Kannada News : ಖ್ಯಾತ ನಟ ಜೈ ಜಗದೀಶ್ ಅವರ ಮುದ್ದಾದ ಕುಟುಂಬ ಹೇಗಿದೆ ಗೊತ್ತಾ? ಇಲ್ಲಿದೆ ನೋಡಿ ಅಪರೂಪದ ಫೋಟೋಗಳು!!

Kannada News : ಒಂದು ಕಾಲದಲ್ಲಿ ಕನ್ನಡ ಚಿತ್ರರಂಗವನ್ನು ಆಳಿದ ಅನೇಕ ನಟ ನಟಿಯರು ಇದ್ದಾರೆ. ಸಿನಿಮಾರಂಗದಲ್ಲಿ ಅನೇಕ ಸಿನಿಮಾಗಳಲ್ಲಿ ನಟಿಸುವ ಮೂಲಕ ಅಭಿಮಾನಿಗಳ ಪ್ರೀತಿಯನ್ನು ಕೂಡ ಸಂಪಾದನೆ ಮಾಡಿಕೊಂಡವರಲ್ಲಿ ನಟ ಜೈ ಜಗದೀಶ್ (Jai Jagadeesh) ಕೂಡ ಒಬ್ಬರು. ನಟ ಜೈ ಜಗದೀಶ್ ಎಂದರೆ ಬಂಧನ ಸಿನಿಮಾವು ಕಣ್ಣ ಮುಂದೆ ಬರುತ್ತದೆ. ಜೈ ಜಗದೀಶ್ ಕನ್ನಡ ಚಿತ್ರರಂಗದ ಪ್ರಮುಖ ನಟ, ನಿರ್ಮಾಪಕ ಹಾಗೂ ನಿರ್ದೇಶಕರಾಗಿ ಸಕ್ರಿಯರಾಗಿದ್ದಾರೆ.

1976ರಲ್ಲಿ ಫಲಿತಾಂಶ (Phalitamsha) ಚಿತ್ರದ ಮೂಲಕ ಸಿನಿಪಯಣ ಆರಂಭಿಸಿದ ಜೈ ಜಗದೀಶ್ ನಾಯಕನಟನಾಗಿ, ಪೋಷಕನಟನಾಗಿ, ಖಳನಟನಾಗಿ ಸುಮಾರು 300 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಇದೀಗ ನಟ ಜೈ ಜಗದೀಶ್ ಅವರ ಕುಟುಂಬದ ಮುದ್ದಾದ ಫೋಟೋವೊಂದು ವೈರಲ್ ಆಗಿವೆ. ಈ ಫೋಟೋದಲ್ಲಿ ಜೈ ಜಗದೀಶ್ ಅವರ ಜೊತೆಗೆ ಪತ್ನಿ ವಿಜಯಲಕ್ಷ್ಮಿ ಸಿಂಗ್ (Vijayalakshmi Sing) , ಮೂರು ಹೆಣ್ಣು ಮಕ್ಕಳಾದ ವೈನಿಧಿ (Vainidhi), ವೈಭವಿ (Vaibhavi) ಹಾಗೂ ವೈಸಿರಿ (Vaisiri) ಇರುವುದನ್ನು ಕಾಣಬಹುದು.

PhotoGrid Site 1687690910436

1999 ರ ಕಾಲದಲ್ಲಿ ಕನ್ನಡದ ಟಾಪ್ ನಟರಲ್ಲಿ ಒಬ್ಬರಾಗಿದ್ದ ಜೈ ಜಗದೀಶ್ ವಿಷ್ಣುವರ್ಧನ್ ( Vishnuvardhan) ಅವರ ಜೊತೆ ಹೆಚ್ಚು ಸಿನಿಮಾಗಳಲ್ಲಿ ಸ್ಕ್ರೀನ್ ಶೇರ್ ಮಾಡಿಕೊಂಡಿದ್ದು, ಸಿನಿ ಪ್ರೇಮಿಗಳ ಮನಸ್ಸು ಗೆದ್ದುಕೊಂಡಿದ್ದರು. ಜಗದೀಶ್ ಅವರಿಗೆ ಇಬ್ಬರು ಹೆಂಡತಿಯರು ಎಂದು ಸ್ವತಃ ಜಗದೀಶ್ ಅವರೇ ಬಿಗ್ ಬಾಸ್ (Big Boss) ನಲ್ಲಿ ಹೇಳಿಕೊಂಡಿದ್ದರು. ಜೈ ಜಗದೀಶ್ ಅವರ ಮೊದಲ ಹೆಂಡತಿ ಹೆಸರು ರೂಪ (Roopa). ರೂಪ ಅವರನ್ನು ಜಗದೀಶ್ ಅವರು ತುಂಬಾ ಪ್ರೀತಿಸುತ್ತಿದ್ದರು.

