Delhi Metro Viral Video: ದೆಹಲಿ ಮೆಟ್ರೋದಲ್ಲಿ ಜೋಡಿಯೊಂದು ಚುಂಬಿಸುತ್ತಿರುವ ವಿಡಿಯೋ ಇದೀಗ ವೈರಲ್ ಆಗಿದೆ. ಈ ಬಗ್ಗೆ ದೆಹಲಿ ಮೆಟ್ರೋ ಕೂಡ ಉತ್ತರ ನೀಡಿದೆ. ಕಳೆದ ಕೆಲವು ದಿನಗಳಲ್ಲಿ, ದೆಹಲಿ ಮೆಟ್ರೋದಿಂದ ನಿರಂತರವಾಗಿ ಇಂತಹ ಅನೇಕ ವಿಡಿಯೋಗಳು ವೈರಲ್ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ. ಆ ಬಗ್ಗೆ ಅನೇಕರು ಅಸಮಾಧಾನ ಕೂಡ ಹೊರ ಹಾಕುತ್ತಿದ್ದಾರೆ. ಹೀಗಿರುವಾಗ ಈ ವೈರಲ್ ವಿಡಿಯೋ ಮತ್ತೆ ಸಾಮಾಜಿಕ ಜಾಲತಾಣದಲ್ಲಿ ಜನರ ಆಕ್ರೋಶಕ್ಕೆ ಕಾರಣವಾಗಿದೆ. ಈ ಕುರಿತು ದೆಹಲಿ ಮೆಟ್ರೋ ನೀಡಿರುವ ಉತ್ತರ ಕೂಡ ವೈರಲ್ ಆಗುತ್ತಿದೆ.
ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿರುವ ಈ ವಿಡಿಯೋ ಹಳದಿ ಮೆಟ್ರೋ ಮಾರ್ಗದಲ್ಲಿ ಸೆರೆ ಹಿಡಿದಿರುವುದು ಎಂದು ಹೇಳಲಾಗುತ್ತಿದೆ. ಈ ವಿಡಿಯೋದಲ್ಲಿ ಜೋಡಿಯು ಸೀಟಿನಲ್ಲಿ ಕುಳಿತು ಪರಸ್ಪರ ಚುಂಬಿಸುತ್ತಿರುವುದನ್ನು ಕಾಣಬಹುದು. ಈ ಜೋಡಿಗಳು ಚುಂಬಿಸುತ್ತಿದ್ದ ಕೋಚ್‌ನಲ್ಲಿ ಬೇರೆ ಜನರು ಸಹ ಕುಳಿತಿರುವುದು ವಿಡಿಯೋದಲ್ಲಿ ನೋಡಬಹುದು. ಮೆಟ್ರೋದಲ್ಲಿ ಕುಳಿತಿದ್ದ ವ್ಯಕ್ತಿಯೊಬ್ಬರು ಈ ವಿಡಿಯೋ ಮಾಡಿ ಸಾಮಾಜಿಕ ಮಾಧ್ಯಮದಲ್ಲಿ ಹಾಕಿದ್ದಾರೆ. ಈ ಬಗ್ಗೆ ದೆಹಲಿ ಮೆಟ್ರೋ ಆಡಳಿತವನ್ನು ಟ್ರೋಲ್ ಮಾಡಲಾಗುತ್ತಿದೆ. ಈ ವಿಡಿಯೋ ಕುರಿತು ದೆಹಲಿ ಮೆಟ್ರೋ ಹೇಳಿಕೆ ನೀಡಿದೆ. “ನಮಸ್ತೆ. ಅನಾನುಕೂಲತೆಗಾಗಿ ವಿಷಾದಿಸುತ್ತೇವೆ. HUDA ಸಿಟಿ ಸೆಂಟರ್‌ನಲ್ಲಿ ಪರಿಶೀಲಿಸಲಾಗಿದ್ದು, ಅಂತಹ ಯಾವುದೇ ಪ್ರಯಾಣಿಕರು ಕಂಡುಬಂದಿಲ್ಲ..” ಎಂದು ದೆಹಲಿ ಮೆಟ್ರೋ ಸ್ಪಷ್ಟನೆ ನೀಡಿದೆ. ಇದಕ್ಕೂ ಮುನ್ನ ದೆಹಲಿ ಮೆಟ್ರೋದಲ್ಲಿ ನಡೆದ ಅನೇಕ ಅಶ್ಲೀಲ ಕೆಲಸಗಳ ವಿಡಿಯೋಗಳು ವೈರಲ್ ಆಗಿವೆ.
Scenes at #DelhiMetro #yellowline adjacent to T2C14 towards HUDA City center @OfficialDMRC @DCP_DelhiMetro @DelhiPolice @ArvindKejriwal pic.twitter.com/A2N9LuVQDE
— Bhagat S Chingsubam (@Kokchao) June 17, 2023
ಮೂರು ದಿನಗಳ ಹಿಂದೆ ದೆಹಲಿ ಮೆಟ್ರೋದಲ್ಲಿ ಹುಡುಗಿಯೊಬ್ಬಳು ತನ್ನ ಕೂದಲನ್ನು ಸ್ಟ್ರೈಟ್‌ನರ್‌ನಿಂದ ಸ್ಟ್ರೈಟ್ ಮಾಡುತ್ತಿರುವ ವಿಡಿಯೋ ವೈರಲ್ ಆಗಿತ್ತು. ಮೆಟ್ರೋದಲ್ಲಿ ಜನಜಂಗುಳಿಯ ನಡುವೆ ಈ ಹುಡುಗಿ ಕೋಚ್‌ನ ಪ್ಲಗ್ ಪಾಯಿಂಟ್‌ನಲ್ಲಿ ಸ್ಟ್ರೈಟ್‌ನರ್ ಹಾಕಿಕೊಂಡು ತಲೆಗೂದಲನ್ನು ಸ್ಟ್ರೈಟ್ ಮಾಡುತ್ತಿದ್ದಳು. ಇದಕ್ಕೂ ಮೊದಲು, ಮೆಟ್ರೋದಲ್ಲಿ ರೀಲ್ ಮಾಡುವ ಅನೇಕ ವಿಡಿಯೋಗಳು ವೈರಲ್ ಆಗಿದ್ದವು, ಇದರಿಂದಾಗಿ ಪ್ರಯಾಣಿಕರು ಸಾಕಷ್ಟು ಸಮಸ್ಯೆಗಳನ್ನು ಎದುರಿಸಬೇಕಾಯಿತು. ಇದರಿಂದಾಗಿ ದೆಹಲಿ ಮೆಟ್ರೋ ಮಾರ್ಗಸೂಚಿಯನ್ನೂ ಹೊರಡಿಸಿತ್ತು. ಅಶ್ಲೀಲತೆಯನ್ನು ಹರಡುವ ಅಥವಾ ಇತರರಿಗೆ ತೊಂದರೆ ಉಂಟುಮಾಡುವ ಯಾವುದೇ ಕೆಲಸ ಅಪರಾಧ ಎಂದು ಇದರಲ್ಲಿ ಹೇಳಲಾಗಿದೆ.
Scenes at #DelhiMetro #yellowline adjacent to T2C14 towards HUDA City center @OfficialDMRC @DCP_DelhiMetro @DelhiPolice @ArvindKejriwal pic.twitter.com/A2N9LuVQDE
— Bhagat S Chingsubam (@Kokchao) June 17, 2023