ನಟ ರಿಷಬ್ ಶೆಟ್ಟಿ ಪತ್ನಿ ಪ್ರಗತಿ ಶೆಟ್ಟಿ ಪಿಂಕ್ ಡ್ರೆಸ್ನಲ್ಲಿ ಕಂಗೊಳಿಸಿದ್ದಾರೆ. ಕಾಂತಾರದ ರಾಣಿ ಸೋ ಕ್ಯೂಟ್ ಎಂದು ಅಭಿಮಾನಿಗಳು ಹೇಳಿದ್ದಾರೆ.
ನಟ ರಿಷಬ್ ಶೆಟ್ಟಿ ಪತ್ನಿ ಪ್ರಗತಿ ಶೆಟ್ಟಿ ಪಿಂಕ್ ಡ್ರೆಸ್ ಹಾಕಿಕೊಂಡಿರುವ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ. ನೋಡೋಕೆ ಸಖತ್ ಕ್ಯೂಟ್ ಆಗಿ ಕಾಣ್ತಾ ಇದ್ದಾರೆ.
ಇತ್ತೀಚೆಗೆ ಕಾಂತಾರ ಸಿನಿಮಾ ಅವಾರ್ಡ್ ಬಂದಿತ್ತು. ಅದನ್ನು ಸ್ವೀಕರಿಸಲು ಈ ರೀತಿ ರೆಡಿಯಾಗಿದ್ದರು. ನಟಿ ಪ್ರಗತಿ ಶೆಟ್ಟಿ ಫೋಟೋಗಳನ್ನು ನೋಡಿ ಅಭಿಮಾನಿಗಳು ಮೆಚ್ಚಿಕೊಂಡಿದ್ದಾರೆ.
ಡ್ರೆಸ್ ಗೆ ತಕ್ಕಂತೆ ಹೇರ್ ಸ್ಟೈಲ್ ಮಾಡಿ, ಅದಕ್ಕೆ ಮಲ್ಲಿಗೆ ಹೂವು ಮುಡಿದಿದ್ದಾರೆ. ಚೆಂದದ ನಗು ಬೀರಿ ಫೋಟೋಗೆ ಪೋಸ್ ಕೊಟ್ಟಿದ್ದಾರೆ. ಎಲ್ಲಾ ಫೋಟೋಗಳಲ್ಲಿ ಕಾಂತಾರ ರಾಣಿ ಸೂಪರ್ ಆಗಿದ್ದಾರೆ.
ಪ್ರಗತಿ ಶೆಟ್ಟಿ ಶೇರ್ ಮಾಡಿರುವ ಫೋಟೋಗಳಿಗೆ 9 ಸಾವಿರಕ್ಕೂ ಹೆಚ್ಚು ಲೈಕ್ಸ್ ಬಂದಿವೆ. ತುಂಬಾ ಮುದ್ದಾಗಿ ಕಾಣ್ತೀರಿ ಅತ್ತಿಗೆ. ಬ್ಯೂಟಿಫುಲ್, ಸೂಪರ್ ಶೆಟ್ರೆ, ಕ್ಯೂಟ್, ಹೆಮ್ಮೆಯ ಕನ್ನಡತಿ ಎಂದು ಅಭಿಮಾನಿಗಳು ಹೇಳಿದ್ದಾರೆ.
ಪ್ರಗತಿ ಶೆಟ್ಟಿ ರಿಷಬ್ ಶೆಟ್ಟಿಯವರನ್ನು ಮದುವೆ ಆಗಿ 6 ವರ್ಷ ಆಗಿದೆ. ಮಗ ರಣ್ವಿತ್ ಹಾಗೂ ಮಗಳು ರಾಧ್ಯ ಜೊತೆ ಖುಷಿಯಾದ ಜೀವನ ನಡೆಸುತ್ತಿದ್ದಾರೆ. ರಿಷಬ್ ಶೆಟ್ಟಿ ಕುಟುಂಬಕ್ಕೂ ಹೆಚ್ಚು ಸಮಯ ಕೊಡ್ತಾರೆ.
ಪ್ರಗತಿ ಶೆಟ್ಟಿ ಮೊದಲು ರಿಷಬ್ ಶೆಟ್ಟಿಯವರ ಅಭಿಮಾನಿ. ಥಿಯೇಟರ್ ಬಳಿ ಸೆಲ್ಫಿ ತೆಗೆದುಕೊಂಡ ಜೋಡಿ, ನಿಜ ಜೀವನದಲ್ಲಿ ಸತಿ ಪತಿಯಾಗಿ ಸಂಸಾರ ಸಾಗಿಸುತ್ತಿದ್ದಾರೆ. ಇಬ್ಬರದ್ದು ಪರ್ಫೆಕ್ಟ್ ಜೋಡಿ ಎಂದು ಎಲ್ಲರೂ ಹೇಳಿದ್ದಾರೆ.
ರಿಷಬ್ ಶೆಟ್ಟಿ ಅವರಿಗೆ ಪ್ರಗತಿ ಶೆಟ್ಟಿ ಸದಾ ಬೆಂಬಲವಾಗಿ ನಿಂತಿದ್ದಾರೆ. ಅವರ ನೋವು-ನಲಿವಿನಲ್ಲಿ ಜೊತೆಗಿದ್ದಾರೆ. ಎಲ್ಲಾ ಕೆಲಸಕ್ಕೂ ಬೆಂಬಲವಾಗಿ ನಿಲ್ತಾರೆ. ಕಾಂತಾರದಲ್ಲೂ ನಟಿಸಿದ್ದಾರೆ. ರಾಣಿ ಪಾತ್ರ ಮಾಡಿದ್ದಾರೆ.
ಪ್ರೀತಿಸಿ ಮದುವೆಯಾದ ಜೋಡಿ ಬೇರೆಯವರಿಗೆ ಮಾದರಿ ಆಗುವಂತೆ ಬದುಕುತ್ತಿದ್ದಾರೆ. ನಿಮ್ಮ ಸುಖಿ ಸಂಸಾರ ಸದಾ ಹೀಗೆ ಇರಲಿ ಎಂದು ಅಭಿಮಾನಿಗಳು ವಿಶ್ ಮಾಡ್ತಾ ಇರ್ತಾರೆ. ಪ್ರಗತಿ ಶೆಟ್ಟಿಗೆ 85.8 ಕೆ ಫಾಲೋವರ್ಸ್ ಇದ್ದಾರೆ.