Thu, Nov 26, 2026
🔍 ▶️
एंटरटेनमेंट

Helicopter Facility: ಈಗ ತಿರುಪತಿಗೆ ಹೆಲಿಕಾಪ್ಟರ್ ನಲ್ಲಿ ಪ್ರಯಾಣ ಮಾಡಿ, ಸಮಯ ಮತ್ತು ದರದ ಬಗ್ಗೆ ತಿಳಿದುಕೊಳ್ಳಿ.

Bengalore To Tirupati Helicopter: ತಿರುಪತಿಯ ತಿಮ್ಮಪ್ಪನ (Tirumala Tirupati) ದರ್ಶನ ಪಡೆಯಲು ದಿನನಿತ್ಯ ಸಾವಿರಾರು ಭಕ್ತರು ಹಾಜರಿರುತ್ತಾರೆ. ತಿರುಮಲ ತಿಮ್ಮಪನ ದೇವಸ್ಥಾನವು ಅತಿ ಹೆಚ್ಚು ಪ್ರಸಿದ್ದಿಯನ್ನು ಪಡೆದಿದೆ. ಇನ್ನು ಭಕ್ತರಿಗಾಗಿ ದೇವಸ್ಥಾನದಲ್ಲಿ ಸಾಕಷ್ಟು ರೀತಿಯ ಸೌಲಭ್ಯಗಳನ್ನು ನೀಡಲಾಗುತ್ತದೆ.

ತಿಮಪ್ಪನ ದರ್ಶನಕ್ಕಾಗಿ ಬರುವ ಭಕ್ತರಿಗಾಗಿ ತಿಮ್ಮಪ್ಪನ ಸನ್ನಿಧಾನದಲ್ಲಿ ವಿಶೇಷ ಸೌಲಭ್ಯವನ್ನು ಒದಗಿಸಲಾಗಿದೆ. ಇನ್ನು ಭಕ್ತರಿಗಾಗಿ ಒದಗಿಸಿದ ವಿಶೇಷ ಸೌಲಭ್ಯದ ಬಗ್ಗೆ ಮಾಹಿತಿ ತಿಳಿಯೋಣ.

travel from Bengaluru to Tirupati by helicopter.
Image Credit: cntraveller

ತಿರುಪತಿಗೆ ತೆರಳುವ ಭಕ್ತರಿಗೆ ಸಿಹಿ ಸುದ್ದಿ
ಭಕ್ತರಿಗೆ ತಿಮ್ಮಪ್ಪನ ದರ್ಶನ ಪಡೆಯಲು ವಿಶೇಷ ರೀತಿಯ ಸೌಲಭ್ಯಗಳನ್ನು ನೀಡಲಾಗುತ್ತದೆ. ವೃದ್ಧರಿಗೆ ,ಮಹಿಳೆಯರಿಗೆ ಮಕ್ಕಳಿಗೆ ವಿವಿಧ ಸೌಲಭ್ಯಗಳನ್ನು ನೀಡಲಾಗುತ್ತದೆ. ವಿವಿಧ ಪ್ರದೇಶಗಳಿಂದ ತಿಮ್ಮನ ದರ್ಶನ ಪಡೆಯಲು ಭಕ್ತರು ಆಗಮಿಸುತ್ತಾರೆ.

ಇದೀಗ ಬೆಂಗಳೂರಿನಿಂದ ತಿರುಪತಿಗೆ ತೆರಳುವ ಭಕ್ತರಿಗೆ ಫ್ಲೈಬ್ಲೇಡ್ ಇಂಡಿಯಾ ಸಂಸ್ಥೆ ಸಿಹಿ ಸುದ್ದಿ ನೀಡಿದೆ. ಈ ಸಂಸ್ಥೆ ಬೆಂಗಳೂರಿನಿಂದ ತಿರುಪತಿಗೆ (Bengaloru-Tirupati Helicopter) ತೆರಳುವ ಭಕ್ತರಿಗೆ ಹೆಲಿಕಾಪ್ಟರ್​ ಸೇವೆ ಆರಂಭಿಸಿದೆ.

travel from Bengaluru to Tirupati by helicopter.
Image Credit: hosakannada

ಈಗ ತಿರುಪತಿಗೆ ಹೆಲಿಕಾಪ್ಟರ್ ನಲ್ಲಿ ಪ್ರಯಾಣ ಮಾಡಿ
ಭಕ್ತರ ಅನುಕೂಲಕ್ಕಾಗಿ ಫ್ಲೈಬ್ಲೇಡ್ ಇಂಡಿಯಾ ಸಂಸ್ಥೆ ಹೆಲಿಕಾಪ್ಟರ್ ಸೇವೆಯನ್ನು ಒದಗಿಸಲಿದೆ. ಈ ಹೆಲಿಕಾಪ್ಟರ್ ನ ಮೂಲಕ ಬೆಂಗಳೂರಿನಿಂದ ತಿರುಪತಿಗೆ ಹಾಗು ದರ್ಶನ ಮುಗಿದ ಬಳಿಕ ತಿರುಪತಿಯಿಂದ ಬೆಂಗಳೂರಿಗೆ ಮರಳಿಪ್ರಯಾಣಿಸಬಹುದು. ಹೆಲಿಕಾಪ್ಟರ್ ಸೇವೆ ಒದಗಿಸುವ ಬಗ್ಗೆ ಫ್ಲೈಬ್ಲೇಡ್ ಇಂಡಿಯಾ ಸಂಸ್ಥೆ ಮಾಹಿತಿ ನೀಡಿದೆ.

ಹೆಲಿಕಾಪ್ಟರ್ ಸೇವೆಯ ಬೆಲೆಯನ್ನು 3,50,000 ಕ್ಕೆ ನಿಗದಿಪಡಿಸಲಾಗಿದೆ. ತಿರುಪತಿಗೆ ಬೆಳಿಗ್ಗೆ 09:15-09:30 ಹಾಗೂ ಹಲಿಕಾಪ್ಟರ್‌ಗಳು ಸಂಜೆ 04:00 ರಿಂದ 04:15 ರ ವರೆಗೆ ಹೊರಡುತ್ತವೆ. ಪ್ರತಿ ಹೆಲಿಕಾಪ್ಟರ್ ನಲ್ಲಿ ಗರಿಷ್ಟ ಐದು ಪ್ರಯಾಣಿಕರು ಪ್ರಯಾಣಿಸಬಹುದು ಎಂದು ಕಂಪನಿ ಹೇಳಿಕೊಂಡಿದೆ.

NewsZebra
NewsZebra
Editor

NewsZebra is a digital entertainment news platform delivering the latest Bollywood and entertainment news with a commitment to accuracy, fairness, and reader trust.