Rishab Shetty Wife : ಸ್ನೇಹಿತರೆ, ನಟ ರಿಷಬ್ ಶೆಟ್ಟಿ ಯಾರಿಗೆ ತಾನೇ ಗೊತ್ತಿಲ್ಲ ಕಾಂತಾರ ಚಿತ್ರದ ಮೂಲಕ ಇಡೀ ದೇಶವೇ ಕನ್ನಡ ಚಿತ್ರವನ್ನು ಹಾಡಿ ಹೋಗಳುವಂತೆ ಮಾಡಿದ ಅದ್ಬುತ ನಟ, ರೀಷಬ್ ಶೆಟ್ಟಿ ಅವರ ಪತ್ನಿ ಪ್ರಗತಿ ಶೆಟ್ಟಿ ಇವರು ಕೂಡ ಯಾವ ನಟಿಯರಿಗಿಂತ ಕಡಿಮೆ ಇಲ್ಲ ಅಷ್ಟು ಸುಂದರವಾಗಿದ್ದಾರೆ. ಹೌದು (Pragathi Shetty) ಮೂಲತ ಕುಂದಾಪುರದವರು ರೀಷಬ್ ಶೆಟ್ಟಿ ಅವರನ್ನು ಮದುವೆ ಆಗಿರುವ ಇವರಿಗೆ ಇಬ್ಬರು ಮುದ್ದಾದ ಮಕ್ಕಳಿದ್ದಾರೆ ಸುಂದರ ಕುಟುಂಬ ಇವರದ್ದು.
ಪ್ರಗತಿ ಶೆಟ್ಟಿ ಕೂಡ (kaantaara) ಚಿತ್ರದಲ್ಲಿ ಚಿಕ್ಕ ಪ್ರಾತ್ರವೊಂದನ್ನು ತುಂಬಾ ಅಚ್ಚುಕಟ್ಟಾಗಿ ಮಾಡಿದ್ದಾರೆ. ಹಾಗೆ ವಿಭಿನ್ನ ಚಿತ್ರಗಳನ್ನು ಕನ್ನಡ ಚಿತ್ರರಂಗಕ್ಕೆ ಪರಿಚಯಿಸಿ ಭರವಸೆಯ ನಟನೆಂದು ಗುರುತಿಸಿಕೊಂಡಿರುವ ರಕ್ಷಿತ್ ಶೆಟ್ಟಿ ಕೂಡ ಇವರ ಕುಟುಂಬಕ್ಕೆ ತುಂಬಾ ಆತ್ಮೀಯರು. ಪ್ರಗತಿ ಶೆಟ್ಟಿ ಅವರು ರೀಷಬ್ ಶೆಟ್ಟಿ ಅವರನ್ನು ಅಣ್ಣ ಎಂದು ಕರೆಯುತ್ತಾರೆ. ಮೊನ್ನೆ ತಾನೆ ತನ್ನ ಹುಟ್ಟುಹಬ್ಬ ಆಚರಿಸಿಕೊಂಡ ನಟ (Rakshit Shetty) ಗೆ, ವಿಶೇಷವಾಗಿ ಪ್ರಗತಿ ಶೆಟ್ಟಿ ವಿಶ್ ಮಾಡಿದ್ದಾರೆ.
ಹೌದು ರಕ್ಷಿತ್ ಶೆಟ್ಟಿ ಜೊತೆಗೆ ಇರುವ ಕೆಲವೊಂದು ಫೋಟೋಗಳನ್ನು ಹಂಚಿಕೊಂಡ ಪ್ರಗತಿ ಶೆಟ್ಟಿ “ನಾನು ಯಾವಾಗಲೂ ಮೊದಲನೆಯದಾಗಿ ನನ್ನ ಭಾವನೆಗಳನ್ನು ಹಂಚಿಕೊಳ್ಳುವ ಇಷ್ಟಪಡುವ ವ್ಯಕ್ತಿ ರಕ್ಷಿತ್ ಶೆಟ್ಟಿ, ಅದು ಸಂತೋಷ ಅಥವಾ ದುಃಖದ ಏನೇ ಆಗಲಿ, ನಾವು ಎಲ್ಲದರ ಬಗ್ಗೆ ಗಂಟಗಟ್ಟಲೆ ಮಾತಾಡುತ್ತೇವೆ ಅದು ಗಾಸಿಪ್ ಆಗಿರಲಿ, ಸಿನಿಮಾ ವಿಷಯ ಅಥವಾ ಆಧ್ಯಾತ್ಮಿಕತೆ, ನಾನು ರಕ್ಷಿತ್ ಇಂದಲೇ ಆಧ್ಯಾತ್ಮದಲ್ಲಿ ಆಸಕ್ತಿ ಬೆಳೆಸಿಕೊಂಡೆ.
ಆತ ಯಾವಾಗಲೂ ನನ್ನ ಕೆಲಸದಲ್ಲಿ ಬೆಂಬಲವಾಗಿ ನಿಲ್ಲುತ್ತಾನೆ, ಜನ್ಮ ದಿನದ ಶುಭಾಶಯಗಳು ಚಿಂಟು ಅಣ್ಣ” ಎಂದು ವಿಶ್ ಮಾಡಿದ್ದಾರೆ. ಈ ಪೋಸ್ಟ್ ಈಗ ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಮೆಚ್ಚುಗೆ ಪಡೆದು ಎಲ್ಲರ ಮೆಚ್ಚುಗೆ ಪಡೆದಿದೆ ಪ್ರಗತಿ ಶೆಟ್ಟಿ ಹಂಚಿಕೊಂಡಿರುವ ಫೋಟೋಸ್ ಇಲ್ಲಿವೆ. ಇವರ ಈ ಅಣ್ಣ ತಂಗಿ ಪ್ರೀತಿ ಎಂದಿಗೂ ಹೀಗೆ ಇರಲಿ ಎಂದು ಹಾರೈಸೋಣ.