ಡಿಕೆ ಶಿವಕುಮಾರ್ ಜೈಲಿನಲ್ಲಿದ್ದಾಗ ಅವರ ಮಗಳು ಐಶ್ವರ್ಯಾ ಮಾರುವೇಷದಲ್ಲಿ ದೆಹಲಿಗೆ ಹೋಗಿ ಅಪ್ಪನನ್ನು ನೋಡುವ ಪ್ರಯತ್ನ ಮಾಡಿದ್ದರಂತೆ. ಮುಂದೇನಾಯ್ತು? ಅವರೇ ವಿವರಿಸಿದ್ದಾರೆ.
ಡಿಕೆ ಶಿವಕುಮಾರ್ (DK Shivakumar) ಕಳೆದ ನಲವತ್ತು ವರ್ಷಗಳಿಂದಲೂ ರಾಜಕೀಯ ಜೀವನದಲ್ಲಿದ್ದಾರೆ. ಬಹುತೇಕ ಯಶಸ್ವಿ ರಾಜಕೀಯವನ್ನೇ ಮಾಡುತ್ತಾ ಬಂದಿರುವ ಡಿ.ಕೆ.ಶಿವಕುಮಾರ್ಗೆ ಜೀವನದ ದೊಡ್ಡ ಹಿನ್ನಡೆಯೆಂದರೆ ಇಡಿ (ED) ಪ್ರಕರಣದಲ್ಲಿ ಅನುಭವಿಸಿದ ಜೈಲು ವಾಸ. 2017 ರಲ್ಲಿ ಡಿ.ಕೆ.ಶಿವಕುಮಾರ್ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದರು. ಅದಾದ ಬಳಿಕ 2019ರಲ್ಲಿ ಇಡಿ ಅಧಿಕಾರಿಗಳು ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಅವರನ್ನು ಬಂಧಿಸಿ ದೆಹಲಿಯ ತಿಹಾರ್ ಜೈಲಿನಲ್ಲಿ ಇರಿಸಿದ್ದರು. ಅದು ಸ್ವತಃ ಡಿಕೆ ಶಿವಕುಮಾರ್ ಹಾಗೂ ಅವರ … Read more