Nita Ambani : ಆನೆ ದಂತ, ಬಂಗಾರದಿಂದ ಮಾಡಿದ ಬನಾರಸಿ ಸೀರೆಯುಟ್ಟ ಸೌಂದರ್ಯದಿಂದಲೇ ಎಲ್ಲರ ಗಮನ ಸೆಳೆದ ನೀತಾ ಅಂಬಾನಿ! ಇದರ ಬೆಲೆ ತಿಳಿದರೆ ಎದೆ ಬಡಿತ ಜೋರಾಗುತ್ತದೆ ನೋಡಿ!!

Nita Ambani : ರಿಲಯನ್ಸ್ ಗ್ರೂಪ್ ನ ಮುಖೇಶ್ ಅಂಬಾನಿ (Mukesh Ambani) ಅವರ ಪತ್ನಿ ನೀತಾ ಅಂಬಾನಿ (Nita Ambani) ಸದಾ ಸುದ್ದಿಯಲ್ಲಿರುತ್ತಾರೆ. ಇದೀಗ ಮತ್ತೆ ಸೀರೆ ವಿಚಾರವಾಗಿ ಸುದ್ದಿಯಾಗಿದ್ದಾರೆ. ಹೌದು, ಪ್ರಧಾನಿ ನರೇಂದ್ರ ಮೋದಿ ಅಮೆರಿಕ ಭೇಟಿ ಸಂದರ್ಭದಲ್ಲಿ ಶ್ವೇತಭವನದಲ್ಲಿ ಸ್ಟೇಟ್‌ ಡಿನ್ನರ್ ಆಯೋಜನೆ ಮಾಡಲಾಗಿತ್ತು. ಸ್ಟೇಟ್‌ ಡಿನ್ನರ್ (State Dinner) ನಲ್ಲಿ ವಿಶ್ವದ ಅನೇಕ ಗಣ್ಯ ವ್ಯಕ್ತಿಗಳು ಭಾಗವಹಿಸಿದ್ದು, ಇದರಲ್ಲಿ ಮುಖೇಶ್ ಅಂಬಾನಿ ಮತ್ತು ಅವರ ಪತ್ನಿ ನೀತಾ ಅಂಬಾನಿ ಕೂಡ ಈ ಕೂಟದಲ್ಲಿ ಭಾಗಿಯಾಗಿದ್ದು ಮತ್ತೆ ಸುದ್ದಿಯಾಗಲು ಕಾರಣವಾಗಿದ್ದಾರೆ.

ಸಮಾರಂಭದಲ್ಲಿ ನೀತಾ ಅಂಬಾನಿ ತುಂಬಾ ಸುಂದರವಾದ ಸೀರೆ (Saary) ಯನ್ನು ಧರಿಸಿದ್ದು, ಭಾರತೀಯ ಬಟ್ಟೆಗಳ ಮೇಲಿನ ಅವರ ಪ್ರೀತಿ ಹಾಗೂ ಸಂಸ್ಕೃತಿ ಮೇಲಿನ ಗೌರವವು ಇಲ್ಲಿ ವ್ಯಕ್ತವಾಗಿದೆ. ನೀತಾ ಅಂಬಾನಿಯವರು ಸೀರೆ ಚಿನ್ನ ಹಾಗೂ ಆನೆ ದಂತದಿಂದ ಮಾಡಿಸಿದ್ದು ಎನ್ನುವುದು ಮತ್ತೊಂದು ವಿಶೇಷವಾಗಿದೆ. ಈ ಸೀರೆ ತಯಾರಲಾಗಲು ಸರಿಸುಮಾರು ಒಂದು ತಿಂಗಳಿಗಿಂತ ಹೆಚ್ಚು ಸಮಯ ತೆಗೆದುಕೊಂಡಿದೆ. ರಿಲಯನ್ಸ್ ಫೌಂಡೇಶನ್‌ (Reliance Foundation) ನಿಂದ ಸ್ಥಳೀಯವಾಗಿ ಈ ಸೀರೆ ತಯಾರಿಸಲಾಗಿದ್ದು, ಸ್ಟೇಟ್‌ ಡಿನ್ನರ್ ನಲ್ಲಿನ ನೀತಾ ಅಂಬಾನಿ ಈ ಸೀರೆ ತೊಟ್ಟು ಕಂಗೊಳಿಸುತ್ತಿರುವ ಫೋಟೋ ಹಾಗೂ ವಿಡಿಯೋಗಲು ವೈರಲ್ ಆಗಿವೆ.