ಅಂದಹಾಗೆ, ಪ್ರೀತಿಯಲ್ಲಿದ್ದ ವೇಳೆಯಲ್ಲಿ ರೂಪ ಅವರ ಮಾವ ಈ ಮದುವೆಯನ್ನು ವಿರೋಧ ವ್ಯಕ್ತಪಡಿಸಿದ ಕಾರಣ ಜೈ ಜಗದೀಶ್ ಅವರು ವಿಷ್ಣುವರ್ಧನ್ ಅವರ ಸಹಾಯ ಕೇಳಿದ್ದರು. ವಿಷ್ಣುವರ್ಧನ್ ಅವರು ಜೈ ಜಗದೀಶ್ ಹಾಗು ರೂಪ ಅವರನ್ನು ತಮ್ಮ ಸ್ವಂತ ಮನೆಯಲ್ಲಿ ಎರಡು ದಿನಗಳ ಕಾಲ ಆಶ್ರಯ ಕೊಟ್ಟರು. ಇದಾದ ಬಳಿಕ, ಅಭಿಮಾನ್ ಸ್ಟುಡಿಯೋ ಸಮೀಪದಲ್ಲಿರುವ ಒಂದು ದೇವಸ್ಥಾನದಲ್ಲಿ ಮದುವೆ ಮಾಡಿಸಿದ್ದರು.ಈ ದಂಪತಿಗಳಿಗೆ ಒಬ್ಬ ಮಗಳಿದ್ದು, ಈಕೆಯ ಹೆಸರು ಅರ್ಪಿತ, ಈಗ ಅರ್ಪಿತ ಅವರು ಮದುವೆಯಾಗಿ ಬೆಂಗಳೂರಿನಲ್ಲಿ ಸೆಟಲ್ ಆಗಿದ್ದಾರೆ.

PhotoGrid Site 1687690946872

ಜೈ ಜಗದೀಶ್ ಅವರು ತಮ್ಮ ಮಗಳಾದ ಅರ್ಪಿತ ಅವರನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತೇನೆ ಎಂದು ಬಿಗ್ ಬಾಸ್ ನಲ್ಲಿ ಹೇಳಿಕೊಂಡಿದ್ದರು. ಅಂದಹಾಗೆ, ಮದುವೆಯಾಗಿ ಸ್ವಲ್ಪ ವರ್ಷಗಳ ನಂತರ ಇವರಿಬ್ಬರಿಗೂ ಮನಸ್ತಾಪ ಬಂದ ಕಾರಣ ಜೈ ಜಗದೀಶ್ ಹಾಗೂ ರೂಪ ಅವರು ಡೈವೋರ್ಸ್ ಪಡೆದುಕೊಂಡು ದೂರ ಆದರು. ಆದಾದ ಸ್ವಲ್ಪ ವರ್ಷಗಳ ನಂತರ ಜೈ ಜಗದೀಶ್ ಅವರು ವಿಜಯಲಕ್ಷ್ಮಿ ಅವರನ್ನು ಮದುವೆಯಾಗಿದ್ದು, ಈ ದಂಪತಿಗಳಿಗೆ ಮೂವರು ಹೆಣ್ಣು ಮಕ್ಕಳಿದ್ದು, ತಂದೆ ತಾಯಿಯಂತೆ ಈ ಮೂವರು ಯಾನ ಸಿನಿಮಾದ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟು ಸಿನಿಮಾರಂಗದಲ್ಲಿ ಸಕ್ರಿಯರಾಗಿದ್ದಾರೆ.