Puneeth Rajkumar ಪವರ್ ಸ್ಟಾರ್ ಪುನೀತ್ ರಾಜಕುಮಾರ್(Power Star Puneeth Rajkumar) ರವರು ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಸಿನಿಮಾದಲ್ಲಿ ಹೇಗೆ ಕ್ಲಾಸ್ ಆಗಿ ಕಾಣಿಸಿಕೊಳ್ಳುತ್ತಿದ್ದರೋ ಅದೇ ರೀತಿ ನಿಜ ಜೀವನದಲ್ಲಿ ಕೂಡ ತಮ್ಮ ಪತ್ನಿ ಹಾಗೂ ಮಕ್ಕಳಿಗಾಗಿ ಪಕ್ಕ ಫ್ಯಾಮಿಲಿ ಮ್ಯಾನ್ ಆಗಿ ಕಾಣಿಸಿಕೊಳ್ಳುತ್ತಿದ್ದರು. ಅಷ್ಟರ ಮಟ್ಟಿಗೆ ಕುಟುಂಬದ ಕುರಿತಂತೆ ಪ್ರಾಮುಖ್ಯತೆಯನ್ನು ಅಪ್ಪು ಹೊಂದಿದ್ದರು. ಇದರಲ್ಲಿ ಎರಡು ಮಾತಿಲ್ಲ ಎಂಬುದನ್ನು ಯಾವುದೇ ಅನುಮಾನವಿಲ್ಲದೆ ಹೇಳಬಹುದಾಗಿದೆ.
ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ನಾಯಕನಾಗಿ ಈಗಾಗಲೇ 29 ಅಧಿಕ ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದು ಪ್ರತಿಯೊಂದು ಸಿನಿಮಾಗಳು ಕೂಡ ಅದರದ್ದೇ ಆದ ರೀತಿಯಲ್ಲಿ ಸಮಾಜಕ್ಕೆ ಒಳ್ಳೆಯ ಸಂದೇಶಗಳನ್ನು ನೀಡಲು ಬಿಡುಗಡೆಯಾಗಿದ್ದವು. ಇನ್ನು ಪುನೀತ್ ರಾಜಕುಮಾರ್ ಅವರು ಅಶ್ವಿನಿ ಪುನೀತ್ ರಾಜಕುಮಾರ್(Ashwini Puneeth Rajkumar) ಅವರನ್ನು ಪ್ರೀತಿಸಿ ಮದುವೆಯಾಗಿದ್ದರು ಎನ್ನುವುದು ನಿಮಗೆಲ್ಲರಿಗೂ ತಿಳಿದಿರುವ ವಿಚಾರ.
ಪುನೀತ್ ರಾಜಕುಮಾರ್ ಅವರು ಅಕಾಲಿಕವಾಗಿ ನಮ್ಮನ್ನೆಲ್ಲ ಆಗಲಿ ಹೋಗಿರುವುದು ನಿಜಕ್ಕೂ ಕೂಡ ಅಭಿಮಾನಿಗಳಾದ ನಮಗೆ ಇಷ್ಟೊಂದು ದುಃಖವನ್ನು ತಂದಿದೆ ಎಂದರೆ ಅವರ ಕುಟುಂಬದವರಿಗೆ ಹಾಗೂ ಹೆಂಡತಿ ಮಕ್ಕಳಿಗೆ ಯಾವ ರೀತಿ ದುಃಖವನ್ನು ನೀಡಿರಬೇಡ ಎಂಬುದನ್ನು ನೀವೇ ಅಂದಾಜು ಮಾಡಿಕೊಳ್ಳಿ.
ಇನ್ನು ನಿನ್ನೆ ಪುನೀತ್ ರಾಜಕುಮಾರ್ ಅವರ ಸಮಾಧಿಗೆ ಅವರ ಮಗಳಾಗಿರುವಂತಹ ವಂದಿತ ಅಪ್ಪಂದಿರ ದಿನಾಚರಣೆಯ ವಿಶೇಷ ದಿನ ಆಗಿರುವ ಕಾರಣಕ್ಕಾಗಿ ಪೂಜೆ ಸಲ್ಲಿಸಿ ಆಶೀರ್ವಾದವನ್ನು ಪಡೆದುಕೊಂಡು ಹೋಗಿರುವ ದೃಶ್ಯಗಳು ಕ್ಯಾಮೆರಾ ಕಣ್ಣಿಗೆ ಕಂಡು ಬಂದಿದ್ದು ಎಲ್ಲರೂ ಕೂಡ ಅಪ್ಪು(Appu) ಅವರ ಮಗಳ ಸಂಸ್ಕಾರವನ್ನು ನೋಡಿ ಮೆಚ್ಚಿಕೊಂಡಿದ್ದಾರೆ. ಈ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ನಮ್ಮೊಂದಿಗೆ ಹಂಚಿಕೊಳ್ಳಬಹುದಾಗಿದೆ. ಇದನ್ನೂ ಓದಿ ಅಂಬಿ ಮನೆ ಸೊಸೆ ಮುದ್ದೆ ತಿನ್ನುತ್ತಾರಾ? ಎಂದು ಕೇಳಿದ್ದಕ್ಕೆ ಅಭಿಷೇಕ್ ಕೊಟ್ಟ ಉತ್ತರ ಹೇಗಿತ್ತು ಗೊತ್ತಾ?