ಅಮೆರಿಕದಲ್ಲಿನ ಸ್ಟೇಟ್‌ ಡಿನ್ನರ್‌ಗೆ ನೀತಾ ಅಂಬಾನಿ ಈ ಐವರಿ ಸೀರೆಯನ್ನು ಆಯ್ಕೆ ಮಾಡಿಕೊಂಡಿದದ್ದಾರೆ. ಈ ಬಗ್ಗೆ ಎನ್‌ಎಂಎಸಿಸಿ (NMACC) ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಶೇರ್ ಮಾಡಿಕೊಂಡಿದೆ. ಈ ಪೋಸ್ಟ್ ನಲ್ಲಿ, “ಈ ಬನಾರಸಿ ಬ್ರೋಕೇಡ್ ಸಿಲ್ಕ್ ಸೀರೆಯನ್ನು ಕೈಯಿಂದ ತಯಾರಿಸಲಾಗಿದೆ. ಸಂಪೂರ್ಣ ಸೀರೆಯು ಗೋಲ್ಡನ್ ಥ್ರೆಡ್‌ಗಳೊಂದಿಗೆ ಬ್ರೋಕೇಡ್ ಕೆಲಸವನ್ನು ಹೊಂದಿದೆ. ಇದಲ್ಲದೆ, ನೀತಾ ಅಂಬಾನಿ ಮ್ಯಾಟ್ ಫಿನಿಶ್ ಮೇಕಪ್‌ನೊಂದಿಗೆ ಅದ್ಭುತ ರೀತಿಯಲ್ಲಿ ಕಾಣುತ್ತಿದ್ದಾರೆ. ಆಕೆಯ ಹಣೆಯ ಮೇಲೆ ದುಂಡಗಿನ ಬೊಟ್ಟು ಮತ್ತು ಕಂದು ಬಣ್ಣದ ಲಿಪ್‌ಸ್ಟಿಕ್‌ನೊಂದಿಗೆ ಸಂಪೂರ್ಣವಾಗಿ ಭಾರತೀಯ ನೋಟದಲ್ಲಿ ಕಾಣಿಸಿಕೊಂಡಿದ್ದಾರೆ. ಇದಲ್ಲದೇ ಡಬಲ್ ಲೇಯರ್ ಮುತ್ತಿನ ಹಾರ ಸೌಂದರ್ಯವನ್ನು ಇಮ್ಮಡಿಗೊಳಿಸುತ್ತಿದೆ.

Nita Ambani Saree
Nita Ambani Saree

ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಅವರ ಕೂಟಕ್ಕೆ ನೀತಾ ಅಂಬಾನಿ ಗುಲಾಬಿ ಬಣ್ಣದ ಸೀರೆಯನ್ನು ಧರಿಸಿದ್ದರು. ಪಟಾನ್ ಜಿಲ್ಲೆಯ ಈ ಪ್ರಸಿದ್ಧ ಪಟೋಲಾ ಸೀರೆಯನ್ನು ರಿಲಯನ್ಸ್ ಫೌಂಡೇಶನ್‌ನಲ್ಲೇ ತಯಾರಿಸಲಾಗಿದೆ. ಅಲ್ಲಿ ಭಾರತೀಯ ಕಲೆ ಮತ್ತು ಕರಕುಶಲಗಳನ್ನು ಪ್ರಚಾರ ಮಾಡಲಾಗುತ್ತದೆ. ಈ ಸೀರೆ ತಯಾರಿಸಲು 6 ತಿಂಗಳು ಬೇಕಾಯಿತು. ಓಪನ್ ಹೇರ್ ಸ್ಟೈಲ್ ನಲ್ಲಿ ನೀತಾ ಅಂಬಾನಿ ತುಂಬಾ ಸುಂದರವಾಗಿ ಕಾಣುತ್ತಿದ್ದರು” ಎಂದಿದೆ. ಅಂದಹಾಗೆ, ನೀತಾ ಅಂಬಾನಿ (Nita Ambani) ಧರಿಸಿದ ಈ ಅದ್ಭುತ ಸೀರೆಯ ಬೆಲೆ ಸುಮಾರು ಮೂರು ಕೋಟಿ ರೂಪಾಯಿ ಎನ್ನಲಾಗುತ್ತಿದೆ.