ನಟ ರಿಷಬ್ ಶೆಟ್ಟಿ (Rishab Shetty) ಅವರು ಸಿನಿಮಾದ ಬ್ಯುಸಿ ಕೆಲಸಗಳ ನಡುವೆ ಕುಟುಂಬಕ್ಕೆ ಸಮಯ ಕೊಡುವುದನ್ನು ಮಿಸ್ ಮಾಡುವುದಿಲ್ಲ. ರಿಷಬ್ ಶೆಟ್ಟಿ ಮತ್ತು ಪ್ರಗತಿ ಶೆಟ್ಟಿ ದಂಪತಿಯ ಮುದ್ದಿನ ಮಗಳಾದ ರಾಧ್ಯ ಶೆಟ್ಟಿಯ ಮೊದಲ ವರ್ಷದ ಹುಟ್ಟುಹಬ್ಬವನ್ನು (Raadhya Shetty birthday) ಮಾರ್ಚ್ 4ರಂದು ಆಚರಿಸಲಾಯಿತು. ಈ ಖುಷಿಯ ಕ್ಷಣದಲ್ಲಿ ಇಡೀ ಸ್ಯಾಂಡಲ್ವುಡ್ ಭಾಗಿ ಆಗಿತ್ತು ಎಂದರೂ ತಪ್ಪಿಲ್ಲ. ಬಹುತೇಕ ಎಲ್ಲ ಸ್ಟಾರ್ ನಟ-ನಟಿಯರು ರಾಧ್ಯ ಶೆಟ್ಟಿ (Raadhya Shetty) ಬರ್ತ್ಡೇ ಪಾರ್ಟಿಗೆ ಆಗಮಿಸಿದ್ದರು. ಆ ದಿನದ ಸಂಭ್ರಮ ಹೇಗಿತ್ತು ಎಂಬುದನ್ನು ತಿಳಿಸಲು ರಿಷಬ್ ಶೆಟ್ಟಿ ಅವರು ಒಂದು ವಿಡಿಯೋ ಹಂಚಿಕೊಂಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಈ ವಿಡಿಯೋ ವೈರಲ್ ಆಗಿದೆ. ಸೆಲೆಬ್ರಿಟಿಗಳು ಹಾಗೂ ಅಭಿಮಾನಿಗಳು ರಾಧ್ಯ ಶೆಟ್ಟಿಗೆ ಶುಭ ಕೋರಿದ್ದಾರೆ.
2022ರ ಮಾರ್ಚ್ 4ರಂದು ಪ್ರಗತಿ ಶೆಟ್ಟಿ ಅವರು ಹೆಣ್ಣು ಮಗುವಿಗೆ ಜನ್ಮ ನೀಡಿದರು. ಅದು ರಿಷಬ್ ಶೆಟ್ಟಿ ಅವರ ಪಾಲಿಗೆ ಅದೃಷ್ಟದ ವರ್ಷ. ಮಗಳ ಆಗಮನದ ಜೊತೆಗೆ ಅದೇ ವರ್ಷ ‘ಕಾಂತಾರ’ ಚಿತ್ರ ಕೂಡ ತೆರೆಕಂಡು ಬ್ಲಾಕ್ ಬಸ್ಟರ್ ಹಿಟ್ ಆಯಿತು. ಈಗ ಮಗಳ ಮೊದಲ ವರ್ಷದ ಹುಟ್ಟುಹಬ್ಬವನ್ನು ರಿಷಬ್ ಶೆಟ್ಟಿ ಅವರು ಬಹಳ ಅದ್ದೂರಿಯಾಗಿ ಆಚರಿಸಿದ್ದಾರೆ. ಚಂದನವನದ ಗಣ್ಯಾತಿಗಣ್ಯರನ್ನೆಲ್ಲ ಆಹ್ವಾನಿಸಿ ರಿಷಬ್ ಶೆಟ್ಟಿ ಔತಣ ನೀಡಿದ್ದಾರೆ.
ರವಿಚಂದ್ರನ್, ಅಶ್ವಿನಿ ಪುನೀತ್ ರಾಜ್ಕುಮಾರ್, ರಮೇಶ್ ಅರವಿಂದ್, ಗಣೇಶ್, ವಿಜಯ್ ಪ್ರಕಾಶ್, ವಿಜಯ್ ಕಿರಗಂದೂರು, ರಮ್ಯಾ, ಉಪೇಂದ್ರ, ಅಯ್ಯೋ ಶ್ರದ್ಧಾ, ಅವಿನಾಶ್, ಮಾಳವಿಕಾ, ಸುಧಾರಾಣಿ, ಧ್ರುವ ಸರ್ಜಾ, ಸಂತೋಷ್ ಆನಂದ್ ರಾಮ್, ಅರ್ಜುನ್ ಸರ್ಜಾ, ಪವನ್ ಕುಮಾರ್, ಸಪ್ತಮಿ ಗೌಡ, ತಪಸ್ವಿನಿ, ರಚನಾ ಇಂದರ್ ಸೇರಿದಂತೆ ಅನೇಕ ಸೆಲೆಬ್ರಿಟಿಗಳು ಈ ಖುಷಿಗೆ ಸಾಕ್ಷಿಯಾದರು. ಡಿಕೆ ಶಿವಕುಮಾರ್, ಸಿ.ಎನ್. ಅಶ್ವತ್ಥ ನಾರಾಯಣ ಸೇರಿದಂತೆ ಕೆಲವು ರಾಜಕೀಯ ಮುಖಂಡರು ಕೂಡ ಭಾಗಿಯಾದರು.
View this post on Instagram
‘ಕಾಂತಾರ 2’ ಚಿತ್ರಕ್ಕೆ ರಿಷಬ್ ಶೆಟ್ಟಿ ತಯಾರಿ:
ದೇಶಾದ್ಯಂತ ಅಬ್ಬರಿಸಿದ ‘ಕಾಂತಾರ’ ಸಿನಿಮಾದಿಂದ ರಿಷಬ್ ಶೆಟ್ಟಿ ಅವರು ಪ್ಯಾನ್ ಇಂಡಿಯಾ ಸ್ಟಾರ್ ಆಗಿದ್ದಾರೆ. ಅವರೀಗ ‘ಕಾಂತಾರ 2’ ಚಿತ್ರಕ್ಕಾಗಿ ತಯಾರಿ ಮಾಡಿಕೊಳ್ಳುತ್ತಿದ್ದಾರೆ. ಈ ವರ್ಷ ಮಳೆಗಾಲದಲ್ಲಿ ಶೂಟಿಂಗ್ ಆರಂಭ ಆಗುವ ಸಾಧ್ಯತೆ ಇದೆ. ಇದು ಪ್ರೀಕ್ವೆಲ್ ಆಗಿರಲಿದ್ದು, ರಿಷಬ್ ಶೆಟ್ಟಿ ಅವರು ಯಾವ ಕಥೆ ಹೇಳಲಿದ್ದಾರೆ ಎಂಬ ಕೌತುಕ ಮೂಡಿದೆ. ಅಲ್ಲದೇ ಪಾತ್ರವರ್ಗದಲ್ಲಿ ಯಾರೆಲ್ಲ ಇರಲಿದ್ದಾರೆ ಎಂಬ ಪ್ರಶ್ನೆಗೆ ಉತ್ತರ ತಿಳಿಯಲು ಫ್ಯಾನ್ಸ್ ಕಾದಿದ್ದಾರೆ.