬರೂ ಕೈ ಕೈ ಹಿಡಿದು ಬಂದರು. ಅವಿವಾ ಮೇಲೆ ಅಭಿಷೇಕ್ ಸಾಕಷ್ಟು ಪ್ರೀತಿ ಹೊಂದಿದ್ದಾರೆ ಎಂಬುದಕ್ಕೆ ಈ ದೃಶ್ಯ ಸಾಕ್ಷಿ ಒದಗಿಸಿದೆ.