Watch Video: ಹನಿಮೂನ್ ವಿಡಿಯೋ ಶೇರ್ ಮಾಡಿದ ನವಜೋಡಿ: ಸ್ವಿಮ್ಮಿಂಗ್ ಪೂಲ್’ನಲ್ಲಿ ನಡೆಯಿತು…!

Honeymoon Viral Video: ಇಂದಿನ ಯುಗದಲ್ಲಿ ಸಾಮಾಜಿಕ ಮಾಧ್ಯಮವು ಜನರ ಜೀವನದ ಒಂದು ಭಾಗವಾಗಿದೆ. ಸಣ್ಣ ಪುಟ್ಟ ವಿಷಯಗಳನ್ನೂ ಸಹ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಾರೆ. ತೆರೆಮರೆಯಲ್ಲಿ ಕೆಲಸ ಮಾಡುತ್ತಿದ್ದ ಅದೆಷ್ಟೋ ಮಂದಿ ಸೋಶಿಯಲ್ ಮೀಡಿಯಾ ಪ್ರಭಾವದಿಂದ ರಾತ್ರೋರಾತ್ರಿ ‘ವೈರಲ್’ ಸ್ಟಾರ್  ಗಳೂ ಸಹ ಆಗಿದ್ದಾರೆ. ಆದರೆ ಅನೇಕ ಬಾರಿ ಇದಕ್ಕೆ ವಿರುದ್ಧವಾಗಿ ಜನರ ವೈಯಕ್ತಿಕ ಜೀವನದ ಮೇಲೆ ಭಾರೀ ಟೋಲ್ ಗಳನ್ನು ಮಾಡಲಾಗುತ್ತದೆ.

ಇದೀಗ ಅಂತಹದ್ದೇ ಒಂದು ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ಇದರಲ್ಲಿ ವಧು-ವರರು ತಮ್ಮ ಹನಿಮೂನ್‌ ನಲ್ಲಿರುವ ದೃಶ್ಯ ಕಾಣಿಸುತ್ತಿದೆ.

ಸೋಷಿಯಲ್ ಮೀಡಿಯಾದಲ್ಲಿ ಫೇಮಸ್ ಆಗಲು ಜನರು ಪ್ರತಿದಿನ ಏನಾದರು ವಿಚಿತ್ರಗಳನ್ನು ಮಾಡುತ್ತಲೇ ಇರುತ್ತಾರೆ. ಈ ವೀಡಿಯೋ ಅಂತರ್ಜಾಲದಲ್ಲಿ ಸಾಕಷ್ಟು ಲೈಕ್ ಆಗುತ್ತಿದೆ. ಈ ವೀಡಿಯೊದಲ್ಲಿ ವರ ತನ್ನ ಮಡದಿಗಾಗಿ ಸರ್ಪೈಸ್ ಪ್ಲಾನ್ ಮಾಡಿದ್ದು, ಸಖತ್ ಮುದ್ದಾಗಿದೆ.

ಮದುವೆ ಸೀಸನ್ ಬಂತೆಂದರೆ ಸಾಮಾಜಿಕ ಜಾಲತಾಣಗಳಲ್ಲಿ ಎಷ್ಟು ಬಗೆಯ ವಿಡಿಯೋಗಳು ವೈರಲ್ ಆಗುತ್ತವೆಯೋ ಗೊತ್ತಿಲ್ಲ. ಎಲ್ಲರೂ ಫೇಮಸ್ ಆಗಬೇಕು ಅಂತಾ ಏನೇನೋ ಪ್ಲಾನ್ ಗಳನ್ನು ಮಾಡುತ್ತಿರುತ್ತಾರೆ. ಇಂದು ನಾವು ಹೇಳಹೊರಟಿರುವುದು ಹನಿಮೂನ್ ವಿಡಿಯೋದ ಬಗ್ಗೆ.

ಮದುವೆಯಾದ ಹೊಸದರಲ್ಲಿ ವಧು-ವರ ಮಧುಚಂದ್ರಕೆ ಹೋಗುವುದು ಸಾಮಾನ್ಯ. ಅಂತೆಯೇ ಈ ಜೋಡಿ ಸಹ ತಮ್ಮ ಮಧುಚಂದ್ರದ ವಿಡಿಯೋವನ್ನು ರೆಕಾರ್ಡ್ ಮಾಡಿದ್ದಾರೆ. ಬಳಿಕ ಅದನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿದ್ದಾರೆ.

ಇಂಟರ್‌ನೆಟ್‌ ನಲ್ಲಿ ವೈರಲ್ ಆಗಿರುವ ಈ ವಿಡಿಯೋದಲ್ಲಿ ಹೋಟೆಲ್‌ ನ ಈಜುಕೊಳವನ್ನು ಸುಂದರವಾಗಿ ಅಲಂಕರಿಸಿರುವುದು ಕಂಡುಬಂದಿದೆ. ಅದರಲ್ಲಿ ವಧುವಿಗೆ ಸುಂದರವಾದ ಸಂದೇಶವನ್ನೂ ಬರೆಯಲಾಗಿದೆ. ಬಳಿಕ ಹುಡುಗ ಹುಡುಗಿಯನ್ನು ತನ್ನ ಈಜುಕೊಳಕ್ಕೆ ಕರೆದುಕೊಂಡು ಹೋಗುತ್ತಾನೆ. ನವ ವಧು ಬಿಳಿ ಉಡುಗೆಯಲ್ಲಿ ತುಂಬಾ ಸುಂದರವಾಗಿ ಕಾಣುತ್ತಿದ್ದಾಳೆ. ವರನು ವಧುವಿನ ಜೊತೆ ರೊಮ್ಯಾಂಟಿಕ್ ಆಗಿ ಕಾಣಿಸಿಕೊಳ್ಳುತ್ತಾನೆ. ಇವರಿಬ್ಬರು ಕಿಸ್ ಮಾಡುತ್ತಾ ರೊಮ್ಯಾನ್ಸ್ ಮಾಡುತ್ತಿದ್ದಾರೆ. ಇಬ್ಬರ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ.